ಸೆಲ್ಫಿ ತೊಗೋಳ್ಳಿ, ಕಾಂಗ್ರೆಸ್‌ಗೆ ಓಟ್ ಹಾಕಿ- ಡಿ.ಕೆ.ಶಿವಕುಮಾರ್

ಬೆಂಗಳೂರು: ಇಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವಿದ್ದು, ಅಪ್ಪುಗೆ ವಿಶ್ ಮಾಡಲು ಬಂದಿದ್ದ ಅಭಿಮಾನಿಗಳು, ಪಕ್ಕದ ಮನೆಯಲ್ಲಿದ್ದ ಡಿಕೆಶಿಯನ್ನು ಕಂಡು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ಪುನೀತ್ ಮನೆಗೆ ಅಭಿಮಾನಿಗಳು ಬರ್ತ್‌ಡೇ ವಿಶ್ ಮಾಡಲು ಆಗಮಿಸಿದ್ದು, ಪುನೀತ್ ಪಕ್ಕದ ಮನೆಯಲ್ಲಿದ್ದ ಡಿಕೆಶಿಯನ್ನು ನೋಡಿ, ಸೆಲ್ಫಿ ತೆಗೆದುಕೊಳ್ಳಲು ಹೋದಾಗ, ಸೆಲ್ಫಿ ತಗೊಳ್ಳಿ, ಆದ್ರೆ ಕಾಂಗ್ರೆಸ್‌ಗೆ ಓಟ್ ಹಾಕೋದನ್ನ ಮರೀಬೇಡಿ.

ಎಲ್ಲರೂ ಒಬ್ಬೊಬ್ಬರೇ ಬಂದು ಸೆಲ್ಪಿ ನನ್ನ ಜೊತೆ ತೆಗೆದುಕೊಳ್ಳಿ. ಆದರೆ ನೀವುಗಳು ಈ ಬಾರಿ ಕಾಂಗ್ರೆಸ್‌ಗೆ ಓಟ್ ಹಾಕಬೇಕು. ಡಿಕೆಶಿ ಈ ಮಾತಿಗೆ ಆಯ್ತು ಸರ್ ಈ ಬಾರಿ ಕಾಂಗ್ರೆಸ್ ಗೆ ನಮ್ಮ ಓಟು ಎಂದು ಹೇಳಿದರು.