‘ಮಗನಿಗೆ ಅರ್ಹತೆ ಇದ್ದರೆ ಅದು ಕುಟುಂಬ ರಾಜಕಾರಣ ಅಲ್ಲ’- ಪ್ರಕಾಶ್ ರೈ

ಬೆಂಗಳೂರು: ಮಂಡ್ಯ ಪ್ರಜೆಗಳು ಭಾರತ ಪ್ರಜೆಗಳಾಗಿ ಯೋಚನೆ ಮಾಡಬೇಕು ಎಂದು ಬೆಂಗಳೂರು ಕೇಂದ್ರದ ಲೋಕಸಭಾ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧಿ ವಿಚಾರವಾಗಿ ಮಾತನಾಡಿದ ಅವರು,  ಮಂಡ್ಯದ ಪ್ರಜೆಗಳು ಭಾರತ ಪ್ರಜೆಗಳಾಗಿ ಯೋಚನೆ ಮಾಡಬೇಕು ಸುಮಲತಾ ಸರಿಯಾದ ರೀತಿಯಲ್ಲಿ ಮಾತನಾಡುತ್ತಾ ಇದ್ದಾರೆ ಎಂದು ಪ್ರಕಾಶ್ ರೈ ಹೇಳಿದರು.

ಇನ್ನು ಸುಮಲತಾ ಅನುಭವಸ್ಥರ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರಿಗೆ ರಾಜಕೀಯ ಗೊತ್ತಿಲ್ಲ ಅಂತ ಹೇಳಕ್ಕಾಗಲ್ಲ, ಒಳ್ಳೆಯ ರಾಜಕೀಯ ಬೇಕು ಅಂತ ಹೇಳ್ತಾ ಇದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಸ್ಪರ್ಧೆ ನಡೆಸುವ ಹಕ್ಕು ಅವರಿಗಿದೆ ಎಂದು ತಿಳಿಸಿದರು.

ಸುಮಲತಾ ಅವರು ಅಂಬರೀಶ್ ಜೊತೆ ಇದ್ದವರು, ಮಂಡ್ಯದ ಸೊಸೆ, ನನಗೆ ಹಲವು ವರ್ಷಗಳಿಂದ ಪರಿಚಯ ಇದ್ದಾರೆ. ಸುಮಲತಾ ಅವರಿಗೆ ಬೆಂಬಲವಾಗಿ ನಾನು ಇದ್ದೀನಿ ಎಂದು ಸುಮಲತಾ ಸ್ಪರ್ಧಿಗೆ ಪ್ರಕಾಶ್ ರೈ ಬೆಂಬಲ ಸೂಚಿಸಿದ್ದಾರೆ.

ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರಕಾಶ್ ರೈ,  ನಿಖಿಲ್ ರಾಜಕೀಯಕ್ಕೆ ಇನ್ನು ಸ್ವಲ್ಪ ವಿಳಂಬವಾಗಿ ಎಂಟ್ರಿ ಕೊಡಬೇಕಾಗಿತ್ತು. ಅವರು ರಾಜಕೀಯಕ್ಕೆ ಬರುವ ವಯಸ್ಸಲ್ಲ ಇದು. ನಿಖಿಲ್ ಯುವಕರು, ಇನ್ನಷ್ಟು ಅನುಭವದ ಅಗತ್ಯ ಇದೆ ನಿಖಿಲ್ ಈಗಷ್ಟೇ ಸಿನಿಮಾ ರಂಗಕ್ಕೆ ಬಂದಿದ್ದಾರೆ ಇದನ್ನು ನಿಖಿಲ್​​ಗೆ ಪ್ರೀತಿಯಿಂದಲೇ ಹೇಳ್ತಿದೀನಿ ಎಂದರು.

ಅಲ್ಲದೆ ನಾನು ಕುಟುಂಬ ರಾಜಕಾರಣ ವಿಚಾರವಾಗಿ ಹೇಳೋದಾದ್ರೆ, ಮಗನಿಗೆ ಅರ್ಹತೆ ಇದ್ದರೆ ಅದು ಕುಟುಂಬ ರಾಜಕೀಯ ಅಲ್ಲ. ಕುಟುಂಬ ಎಂಬ ಕಾರಣಕ್ಕೆ ರಾಜಕೀಯಕ್ಕೆ ಬಂದರೆ ಕುಟುಂಬ ರಾಜಕೀಯ ಅದನ್ನು ಜನರು ನಿರ್ಧಾರ ಮಾಡುತ್ತಾರೆ ಎಂದು ಪ್ರಕಾಶ್ ರೈ ನುಡಿದರು.