ಲೋಕೋಪಯೋಗಿ ಸಚಿವ ರೇವಣ್ಣ ವಿರುದ್ಧ ಏಕವಚನದಲ್ಲಿ ವಾಗ್ದಾಳಿ

ಹಾಸನ: ಹಾಸನದ ಬೇಲೂರಿನಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ರೇವಣ್ಣ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ ಕಾಂಗ್ರೆಸ್‌ ಕಾರ್ಯಕರ್ತ, ಜೆಡಿಎಸ್‌ನಲ್ಲಿರುವ ಕೋಮುವಾದಿಗಳಿಗೆ ನನ್ನ ಧಿಕ್ಕಾರ. ಮುಸ್ಲೀಮ್ , ಹಾಗೂ ಎಸ್ಸಿ ಎಸ್ಟಿ ಜನಾಂಗಕ್ಕೆ ಇವರಿಂದ ಅನ್ಯಾಯವಾಗಿದೆ. ನಾವು ಇಲ್ಲಿ ಬಿಜೆಪಿ ಪಕ್ಷಕ್ಕೆ ಓಟು ಮಾಡುವುದಿಲ್ಲ. ಎ.ಮಂಜುಗೆ ಮತ ನೀಡುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

ಇನ್ನು ಮಾಜಿ ಸಚಿವ ಎ.ಮಂಜು, ಹಾಸನದಾದ್ಯಂತಭರ್ಜರಿ ಓಡಾಟ ನಡೆಸಿದ್ದು, ನಾಲ್ಕು ತಾಲೂಕಿನಲ್ಲೂ ಸಭೆ ನಡೆಸಿದ್ದಾರೆ. ಈ ಬಾರಿ ಎ.ಮಂಜು ಬಗ್ಗೆ ವಿಶ್ವಾಸವಿಟ್ಟಿರುವ ಕಾಂಗ್ರೆಸ್‌ ಕಾರ್ಯಕರ್ತರು ವಯಕ್ತಿಕವಾಗಿ ಎ.ಮಂಜುಗೆ ಓಟ್ ಮಾಡಲು ಮುಂದಾಗಿದ್ದಾರೆ.

Recommended For You

Leave a Reply

Your email address will not be published. Required fields are marked *