‘ನಮ್ಮ ಅಮ್ಮನಾಣೆ ನಾನು ಟಿಕೇಟ್ ತಪ್ಪಿಸಿಲ್ಲಾ’

ತುಮಕೂರು: ಸಂಸದ ಮುದ್ದಹನುಮೇಗೌಡಗೆ ಟಿಕೇಟ್ ಕೈತಪ್ಪಿದ ಹಿನ್ನೆಲೆ, ಜೆಡಿಎಸ್ ಮಾಜಿ ಶಾಸಕ ಹೆಚ್.ನಿಂಗಪ್ಪ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ.

ಹೆಚ್.ನಿಂಗಪ್ಪ, ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ನಮ್ಮ ಅಮ್ಮನಾಣೆ ನಾನು ಟಿಕೇಟ್ ತಪ್ಪಿಸಿಲ್ಲಾ. ಅವರ ಅದೃಷ್ಟ ಚೆನ್ನಾಗಿ 10 ವಷ೯ 5 ವಷ೯ ಸಂಸದರಾಗಿದ್ದಾರೆ. ಅವರ ಹಣೆ ಬರಹ ನಾನು ಕಿತ್ತುಕೊಳ್ಳಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ, ನನ್ನ ಹಣೆ ಬರಹ ಚೆನ್ನಾಗಿಲ್ಲಾ ನಾನು ಮಾಜಿಯಾಗಿದ್ದೇನೆ. ತುಮಕೂರಿನಲ್ಲಿ ಕಾಂಗ್ರೆಸ್ -ಜೆಡಿಎಸ್ ಒಟ್ಟಾಗಿ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ನವರಿಗೆ ನಾವು 20 ಕಡೆ ನಾವು ಬೆಂಬಲ ಕೊಡ್ತೀವಿ ಅವರು ನಮಗೆ 8 ಕಡೆ ಬೆಂಬಲ ಕೊಡ್ತಾರೆ. ದೇವೇಗೌಡ ಸ್ಫರ್ಧೆ ಬಗ್ಗೆ ಇನ್ನೆರಡು ದಿನಗಳಲ್ಲಿ ತೀರ್ಮಾನವಾಗುತ್ತದೆ ಎಂದು ಹೇಳಿದ್ದಾರೆ.

Recommended For You

Leave a Reply

Your email address will not be published. Required fields are marked *