ಸಾ.ರಾ.ಮಹೇಶ್ ಹೇಳಿಕೆಗೆ ಸಿಡಿಮಿಡಿಗೊಂಡ ಮಾಜಿ ಸಿಎಂ ಸಿದ್ದರಾಮಯ್ಯ

ಬೇರೆಯವರ ಮಾತಿಗೆಲ್ಲ ನಾನು ತಲೆಕೆಡಿಸಿಕೊಳ್ಳೊಲ್ಲ, ನಾವಿನ್ನು ಪ್ರಚಾರವನ್ನೆ ಶುರು ಮಾಡಿಲ್ಲ,
ಕೂಸು ಹುಟ್ಟೋಕು ಮುಂಚೆ ಕುಲಾವಿ ಬಗ್ಗೆ ಯಾಕೆ ಮಾತು, ಇನ್ನು ಸಭೆ ನಡೆಸಿ ಪ್ರಚಾರದ ರೂಪು ರೇಷೆ ಬಗ್ಗೆ ಚರ್ಚೆ ಮಾಡ್ತಿವಿ ಎಂದು  ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಮ್ಮಲ್ಲಿ ಪರಸ್ಪರ ನಂಬಿಕೆಯಿದೆ ಮೈತ್ರಿ ಮಾಡಿ ಮಾಡಿಕೊಂಡಿದ್ದೇವೆ

ಮೈಸೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌‌ ಕೈ ಕೊಡುವ ಸಚಿವ ಸಾ.ರಾ.ಮಹೇಶ್ ಹೇಳಿಕೆ ವಿಚಾರವಾಗಿ ಅವರು ಹೇಳಿರೋದು ಸರಿಯಿಲ್ಲ.
ನನ್ನ ಪ್ರಕಾರ ಸಾ.ರಾ.ಮಹೇಶ್ ಹೇಳಿಕೆ ತಪ್ಪು.ನಮ್ಮಲ್ಲಿ ಪರಸ್ಪರ ನಂಬಿಕೆಯಿದೆ. ಆದ್ದರಿಂದ ಮೈತ್ರಿ ಮಾಡಿ ಮಾಡಿಕೊಂಡಿದ್ದೇವೆ. ಎಲ್ಲದಕ್ಕೂ ನಂಬಿಕೆ ಇರಬೇಕು. ಈ ರೀತಿಯ ಹೇಳಿಕೆಗಳಿಂದ ನಂಬಿಕೆ ಹಾಳಾಗುತ್ತೆಎಂದರು.

ಮಹೇಶ್ ಹೇಳಿಕೆಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ

ನಾವು ಒಟ್ಟಾಗಿ ಕೆಲಸ ಮಾಡೋಲ್ಲ, ಅಲ್ಲಿ ಹಾಗಾಗುತ್ತೆ, ಹೀಗಾಗುತ್ತೆ ಅಂತ ಊಹೆ ಮಾಡಿಕೊಳ್ಳೋದು ತಪ್ಪು.
ಯಾಕೆ ಅದನ್ನೆಲ್ಲ ಊಹೆ ಮಾಡಿಕೊಳ್ಳಬೇಕು.? ಎಂದು ಮಹೇಶ್ ಹೇಳಿಕೆಗೆ ಸಿಡಿಮಿಡಿಗೊಂಡರು ಇನ್ನೂ
ನಂಬಿಕೆ ಬಗ್ಗೆ ದೇವೇಗೌಡರು, ಕುಮಾರಸ್ವಾಮಿ ಎಲ್ಲಿಯಾದರೂ ಮಾತನಾಡಿದ್ದಾರಾ..?
ಅವರು ಮಾತನಾಡಿದರೆ ಹೇಳಿ ಎಂದು ಹೇಳಿದರು.