ಚಿರತೆ ದತ್ತು ಪಡೆದ ನಟ ಚಿಕ್ಕಣ್ಣ ಮಾಡಿದ್ದೇನು ಗೊತ್ತಾ..?

ಸ್ಟಾರ್ ನಟರಿಗಿಂತಲೂ ಸದ್ಯ ಬೇಡಿಕೆಯಲ್ಲಿರುವ ನಟ ಹೆಸರು ಹೇಳಿದರೆ ಸಾಕು ನಗು ಉಕ್ಕುತ್ತದೆ. ಈ ನಟ ಇದ್ದರೆ ಅಲ್ಲಿ ಹಾಸ್ಯಕ್ಕೆ ಕೊರತೆಯಿಲ್ಲ. ತನ್ನ ಹಾಸ್ಯದ ಮೂಲಕವೇ ಪ್ರೇಕ್ಷಕನನ್ನು ನಗೆಗಡಲಲ್ಲಿ ತೇಲಿಸುವ ಶಕ್ತಿಯಿರುವ ನಟ ಚಿಕ್ಕಣ್ಣ ಇದೀಗ  ಪ್ರಾಣಿ ಪ್ರೀತಿ ಮೆರೆದಿದ್ದಾರೆ.

ದತ್ತು ಪಡೆದ ಚಿರತೆಗೆ ಭೈರ ಎಂದು ನಾಮಕರಣ

ಒಂದು ವರ್ಷದ ಅವಧಿಗೆ ಮೈಸೂರು ಮೃಗಾಲಯದಲ್ಲಿ ಚಿರತೆ ದತ್ತು ಪಡೆದ ಚಿಕ್ಕಣ್ಣ.35 ಸಾವಿರ ಹಣ ನೀಡಿ ಚಿರತೆಯನ್ನು ದತ್ತು ಪಡೆದಿದ್ದಾರೆ. ಇನ್ನೂ ದತ್ತು ಪಡೆದ ಚಿರತೆಗೆ ಭೈರ ಎಂದು ನಾಮಕರಣ ಮಾಡಿದ್ದಾರೆ.

ಸ್ನೇಹಿತರಿಂದ ಪ್ರಾಣಿಗಳ ದತ್ತು ಸ್ವೀಕಾರ

ಚಿಕ್ಕಣ್ಣ ಜೊತೆ ಹಲವು ಸ್ನೇಹಿತರಿಂದ ಪ್ರಾಣಿಗಳ ದತ್ತು ಸ್ವೀಕಾರ ಕೂಡ ನಡೆದಿದೆ. ಚಿಕ್ಕಣ್ಣ ಸ್ನೇಹಿತರಾದ ಸಿದ್ದೇಗೌಡ, ಮೋಹನ್ ಕುಮಾರ್, ತಿಮ್ಮಯ್ಯ, ಸೋಮುರಿಂದ ಹಲವು ಪ್ರಾಣಿಗಳನ್ನು ದತ್ತು ಸ್ವೀಕಾರ ಪಡೆಯಲಾಗಿದೆ. ಈ ಹಿಂದೆ ನಟ ದರ್ಶನ್ ಹಾಗೂ ಸೃಜನ್ ಸಹ ಪ್ರಾಣಿ ದತ್ತು ಸ್ವೀಕಾರ ಮಾಡಿದರು. ಇನ್ನೂ ಇದೀಗ ಪ್ರಾಣಿ ದತ್ತು ಸ್ವೀಕಾರ ಯೋಜನೆಯಡಿ ಚಿಕ್ಕಣ್ಣ ಸ್ನೇಹಿತರು ಪ್ರಾಣಿ ದತ್ತು ಪಡೆದಿದ್ದಾರೆ.