ಮಗನೂ ಕಾಣೆ, ಮನೆಯಲ್ಲಿದ್ದ ಒಂದು ಲಕ್ಷ ರೂ. ಕೂಡ ಕಾಣೆ..!?

ಬೆಂಗಳೂರು: ಬಾಲಕನೊಬ್ಬ ಶಾಲೆಗೆ ಹೋಗಿ, ಮರಳಿ ಬಾರದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಲ್ಲದೇ ಮನೆಯಲ್ಲಿದ್ದ ಒಂದು ಲಕ್ಷ ರೂಪಾಯಿ ಕೂಡ ಕಾಣದಾಗಿದೆ.

ನಂದಿನಿಲೇಔಟ್‌ನ ಆರ್‌ವಿಎಸ್‌ ಶಾಲೆಯ ಒಂಬತ್ತನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಕುಶಾಲ್ , ಫೆಬ್ರವರಿ 11ರಂದು ಶಾಲೆಗೆ ಹೋಗಿ ಬರ್ತೀನಿ ಎಂದು ಹೊರಟವನು ಮರಳಿ ಬರಲಿಲ್ಲ. ಕೂಲಿ ನಾಲಿ ಮಾಡಿ ಒಂದು ಲಕ್ಷ ರೂಪಾಯಿ ಕೂಡಿಟ್ಟಿದ್ದ ಪೋಷಕರ ಹಣವೂ ಕೂಡ ಕಾಣೆಯಾಗಿದೆ.

ಮಗನನ್ನು ಹುಡುಕುತ್ತ ಪೋಷಕರು ಬೀದಿ ಬೀದಿ ಅಲೆಯುತ್ತಿದ್ದು, ಕುಶಾಲ್ ಗಾಂಜಾ ಹುಡುಗರ ಸಹವಾಸದಲ್ಲಿ ಏನಾದ್ರೂ ಅನಾಹುತ ತಂದುಕೊಂಡನಾ ಎಂಬ ಪ್ರಶ್ನೆ ಉದ್ಭವಿಸಿದೆ. ಇನ್ನು ನಂದಿನಿ ಲೇಔಟ್ ಪೊಲೀಸರೂ ಕೂಡ ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.