ತುಪ್ಪದ ಬೆಡಗಿ ಕಣ್ಮುಂದೆ ಬಿಯರ್ ಬಾಟಲಲ್ಲಿ ಹೊಡೆದಾಟ..!

ಬೆಂಗಳೂರು: ಹೀರೋಯಿನ್​ಗಾಗಿ ಹೀರೋಗಳು ಫಿಲ್ಮ್​​​ಗಳಲ್ಲಿ ಹೊಡೆದಾಡೋದನ್ನು ನೋಡಿರ್ತಿರಿ. ಆದ್ರೆ ಈಗ ರಿಯಲ್ ಆಗಿಯೇ ರಿಲ್ ಕ್ಕಿಂತ ಒಂದು ಲೇವಲ್ ಜಾಸ್ತಿ ಹೊಡೆದಾಡಿದ ಘಟನೆ ಆಗಿದೆ. ಸ್ಯಾಂಡಲ್​​ವುಡ್​ನ ತುಪ್ಪದ ಬೆಡಗಿಗಾಗಿ ಇಬ್ಬರು ಜಬರ್​ದಸ್ತ್ ಆಸಾಮಿಗಳು ಬಡಿದಾಡಿಕೊಂಡಿದ್ದಾರೆ.

ಯಾವುದು ಸುಳ್ಳೋ ಯಾವುದು ಸತ್ಯವೋ ಗೊತ್ತಿಲ್ಲ ರಾಗಿಣಿಯವರ ಹೆಸರು ಚಿತ್ರರಂಗದ ಅನೇಕ ಹೆಸರುಗಳ ನಡುವೆ ತಳುಕು ಹಾಕಿಕೊಂಡು ಗಾಸಿಪ್ಪ ಮಲ್ಲರ ಹೊಟ್ಟೆ ತುಂಬಿಸುತ್ತಿತ್ತು. ಆದ್ರೆ ಈಗ ಬಾಲು ಬೌಂಡರಿ ದಾಟಿದೆ.. ರಾಗಿಣಿ ಹೆಸರು ಉದ್ಯಮಿಗಳ ಹೆಸರಿನ ನಡುವೆ ತಳುಕು ಹಾಕಿಕೊಂಡಿದೆ.

ಸ್ಯಾಂಡಲ್ ವುಡ್ ನಟಿ ರಾಗಿಣಿಯವರ ಸಲುವಾಗಿ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ನಲ್ಲಿ ಆಕೆಯ ಹಾಲಿ ಮತ್ತು ಮಾಜಿ ಗೆಳೆಯರ ನಡುವೆ ಮಾರಾಮಾರಿ ನಡೆದಿದೆ. ಈಗ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಈ ಹಿಂದೆ ಗಣಿ ಉದ್ಯಮಿ ಶಿವ ಪ್ರಕಾಶ್ ಎಂಬವರ ಜೊತೆ ರಾಗಿಣಿ ಆತ್ಮೀಯರಾಗಿದ್ದು, ಆದರೆ ಕಳೆದ ಕೆಲ ದಿನಗಳಿಂದ ಆರ್.ಟಿ.ಓ. ಅಧಿಕಾರಿ ರವಿಶಂಕರ್ ಎಂಬವರ ಜೊತೆ ಸಲುಗೆಯಿಂದಿದ್ದರು. ಅಲ್ಲದೆ ಶಿವ ಪ್ರಕಾಶ್ ಅವರನ್ನು ನಿರ್ಲಕ್ಷಿಸತೊಡಗಿದ್ದರೆಂದು ಹೇಳಲಾಗಿದೆ.

ಇತ್ತೀಚೆಗೆ ರಾಗಿಣಿ ತಮ್ಮ ಹಾಲಿ ಗೆಳೆಯ ರವಿಶಂಕರ್ ಜೊತೆ ರಿಡ್ಜ್ ಕಾರ್ಟನ್ ಹೋಟೆಲ್ ಗೆ ಊಟಕ್ಕೆಂದು ತೆರಳಿದ್ದಾರೆ. ಇದೇ ಹೋಟೆಲ್ ನಲ್ಲಿ ರಾಗಿಣಿಯವರ ಮಾಜಿ ಗೆಳೆಯ ಶಿವಪ್ರಕಾಶ್ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದರೆಂದು ಹೇಳಲಾಗಿದೆ.

ರಾಗಿಣಿ ಜೊತೆ ರವಿಶಂಕರ್ ಅವರನ್ನು ನೋಡುತ್ತಿದ್ದಂತೆ ಶಿವಪ್ರಕಾಶ್ ಅವರ ಸಿಟ್ಟು ನೆತ್ತಿಗೇರಿದೆ. ಇನ್ನು ಮುಂದೆ ರಾಗಿಣಿ ಜೊತೆ ಓಡಾಡದಂತೆ ರವಿಶಂಕರ್ ಅವರಿಗೆ ಧಮ್ಕಿ ಹಾಕಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಆ ಬಳಿಕ ಬಿಯರ್ ಬಾಟಲ್ ನಿಂದ ರವಿಶಂಕರ್ ಅವರ ತಲೆಗೆ ಹೊಡೆದಿದ್ದು, ಈ ಸಂಬಂಧ ಈಗ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ರಾಗಿಣಿಯವರ ಬಳಿ ಕೆಳೋಣ ಅಂದ್ರೆ ಅವರ ದುಬೈಗೆ ಹೊಗಿದ್ದಾರಂತೆ.. ಒಟ್ನಾಲಿ ಯಾವುದು ಸತ್ಯವೋ ಯಾವುದು ನಿತ್ಯವೋ ಗೊತ್ತಾಗುತ್ತಿಲ್ಲ..