‘9 ಅನ್ನೋ ಸಂಖ್ಯೆ ದೇವೇಗೌಡರ ಕುಟುಂಬಕ್ಕೆ ಅನ್‌ಲಕ್ಕಿ’..!

ಹಾಸನ: ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾಜಿ ಸಚಿವ ಎ.ಮಂಜು ಮಾತನಾಡಿದ್ದು, ಈ ಚುನಾವಣೆ ಅಷ್ಟು ಸುಲಭವಲ್ಲಾ ಅನ್ನೋದು ನನಗೆ ಗೊತ್ತು.1999ರ ಚುನಾವಣೆ ಮರುಳಿಸುತ್ತದೆ ಎಂದಿದ್ದಾರೆ.

ಅಲ್ಲದೇ 9 ಅನ್ನೋ ಸಂಖ್ಯೆ ದೇವೇಗೌಡರ ಕುಟುಂಬಕ್ಕೆ ವಿರೋಧವಾಗಿದ್ದು, 1989, 1999ರಲ್ಲಿ ಸೋತಿದ್ದರು. ಈಗ 2019ರಲ್ಲೂ ಸೋಲುತ್ತಾರೆ ಎಂದು ಹೇಳಿದ್ದಾರೆ.

ಮೈತ್ರಿ ಹೆಸರಲ್ಲಿ ತಮ್ಮ ಮೊಮ್ಮಕ್ಕಳನ್ನ ಬೆಳೆಸುತ್ತಿದ್ದಾರೆ. ಜಿಲ್ಲೆಯಲ್ಲಿ ವಂಶಪಾರಂಪರ್ಯದ ವಿರುದ್ದ ಹಾಸನದಲ್ಲಿ ಚುನಾವಣೆ ನಡೆಯಬೇಕು. ಮುಂದಿನ ಪೀಳಿಗೆಗೆ ಯಾರಿಗೂ ರಾಜಕೀಯ ಭವಿಷ್ಯವಿಲ್ಲಾ, ಜನ್ರು ನೀವು ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಪ್ರಧಾನಮಂತ್ರಿಯನ್ನ ಸೋಲಿಸಿದ್ದೇವೆ. ಈಗ ಪ್ರಧಾನಿ ಮೊಮ್ಮಗನನ್ನ ಸೋಲಿಸೋದು ಕಷ್ಟವಲ್ಲಾ, ದೇವೇಗೌಡರು ಪ್ರಧಾನಿಯಾಗಿದ್ದು, ಕಾಂಗ್ರೆಸ್‌ನಿಂದ, ಮಗ ಸಿಎಂ ಆಗಿದ್ದು ಕಾಂಗ್ರೆಸ್‌ನಿಂದ ಈಗ ಮೊಮ್ಮಕ್ಕಳನ್ನೂ ಕಾಂಗ್ರೆಸ್ ಜೊತೆ ಬೆಳೆಸುತ್ತಿದ್ದಾರೆ. ದೇವೇಗೌಡರು ಅವರ ಅನುಕೂಲಕ್ಕೆ ಯಾರನ್ನಾದರೂ ಬಲಿ ಕೊಡುತ್ತಾರೆ ಎಂದು ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಹಾಸನ ಹೊಳೆನರಸೀಪುರ ಕಾಂಗ್ರೆಸ್ ಸಭೆಯಲ್ಲಿ ಮುಸ್ಲೀಂ, ಕ್ರಿಶ್ಚಿಯನ್ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡ ಮಹಮ್ಮದ್ ಅಲಿ ಈ ಬಗ್ಗೆ ಮಾತನಾಡಿದ್ದು, ಬಿಜೆಪಿ ಅಂದರೆ ಓಟ್‌ ಹಾಕಲ್ಲ ಅಂತ ತಿಳಿದಿದ್ದಾರೆ. ಆದ್ರೆ ಎ.ಮಂಜು ಯಾವ ಪಕ್ಷಕ್ಕೆ ಹೋದ್ರು ನಾವು ಬೆಂಬಲಿಸುತ್ತೇವೆ. ಕಾಂಗ್ರೆಸ್ ರಾಜ್ಯ ನಾಯಕರು ಮೈತ್ರಿ ಮಾಡಿಕೊಂಡು ನಮ್ಮನ್ನ ಕಡೆಗಣಿಸಿದ್ರೆ ನಾವೇನು ಮಾಡೋದು ಎಂದು ಹೇಳಿದ್ದಾರೆ.