ಚುನಾವಣೆಯಲ್ಲಿ ಮೈತ್ರಿ ವಿರುದ್ಧ ಬಿಎಸ್ ಯಡಿಯೂರಪ್ಪ ಹೊಸ ಅಸ್ತ್ರ ಬಳಕೆ..!

ಬೆಂಗಳೂರು: ಎಸ್.ಎಂ ಕೃಷ್ಣ ಅವರ ಜೊತೆ ಪ್ರಸಕ್ತ ರಾಜಕೀಯ ಪರಿಸ್ಥಿತಿ ಮತ್ತು ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲು ಬಂದಿದ್ದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಎಸ್ ಎಂ ಕೃಷ್ಣ ಭೇಟಿ ಬಳಿಕ ಮಾತನಾಡಿದ ಯಡಿಯೂರಪ್ಪ, ಈ ಬಾರಿ ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಹಾಗೂ ಕೋಲಾರ ಸೇರಿ ಹಲವೆಡೆ ಪ್ರವಾಸ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಇದರಿಂದ ನಮಗೆ ಆನೆ ಬಲ ಬಂದಾಂತಾಗಿದ್ದು, ಮಂಡ್ಯ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಅವರು ಸಲಹೆ ಕೊಟ್ಟಿದ್ದಾರೆ. ಸುಮಲತಾರವರ ನಿರ್ಣಾಯದ  ಮೇಲೆ ನಮ್ಮ ನಿರ್ಧಾರ ಹೇಳುತ್ತೇವೆ ಎಂದು ಭೇಟಿ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನುಡಿದರು.

ಎಸ್ ಎಂ ಕೃಷ್ಣ ವಿರುದ್ದ ಸಿಎಂ ಟ್ವೀಟ್ ವಿಚಾರ

ಅಧಿಕಾರದ ಮದದಿಂದ ಸಿಎಂ ಹೀಗೆ ಮಾತ್ನಾಡಿದ್ದಾರೆ. ಇಂತಹ ಅಧಿಕಾರವನ್ನ ಎಸ್ ಎಂ ಕೃಷ್ಣಾ ಅವರು ನೋಡಿ ಬಿಟ್ಟಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಪ್ರತಿಕ್ರಿಸಿದ್ದಾರೆ.

ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸ್ಪರ್ಧೆ ವಿಚಾರ

ಯಾರು ಎಲ್ಲಿಂದ ಬೇಕಾದರೂ ಸ್ಪರ್ದಿಸಲಿ ಅದು ಕಾಂಗ್ರೆಸ್ ಪಕ್ಷದ ವಿಚಾರವಾಗಿದ್ದು ಬಿಜೆಪಿ ಗಾಳಿ,ಮೋದಿ ಗಾಳಿ ಕರ್ನಾಟಕದಲ್ಲಿ ಬಿಸುತ್ತಿದೆ. ಕಾಂಗ್ರೆಸ್ ನವರು ಯಾರು ಸ್ಪರ್ಧೆ ಮಾಡಿದರೂ ಸೋಲ್ತಾರೆ. ಕರ್ನಾಟಕದಲ್ಲಿ ೨೨ ಸೀಟು ಖಂಡಿತವಾಗಿ ಗೆಲ್ಲುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.