‘ಭರಾಟೆ’ ಕ್ಲೈಮ್ಯಾಕ್ಸ್ ಅದ್ಧೂರಿತನ ಕೇಳಿದ್ರೆ ಬೆಚ್ಚಿ ಬೀಳ್ತೀರ..!!

ಭರಾಟೆ. ರೋರಿಂಗ್ ಸ್ಟಾರ್ ಶ್ರೀ‌ಮುರಳಿ ಮತ್ತು ಭರ್ಜರಿ ‌ಚೇತನ್ ಕುಮಾರ್ ಕಾಂಬಿನೇಷನ್​​ನ ಮೋಸ್ಟ್ ಎಕ್ಸ್​ಪೆಕ್ಟೆಡ್ ಆ್ಯಕ್ಷನ್ ಸಿನಿಮಾ. ಸುಪ್ರಿತ್ ನಿರ್ಮಾಣದ ಭರಾಟೆ‌ ಸಿನಿಮಾದ‌ ಅದ್ದೂರಿ ಕ್ಲೈಮ್ಯಾಕ್ಸ್ ಚಿತ್ರೀಕರಣ ನೆಲಮಂಗಲ ಬಳಿ ನಡೀತಿದೆ. ಭರ್ಜರಿ ಸೆಟ್​ ಹಾಕಿ ಸಿಕ್ಕಾಪಟ್ಟೆ ಅದ್ದೂರಿಯಾಗಿ ಚಿತ್ರೀಕರಣ ನಡೆಸ್ತಿದೆ ಭರಾಟೆ ಟೀಂ. ಸಿನಿಮಾದಲ್ಲಿ 10ಜನ ಖಳನಟರಿದ್ದು, ಕ್ಲೈಮ್ಯಾಕ್ಸ್​​​​ ಫೈಟ್​​ನಲ್ಲಿ ಅಷ್ಟು ಜನರ ಜೊತೆ ರೋರಿಂಗ್ ಸ್ಟಾರ್ ಸೆಣಸಾಡ್ತಿದ್ದಾರೆ.

‘ಭರಾಟೆ’ ಕ್ಲೈಮ್ಯಾಕ್ಸ್ ಅದ್ಧೂರಿತನ ಕೇಳಿದ್ರೆ ಬೆಚ್ಚಿ ಬೀಳ್ತೀರ..!!

ಖಡಕ್‌ ವಿಲನ್ಗಳ‌ ಎದುರು ರೋರಿಂಗ್ ಸ್ಟಾರ್ ಭರಾಟೆ  

ವಿಶಾಲವಾದ ಪ್ರಾಂಗಣ.. ವಾಡೆ ಮಾದರಿಯ ಸೆಟ್​. ಅಲ್ಲೇ ಮೂಲೆಯಲ್ಲಿ ಎದ್ದು ವಿರಾಂಜನೇಯನ ವಿಗ್ರಹ. ಚಿತ್ರ ವಿಚಿತ್ರ ಕಾಸ್ಟ್ಯೂಮ್ಸ್​​​ನಲ್ಲಿ ಖದರ್ ತೋರಿಸ್ತಿದ್ದ ಕಲಾವಿದರು.. ಒಂದಷ್ಟು ಜ್ಯೂನಿಯರ್ ಆರ್ಟಿಸ್ಟ್​​​ಗಳು.. ಧೂಳಿನಲ್ಲಿ ಡೈರೆಕ್ಟರ್ ಚೇತನ್​ ಕುಮಾರ್ ಕಮಾಂಡ್​ನ ಫಾಲೋ ಮಾಡ್ತಿದ್ದ ಟೀಂ, ಜೀಪ್ ಏರಿ ಧೂಳೆಬ್ಬಿಸಿದ ರೋರಿಂಗ್ ಸ್ಟಾರ್. ಒಟ್ಟಾರೆ ಭರಾಟೆ ಶೂಟಿಂಗ್ ಭರಾಟೆ ಜೋರಾಗಿಯೇ ಇತ್ತು.

ಕ್ಲೈಮ್ಯಾಕ್ಸ್​​ ಫೈಟ್ಸ್​ ಹಿನ್ನೆಲೆಯಲ್ಲಿ ಮೂಡಿ ಬರೋ ಒಂದಷ್ಟು ದೃಶ್ಯಗಳನ್ನ ಚಿತ್ರತಂಡ ಶೂಟ್ ಮಾಡ್ತಿತ್ತು.. ಕೊಂಚ ಫ್ರೀ ಮಾಡ್ಕೊಂಡು, ಶೂಟಿಂಗ್ ಸ್ಪೆಷಾಲಿಟಿಗಳನ್ನ ಚಿತ್ರತಂಡ ಹಂಚಿಕೊಳ್ತು.

ಸಾಯಿ ಕುಮಾರ್ ಸಹೋದರರ ಜೊತೆ ಶ್ರೀಮುರಳಿ ಕದನ..!

ಅದ್ಧೂರಿ ಸೆಟ್​​ನಲ್ಲಿ ರವಿವರ್ಮಾ ಥ್ರಿಲ್ಲಿಂಗ್ ಸ್ಟಂಟ್ ಕಂಪೋಸ್

ಸಾಕಷ್ಟು‌ ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿರೋ ಸಾಯಿಕುಮಾರ್ .ರವಿಶಂಕರ್ ಹಾಗೂ ಅಯ್ಯಪ್ಪ ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ.. ವಿಶೇಷ ಅಂದ್ರೆ ರವಿಶಂಕರ್ ಅವ್ರ ಆರ್ಮುಗ ಡೈಲಾಗ್ ಅನ್ನು ಸಾಯಿಕುಮಾರ್ ಬಾಯಲ್ಲಿ ಕೇಳಬಹುದು.. ಸ್ಟಾರ್ ಸ್ಟಂಟ್ ಮಾಸ್ಟರ್ ರವಿವರ್ಮಾ ಈ ಕ್ಲೈಮ್ಯಾಕ್ಸ್​ ಆ್ಯಕ್ಷನ್ ಕಂಪೋಸ್ ಮಾಡ್ತಿದ್ದಾರೆ.

ಅದ್ದೂರಿ ಸೆಟ್..ಕಲರ್​​​ಫುಲ್ ಕಲಾವಿದರು.. ಕ್ಲೈಮ್ಯಾಕ್ಸ್ ಭರಾಟೆ

ಒಂದೇ ಸಿನಿಮಾದಲ್ಲಿ ಹಿರಿಯ-ಕಿರಿಯ ಖಳನಟರ ಮಹಾಸಂಗಮ

ಭರಾಟೆ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿಯೇ ನಿರ್ಮಾಪಕ ಸುಪ್ರಿತ್ ಅದ್ದೂರಿ ಸೆಟ್ ಹಾಕಿಸಿಕೊಟ್ಟಿದ್ದಾರೆ. ಸುಮಾರು 75ಲಕ್ಷ ವೆಚ್ಚದಲ್ಲಿ ಕುಸ್ತಿ ವಾಡೆಯನ್ನ ಕಲಾನಿರ್ದೇಶಕ ಮೋಹನ್ ಬಿ ಕೆರೆ ಆಕರ್ಷಕವಾದ ಸೆಟ್​​ ನಿರ್ಮಾಣ ಮಾಡಿದ್ದಾರೆ.

ಭರಾಟೆ ಕಂಫ್ಳಿಟ್ ಎಂಟರ್​ಟೈನ್​ಮೆಂಟ್​​ ಸಿನಿಮಾ. ಇದೇ ಕಾರಣದಿಂದ ಚಿತ್ರದಲ್ಲಿ ಪ್ರೇಕ್ಷಕರಿಗೆ ಬೇಕಿರೋ ಎಲ್ಲ ಎಲಿಮೆಂಟ್ಸ್ ಚಿತ್ರದಲ್ಲಿದೆ.. ಅವಿನಾಶ್, ಸಾಯಿಕುಮಾರ್, ರವಿಶಂಕರ್ ಜೊತೆಯಾಗಿ ಅಯ್ಯಪ್ಪ, ಮಂಜು, ದೀಪಕ್ ಶೆಟ್ಟಿ, ರಾಜ್ ಗುರು, ಮೋಹನ್ , ಶರತ್ ಲೋಹಿತಾಶ್ವ  ಹೇಗೆ ಹಿರಿ-ಕಿರಿಯ ಖಳನಟರ ಸಮಾಗಮ ಸಿನಿಮಾದಲ್ಲಾಗಿದೆ.

ಕ್ಯಾಮರಾಮ್ಯಾನ್ ಗಿರಿ‌ಗೌಡ ಅಂಡ್ ಟೀಂ ಕಳೆದೊಂದು ವಾರದಿಂದ ಭರಾಟೆ ಕ್ಲೈಮ್ಯಾಕ್ಸ್​ ಎಪಿಸೋಡ್​​​ ಅನ್ನ ಸೆರೆ ಹಿಡಿತಿದೆ.. ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರೋ ಭರಾಟೆ ಟೀಂ, ಶೀಘ್ರದಲ್ಲೇ ಕುಂಬಳ ಕಾಯಿ ಹೊಡೆದು  ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರು  ಮಾಡಲಿದೆ. ಒಟ್ಟಾರೆ ಸ್ಟಾರ್​ ಕಾಸ್ಟ್ ಮತ್ತು  ಮೇಕಿಂಗ್ ನೋಡ್ತಿದ್ರೆ, ಭರಾಟೆ ನೋಡುಗರಿಗೆ ಭರ್ಜರಿ ‌ಭೋಜನ ಆಗೋದಂತೂ ಗ್ಯಾರೆಂಟಿ.

Recommended For You

Leave a Reply

Your email address will not be published. Required fields are marked *