ನಿಖಿಲ್ ಕುಮಾರಸ್ವಾಮಿ​ ಹಾಗೂ ಸುಮಲತಾಗೆ ಜಿ. ಮಾದೇಗೌಡ ಏನಾದ್ರು ಅಂದ್ರೆ…!

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರಿಗೆ ಆಶಿರ್ವಾದ ಮಾಡಿದ್ದೇನೆ ಎಂದು ಮಾಜಿ ಸಂಸದ ಜಿ. ಮಾದೇಗೌಡ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಜಿ. ಮಾದೇಗೌಡ, ನಿಖಿಲ್ ಕುಮಾರಸ್ವಾಮಿಯವರಿಗೆ ಆಶಿರ್ವಾದ ಮಾಡಿದ್ದೇನೆ. ಸುಮಲತಾ ಅವರೂ ಬಂದು ಬೆಂಬಲ ಕೇಳಿದ್ರು, ಆಗಲ್ಲ ಎಂದು ಹೇಳಿ ಕಳುಹಿಸಿದೆ ಎಂದು ತಿಳಿಸಿದರು.

ಅದುವಲ್ಲದೇ ಈಗ ನಿಖಿಲ ಬಂದಿದ್ದಾರೆ. ಅವರಿಗೂ ಆಗಲ್ಲ ಅಂತಿದ್ದೆ, ಆದರೆ ಅವರು ಮೈತ್ರಿ ಪಕ್ಷದ ಅಭ್ಯರ್ಥಿ ಎಂದಿದ್ದಾರೆ ಹೀಗಾಗಿ ಅವರಿಗೆ ಬೆಂಬಲ ಇದೆ ಎಂದು ನಿಖಿಲ್ ಸ್ಪರ್ಧೆಗೆ ಜೈ ಎಂದಿದ್ದಾರೆ.

ಸದ್ಯ ರಾಜಕೀಯವಾಗಿ ತಮ್ಮ ಅನುಭವವನ್ನು ನಿಖಿಲ್‌ ಜೊತೆ ಹಂಚಿಕೊಳ್ಳುತ್ತಿರುವ ಜಿ.ಮಾದೇಗೌಡ, ನಾನು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವನು ಎಂದು ನಿಖಿಲ್ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದು, ನಿಖಿಲ್‌ಗೆ ಗುಡ್ ಲಕ್ ಎಂದು ಕೈ ಕುಲುಕಿದ್ದಾರೆ.

ಇನ್ನು ಜಿ ಮಾದೇಗೌಡ ಕಾಲಿಗೆ ಬಿದ್ದು ಆಶಿರ್ವಾದ ಪಡೆದ ನಿಖಿಲ್ ಕುಮಾರಸ್ವಾಮಿ, ನಿನಗೆ ಗುಡ್‌ಲಕ್ ಆಗಬೇಕು ಅಂದ್ರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೋ ಎಂದು ಸಲಹೆ ಕೊಟ್ಟಿದ್ದಾರೆ. ಕಾಲಿಗೆ ಬಿದ್ದಾಗ ತಮಾಷೆ ಮಾಡುತ್ತಲೇ ಬುದ್ದಿವಾದ ಹೇಳಿದ್ದಾರೆ.

ಹಿಂದೆ ಕಾಲಿಗೆ ಬಿದ್ದಾಗ ಇಗ ಕಾಲಿಗರ ಬೀಳ್ತೀರಿ, ಆಮೇಲೆ ಜುಟ್ಟು ಹಿಡಿತೀರಿ ಅಂತಿದ್ರು, ಆ ರೀತಿ ಆಗಬಾರದು ಎಂದು ಮಾಜಿ ಸಂಸದ ಜಿ. ಮಾದೇಗೌಡ ಸಲಹೆ ನೀಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

ಮೈತ್ರಿ ಅಭ್ಯರ್ಥಿಯಾಗಿ ನನ್ನನ್ನ ಘೋಷಣೆ ಮಾಡಿದ್ದಾರೆ ಹೀಗಾಗಿ ಕಾಂಗ್ರೆಸ್ ನ ಹಿರಿಯರನ್ನ ಭೇಟಿ ಮಾಡಿದ್ದೇನೆ. ತಾತಾನ ಸ್ಥಾನದಲ್ಲಿ ಅಣ್ಣವರನ್ನ ನೋಡುತ್ತಿದ್ದೇನೆ. ಸಾಕಷ್ಟು ಅವರ ರಾಜಕೀಯದ ಅನುಭವ ಹಂಚಿಕೊಂಡಿದ್ದಾರೆ. ಮುಂದೆಯೂ ಅವರ ಜೊತೆ ಬಂದು ಚರ್ಚೆ ಮಾಡ್ತೀನಿ ಎಂದು ಮಾದೇಗೌಡರ ಭೇಟಿ ಬಳಿಕ ನಿಖಿಲ್ ಕುಮಾರಸ್ವಾಮಿ ಹೇಳಿಕೊಂಡರು.

ಅನಿತಾ ಕುಮಾರಸ್ವಾಮಿ ಪ್ರತಿಕ್ರಿಯೆ

ಮೈತ್ರಿ ಅಭ್ಯರ್ಥಿ ನಿಖಿಲ್, ಹೀಗಾಗಿ ಕಾಂಗ್ರೆಸ್ ಹಿರಿಯರನ್ನ ಭೇಟಿ ಮಾಡ್ತಿದ್ದೀವಿ. ಎಲ್ಲಾ ಕಡೆ ರೆಸ್ಪಾನ್ಸ್ ಉತ್ತಮವಾಗಿದ್ದು, ಮೈತ್ರಿ ಅಭ್ಯರ್ಥಿ ಆಗಿರೋದರಿಂದ ಕಾಂಗ್ರೆಸ್ಸಿಗರ ಬೆಂಬಲ ಕೂಡ ಇದೆ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ.