ರಾಹುಲ್ ಗಾಂಧಿ ವಿರುದ್ಧ ಎಸ್.ಎಂ ಕೃಷ್ಣ ಸ್ಪರ್ಧಿಸೋ ಬಗ್ಗೆ ಹೇಳಿದ್ದು ಹೀಗೆ..!

ಬೆಂಗಳೂರು: ಬಿಜೆಪಿಯ ಸಾಮಾನ್ಯ, ನಿಷ್ಠಾವಂತ ಕಾರ್ಯಕರ್ತನಾಗಿ ಬಿಜೆಪಿ ಪರ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಸಾಮಾನ್ಯ, ನಿಷ್ಠಾವಂತ ಕಾರ್ಯಕರ್ತನಾಗಿ ಬಿಜೆಪಿ ಪರ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ವಂಶಪಾರಂಪರ್ಯ ಆಡಳಿತದ ಬಗ್ಗೆ ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ ಅವರೂ ಹೇಳಿ ಆಗಿದೆ ಎಂದು ಎಸ್.ಎಂ ಕೃಷ್ಣ ಹೇಳಿದರು

ಸದ್ಯ ಈಗ ರಾಹುಲ್ ಗಾಂಧಿ ವಿರುದ್ದ ನಾನು ಸ್ಪರ್ಧಿಸಬೇಕೋ..? ಬೇಕೋಬೇಡವೋ..? ಎಂಬುದನ್ಮು ಯಡಿಯೂರಪ್ಪ ನಿರ್ಧರಿಸುತ್ತಾರೆ ಎಂದು ಅವರ ಲೋಕಸಭಾ ಚುನಾವಣೆ ಸ್ಪರ್ಧಿಸುವ ಬಗ್ಗೆ ತಿಳಿಸಿದ್ದಾರೆ.

ಇನ್ನು ರಾಜ್ಯಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಸಂದರ್ಭದಲ್ಲಿ ನಾನು ದೇವೇಗೌಡರ ಸಹಕಾರ ಪಡೆದಿದ್ದು ನಿಜ. ಅದನ್ನು ಹಲವಾರು ವೇದಿಕೆಗಳಲ್ಲಿ ಬಹಿರಂಗವಾಗೇ ಹೇಳಿದ್ದೇನೆ ಅದರಲ್ಲಿ ರಹಸ್ಯವೇನೂ ಇಲ್ಲ ಎಂದು ಎಸ್.ಎಂ ಕೃಷ್ಣ ನುಡಿದರು.