ಸ್ಯಾಂಡಲ್​ವುಡ್ ಸ್ಟಾರ್ ನಟಿಗಾಗಿ ಪ್ರೇಮಿಗಳಿಬ್ಬರ ಕಿತ್ತಾಟ…!

ಬೆಂಗಳೂರು: ಸ್ಯಾಂಡಲ್ ವುಡ್ ನಟಿಗಾಗಿ ಪ್ರೇಮಿಗಳಿಬ್ಬರ ಕಿತ್ತಾಟ ಆಡಿಕೊಂಡು ಪರಸ್ಪರ ಬಿಯರ್ ಬಾಟಲಿಯಿಂದ ಬಡಿದಾಡಿಕೊಂಡ ನಟಿ ಎದುರೇ ಪ್ರೇಮಿಗಳು ಬಂಡಿದಾಡಿಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಖಾಸಗೀ ರಿಟ್ಸ್ ಕಾರ್ಲ್ ಟನ್ ಹೊಟೇಲ್ ನಲ್ಲಿ ಘಟನೆ ನಡೆದಿದ್ದು, RTO ಅಧಿಕಾರಿ ರವಿ ಹಾಗೂ ಶಿವಪ್ರಸಾದ್ ನಡುವೆ ಗಲಾಟೆಯಾಗಿದೆ. ಶಿವಪ್ರಕಾಶ್ ರನ್ನ ಮೊದಲು ಪ್ರೀತಿಸುತ್ತಿದ್ದ ನಟಿ ನಂತರ ರವಿ ಎಂಬಾತನೊಂದಿಗೆ ಓಡಾಡಿಕೊಂಡಿದ್ದಳು.

ನಿನ್ನೆ ಮಧ್ಯರಾತ್ರಿ ಹೊಟೇಲ್ ನಲ್ಲಿ ಪರಸ್ಪರ ಮುಖಾಮುಖಿಯಾದ ನಟಿ ಹಾಗೂ ಎಕ್ಸ್ ಲವರ್. ಈ ವೇಳೆ ಆಕೆಯೊಂದಿಗಿದ್ದ ರವಿ ಎಂಬಾತನೊಂದಿಗೆ ಕಿರಿಕ್ ಮಾಡಿಕೊಂಡಿದ್ದು, ನನ್ನ ಹುಡುಗಿ ಜೊತೆ ಓಡಾಡೋದಕ್ಕೆ ಎಷ್ಟೋ ಧೈರ್ಯ ಎಂದು ಶಿವಪ್ರಸಾದ್ ರವಿ ಮೇಲೆ ಹಲ್ಲೆ ಮಾಡಿದ್ದಾರೆ.

ಗಣಿ ಉದ್ಯಮಿಯಾಗಿರುವ ಶಿವಪ್ರಸಾದ್, ಪಾರ್ಟಿ ಮಾಡಲು ಫ್ರೆಂಡ್ಸ್ ಜೊತೆ ತೆರಳಿದ್ದ, ಈ ವೇಳೆ ನಟಿ ರಾಗಿಣಿ ಹಾಗೂ RTO ಅಧಿಕಾರಿ ರವಿಯನ್ನ ನೋಡಿ ಕಿರಿಕ್ ತೆಗೆದಿದ್ದಾನೆ ಶಿವಪ್ರಕಾಶ್. ಈ ವೇಳೆ ಬಿಯರ್ ಬಾಟಲಿನಿಂದ ರವಿ ತಲೆಗೆ ಶಿವಪ್ರಕಾಶ್ ಬಾರಿಸಿದ್ದಾನೆ.

ಸದ್ಯ ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಬಗ್ಗೆ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.