ಜೆಡಿಎಸ್​ಗೆ ಕೈಕೊಟ್ಟು ಬಿಎಸ್ ಪಿ ಸೇರ್ಪಡೆಗೊಂಡ ಡ್ಯಾನಿಷ್ ಆಲಿ ಹೇಳಿದ್ದೇನು..?

ದೇವೇಗೌಡರ ಆಶಿರ್ವಾದ ಮತ್ತು ಅನುಮತಿ ಪಡೆದು ಬಿಎಸ್ ಪಿ ಸೇರ್ಪಡೆಗೊಂಡಿದ್ದೇನೆ ಎಂದು ಬಿಎಸ್ ಪಿ ಪಕ್ಷ ಸೇರಿದ ಬಳಿಕ ಡ್ಯಾನಿಷ್ ಆಲಿ ಹೇಳಿದ್ದಾರೆ.

ಮಾಯಾವತಿ ನನಗೆ ಯಾವ ಜವಾಬ್ದಾರಿ ಕೊಡ್ತಾರೋ ಅದನ್ನು ನಿಭಾಯಿಸುತ್ತೇನೆ

ನಾನು ಜೆಡಿಎಸ್​ನಲ್ಲಿ​ದ್ದಾಗ ಯಾವುದೇ ಹುದ್ದೆಯನ್ನು ಕೇಳಿಲ್ಲ, ಈ ಸಂಬಂಧ ಮಾಜಿ ಪ್ರಧಾನಿ ಹೆಚ್ .ಡಿ ದೇವೇಗೌಡರೇ ನನಗೆ ಯಾವ ಜವಾಬ್ದಾರಿ ನೀಡ್ಬೇಕೆಂದು ನಿರ್ಧರಿಸ್ತಿದ್ದಾರು. ಇಲ್ಲಿ ಕೂಡ ಮಾಯಾವತಿ ನನಗೆ ಯಾವ ಜವಾಬ್ದಾರಿ ಕೊಡ್ತಾರೋ ಅದನ್ನು ನಿಭಾಯಿಸುತ್ತೇನೆ ಎಂದರು.

ಬಲವಾದ ನಾಯಕತ್ವದೊಂದಿಗೆ ನಮ್ಮ ಶಕ್ತಿಯನ್ನು ಬಳಸೋದು ಅಗತ್ಯ

ಉತ್ತರ ಪ್ರದೇಶದಲ್ಲಿ ಜೆಡಿಎಸ್ ಗೆ ಯಾವುದೇ ಸಂಘಟನಾ ಶಕ್ತಿ ಇಲ್ಲ, ನನ್ನ ಎಲ್ಲಾ ಶ್ರಮದ ಪ್ರಯತ್ನದ ಬಳಿಕವೂ ಜೆಡಿಎಸ್​ನ್ನು ನನ್ನ ಜನ್ಮಭೂಮಿ ಹಾಗು ಕರ್ಮಭೂಮಿಯಲ್ಲಿ ಬೆಳೆಸಲು ಸಾಧ್ಯವಾಗ್ಲಿಲ್ಲ, ಇವತ್ತು ಸಂವಿಧಾನ ಅಪಾಯದಲ್ಲಿ ಇದೆ.  ಈ ಹಿನ್ನಲೆಯಲ್ಲಿ ಬಲವಾದ ನಾಯಕತ್ವದೊಂದಿಗೆ ನಮ್ಮ ಶಕ್ತಿಯನ್ನು ಬಳಸೋದು ಅಗತ್ಯ ಎಂದು ತಿಳಿಸಿದರು.