ಬಾಲಿವುಡ್​ ಶೋಲೆ ಚಿತ್ರದ ಶೂಟಿಂಗ್ ಸ್ಪಾಟ್​ಗೆ ಖ್ಯಾತ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಎಂಟ್ರಿ..!

ರಾಮನಗರ: ಭಾರತ ತಂಡ ಕಂಡ ಅಂತರಾಷ್ಟ್ರೀಯ ಮಾಜಿ ಕ್ರಿಕೆಟಿಗ, ಶ್ರೇಷ್ಠ ಸ್ಪೀನ್ ಮಾಂತ್ರಿಕ ಅನಿಲ್ ಕುಂಬ್ಳೆ ರಾಮನಗರಕ್ಕೆ ಭೇಟಿ ನೀಡಿದ್ದರು.

ಇಂದು ರಾಮನಗರದಲ್ಲಿ ಇರುವ ರಾಮದೇವರ ಬೆಟ್ಟದ ಸರಹದ್ದಿನ ಅಭಯಾರಣ್ಯಕ್ಕೆ ಭೇಟಿ ನೀಡಿ ಅಲ್ಲೇ ಸ್ವಲ್ಪ ಸಮಯ ಕಳೆದಿದ್ದಾರೆ. ವಿಶೇಷ ಅಂದ್ರೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತ್ ಬಚ್ಚನ್ ಅಭಿನಯದ​ ಅಲ್ ಟೈಂ ಸೂಪರ್ ಹಿಟ್ ಶೋಲೆ ಸಿನಿಮಾ ಚಿತ್ರೀಕರಣಗೊಂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇನ್ನು ಅನಿಲ್​ ಕುಂಬ್ಳೆ ತಮ್ಮ ಪುತ್ರಮಯಾಸ್ ಕುಂಬ್ಳೆ ಜೊತೆ ಟ್ರಕ್ಕಿಂಗ್​ ಮಾಡಿ ಸಂತಸದಲ್ಲಿದ್ದರು. ಜೊತೆಗೆ ಅಲ್ಲಿನ ಪರಿಸರದಲ್ಲಿ ಪೋಟೋಗ್ರಾಫಿ ಕೂಡ ಮಾಡಿದ್ದು ಬಹಳ ಸಂತೋಷದವಾಗಿದೆ ಎಂದು ಟ್ವೀಟರ್​ನಲ್ಲಿ ಪೋಟೋ ಆಪ್ ಲೋಡ್ ಮಾಡಿ ಹಂಚಿಕೊಂಡಿದ್ದಾರೆ.