ಕೊಪ್ಪಳದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ ಮನಮಿಡಿಯುವ ಘಟನೆ

ಕೊಪ್ಪಳದ ಜಿಲ್ಲಾ ಕಾರಾಗೃಹದಲ್ಲಿ ಮಹಿಳಾ ವಿಚಾರಣಾ ಬಂಧಿಯ ಮಗುವಿನ ನಾಮಕರಣ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನಡೆಯಿತು.

ಜಿಲ್ಲಾ ನ್ಯಾಯಾಧೀಶ ಸಂಜೀವ ಕುಲಕರ್ಣಿ, ಸೀನಿಯರ್ ಸಿವಿಲ್ ಜಡ್ಜ್ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಟಿ.ಶ್ರೀನಿವಾಸ ನೇತೃತ್ವದಲ್ಲಿ ನಾಮಕರಣ ಕಾರ್ಯಕ್ರಮ ನಡೆಯಿತು.

ಶಾಸ್ತ್ರೋಕ್ತವಾಗಿ ಪೂಜಾ ವಿಧಿ- ವಿಧಾನಗಳನ್ನು ಪೂರೈಸಿದ ನಂತರ, ಮಂತ್ರ ಘೋಷಗಳೊಂದಿಗೆ ಮಗುವಿಗೆ ನಾಮಕರಣ ಮಾಡಲಾಯಿತು. ತಾಯಿ ಇಚ್ಚೆಯಂತೆ ಅಭಿನಂದನ್ ಎಂದು ನಾಮಕರಣ ಮಾಡಲಾಯಿತು. ಇನ್ನು ಜೈಲಿನಲ್ಲಿದ್ದ ವಿಚಾರಣಾದೀನ ಮಹಿಳೆಯರು ಗ್ರಾಮೀಣ ಸೊಗಡಿನ ಜೋಗುಳ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು.

ಆಂಧ್ರ ಮೂಲದ ಜ್ಯೋತಿ ಎಂಬುವರ ಮಗುವಿಗೆ ನಾಮಕರಣ ಮಾಡಲಾಯಿತು. ಜ್ಯೋತಿ ಪ್ರಕರಣವೊಂದರ ವಿಚಾರಣಾದೀನ ಖೈದಿಯಾಗಿ ಕೊಪ್ಪಳ ಜೈಲಿನಲ್ಲಿದ್ದಾರೆ. ಜ್ಯೋತಿಗೆ ಕಳೆದ ಒಂದು ವರ್ಷದ ಹಿಂದೆ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು.