ಜೆಡಿಎಸ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಸುಮಲತಾ

ಬೆಂಗಳೂರು: ಜೆಡಿಎಸ್ ನಾಯಕರ ವಿರುದ್ಧ ಮಂಡ್ಯದ ಲೋಕಸಭಾ ಅಭ್ಯರ್ಥಿ ಸುಮಲತಾ ಅಂಬರೀಷ್ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಸುಮಲತಾ ಅಂಬರೀಷ್, ಪ್ರಾಮಾಣಿಕತೆಗೆ ಮೋಸವೆಸಗುವ ರಾಜಕೀಯ ನನಗೆ ಬೇಕಿಲ್ಲ. ನನ್ನದು ಅಂಬರೀಶ್ ಪಾಲಿಸಿದ ಪ್ರಾಮಾಣಿಕ ರಾಜಕೀಯ. ಮಂಡ್ಯದ ಜನರು ಪಾಲಿಸುವ ಪ್ರಾಮಾಣಿಕ ರಾಜಕೀಯ. ಮಂಡ್ಯದ ಮಣ್ಣು ಬರಿ ಮುಗ್ಧತೆಯಿಂದ ಕೂಡಿಲ್ಲ. ಅದು ಪ್ರಾಮಾಣಿಕತೆಯೂ ಇರುವಂತಹದ್ದು ಎಂದು ಹೇಳಿದ್ದಾರೆ.

ಅಲ್ಲದೆ, ಅಂಬರೀಶ್ ಅವರಲ್ಲಿರುವ ಗುಣವೇ ಮಂಡ್ಯ ಜನರದ್ದು. ಸತ್ಯ,ನಿಷ್ಠೆ,ಪ್ರಾಮಾಣಿಕತೆಗೆ ಹೆಸರಾದ ಗುಣ ಮಂಡ್ಯ ಜನರದ್ದು. ಸುಳ್ಳು,ಕಪಟ,ವಂಚನೆಯಿಂದ ಕೂಡಿರುವಂತದ್ದಲ್ಲ ಎಂದು ಜೆಡಿಎಸ್ ನಾಯಕರ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.