ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಮೆಸೆಜ್ ನೀಡಿದ ಪುನೀತ್

ಬೆಂಗಳೂರು: ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವಿದ್ದು, ವೀಡಿಯೋ ಮೂಲಕ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ.

ಪ್ರತಿವರ್ಷ ಬರ್ತ್‌ಡೇ ಹಿಂದಿನ ದಿನವೇ ಅಪ್ಪು ನಿವಾಸದ ಮುಂದೆ ಫ್ಯಾನ್ಸ್ ಜಮಾಯಿಸುತ್ತಿದ್ದು, ಕೇಕ್ ಹೂವಿನ ಹಾರ, ಹೂಗುಚ್ಛ ತಂದು, ನೆಚ್ಚಿನ ನಟನಿಗೆ ಹುಟ್ಟುಹಬ್ಬದ ವಿಶ್ ತಿಳಿಸಿ, ಬರ್ತ್‌ಡೇ ಸೆಲೆಬ್ರೇಟ್ ಮಾಡುತ್ತಿದ್ದರು.

ಆದ್ರೆ ಈ ಬಾರಿ ಪುನೀತ್ ತಮ್ಮ ಬರ್ತ್‌ಡೇ ದಿನ ಹೊರಗಿರಲಿದ್ದು, ತಾವು ಮನೆಯಲ್ಲಿ ಇರೋದಿಲ್ಲ. ಯಾರೂ ಬರ್ತ್‌ಡೇಗೆ ಹಾರ, ಕೇಕ್, ಹೂಗುಚ್ಛ ತರಬೇಡಿ. ಅದಕ್ಕೆ ಕೊಡೋ ಹಣವನ್ನ ಒಳ್ಳೆಯ ಕೆಲಸಕ್ಕೆ ಬಳಸಿ ಎಂದು ಅಭಿಮಾನಿಗಳಲ್ಲಿ ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಮನವಿ ಮಾಡಿದ್ದಾರೆ.