ರೌಡಿ ಲಕ್ಷ್ಮಣ್ ಮರ್ಡರ್‌ ಕೇಸ್‌ನಲ್ಲಿ ಕೇಳಿಬಂತು ಮಂಡ್ಯದ ಪ್ರಭಾವಿ ಶಾಸಕರ ಪುತ್ರನ ಹೆಸರು

ಬೆಂಗಳೂರು: ರೌಡಿ ಲಕ್ಷ್ಮಣ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ ಹಂತಕರು ಸ್ಫೋಟಕ ಸತ್ಯವೊಂದನ್ನ ಬಾಯ್ಬಿಟ್ಟಿದ್ದು, ಪ್ರಕರಣದಲ್ಲಿ ಮಂಡ್ಯದ ಪ್ರಭಾವಿ ಶಾಸಕರ ಮಗನ ಹೆಸರು ಕೇಳಿಬಂದಿದೆ.

ಹಂತಕಿ ವರ್ಷಿಣಿಗೆ ಮಂಡ್ಯದ ಪ್ರಭಾವಿ ಶಾಸಕರ ಪುತ್ರನ ಜೊತೆ ಸಂಬಂಧವಿದೆ ಎಂಬ ವಿಚಾರವನ್ನ ಹಂತಕರು ಬಾಯ್ಬಿಟ್ಟಿದ್ದಾರೆ. ಇದೀಗ ರೌಡಿ ಲಕ್ಷ್ಮಣ್ ಕೊಲೆ ಹಿಂದೆ ಶಾಸಕನ ಪುತ್ರನ ಕೈವಾಡವಿದೆಯಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಈ ಬಾರಿ ಮಂಡ್ಯದಲ್ಲಿ ಬಿಜೆಪಿಗೆ ಸಪೋರ್ಟ್ ಮಾಡಲು ರೌಡಿ ಲಕ್ಷ್ಮಣ್ ನಿರ್ಧರಿಸಿದ್ನಂತೆ. ಕೊಲೆಗೆ ಇದು ಕೂಡ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಲಕ್ಷ್ಮಣ್ ಕೇಸ್‌ನಲ್ಲಿ ಶಾಸಕರ ಮಗನನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.

ಶಾಸಕನ ಪುತ್ರನ ಮತ್ತು ವರ್ಷಿಣಿಯ ಫೋನ್ ಕಾಲ್ ಡಿಟೈಲ್ಸ್ ಪಡೆದ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಕೇಸ್‌ನಲ್ಲಿ ಶಾಸಕನ ಪುತ್ರನ ಕೈವಾಡವಿರುವುದು ಸಾಬೀತಾದರೆ, ಶಾಸಕನ ಪುತ್ರನಿಗೆ ಕಂಟಕ ಗ್ಯಾರಂಟಿ.