‘ಹಾಸನದಲ್ಲಿ ಬಿಜೆಪಿ ಗೆಲ್ಲಬೇಕು. ಮೋದಿ ಪ್ರಧಾನಿ ಆಗಬೇಕು’

ಬೆಂಗಳೂರು: ಟಿವಿ5 ಜೊತೆ ಹಾಸನ ಶಾಸಕ ಪ್ರೀತಂ ಗೌಡ ಮಾತನಾಡಿದ್ದು, ಹಾಸನ ಲೋಕಸಭಾ ಕ್ಷೇತ್ರದ ವ್ಯಾಕ್ತಿಯಲ್ಲಿ ಶಾಸಕರಾದ ಬೆಳ್ಳಿ ಪ್ರಕಾಶ್, ನಾನು ಬಿಜೆಪಿಯಲ್ಲಿದ್ದೇವೆ. ಎ.ಮಂಜು ಪಕ್ಷ ಸೇರ್ತೀವಿ ಎಂದು ಹೇಳಿದ್ದಾರೆಂದು ಹೇಳಿದ್ದಾರೆ.

ಅಲ್ಲದೇ, ನಾವು ಸಭೆಯಲ್ಲಿ ಭಾಗಿಯಾಗಿ ಶುಭ ಕೋರಿದ್ದೇವೆ. ಎ.ಮಂಜುರಿಗೆ ಟಿಕೇಟ್ ವಿಚಾರ ಕೋರ್ ಕಮಿಟಿ ಡಿಸೈಡ್ ಮಾಡುತ್ತೆ. ಹೈಕಮಾಂಡ್ ಡಿಸೈಡ್ ಮಾಡುತ್ತೆ. ಹಾಸನದಲ್ಲಿ ಬಿಜೆಪಿ ಗೆಲ್ಲಬೇಕು. ಮೋದಿ ಪ್ರಧಾನಿ ಆಗಬೇಕು. ಅತ್ಯಂತ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡ್ತೀವಿ ಎಂದು ಹೇಳಿದ್ದಾರೆ.