ನ್ಯೂಜಿಲ್ಯಾಂಡ್ ಮಸೀದಿ ಮೇಲೆ ಟೆರರ್ ಅಟ್ಯಾಕ್- ಭಯಾನಕ ದೃಶ್ಯ ವೈರಲ್

ನ್ಯೂಜಿಲ್ಯಾಂಡ್‌ನಲ್ಲಿ ಮಸೀದಿ ಮೇಲೆ ಟೆರರ್‌ ಅಟ್ಯಾಕ್ ನಡೆದಿದ್ದು, ಉಗ್ರ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಅಲ್ಲದೇ ತನ್ನ ದಾಳಿಯನ್ನು ಸಹ ವೀಡಿಯೋ ಮಾಡಿದ್ದು, ಈ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಆಸ್ಟ್ರೇಲಿಯಾದ ಬ್ರೆಂಟನ್ ಟಾರೆಂಟ್ ದಾಳಿ ನಡೆಸಿದ್ದು, ಮಸೀದಿಯಲ್ಲಿದ್ದ 40ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ವೈರಲ್ ಆದ ವೀಡಿಯೋ ವೀಡಿಯೋ ಗೇಮ್‌ನಂತೆ ಕಂಡರೂ ಇದು ನಿಜ.

ಶುಕ್ರವಾರ ಹಲವರು ಮಸೀದಿಗೆ ಬರುವುದನ್ನು ಮನಗಂಡಿದ್ದ ಟಾರೆಂಟ್ , ಮಸೀದಿಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಅಲ್ಲದೇ, ಅದನ್ನ ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣಕ್ಕೆ ಬಿಟ್ಟಿದ್ದಾನೆ. 15 ನಿಮಿಷದ ವೀಡಿಯೋ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.

Recommended For You

Leave a Reply

Your email address will not be published. Required fields are marked *