‘ಸಾವನ್ನೇ ರಾಜಕೀಯ ಬಂಡವಾಳ ಮಾಡಿಕೊಳ್ಳುವ ಬುದ್ದಿ ನಿಮಗಿರುವುದು ವಿಷಾದನೀಯ’

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರಿದೆ. ಹಲವು ವರ್ಷಗಳಿಂದ ನಮ್ಮ ಜೊತೆಗಿರುವ ಕುಮಾರಣ್ಣನ ಮಗನನ್ನ ಸಪೋರ್ಟ್ ಮಾಡ್ತೀವಿ ಅಂತಾ ನಿಖಿಲ್ ಕುಮಾರ್ ಫ್ಯಾನ್ಸ್ ಹೇಳಿದ್ರೆ, ಮಂಡ್ಯದ ಗಂಡಿನ ಋುಣ ತೀರಿಸೋಕ್ಕೆ ಒಳ್ಳೆಯ ಅವಕಾಶ ಸಿಕ್ಕಿದೆ ಅಂತಾ ಸುಮಲತಾಗೆ ಸಪೋರ್ಟ್ ಮಾಡ್ತಿದ್ದಾರೆ ಅಂಬಿ ಫ್ಯಾನ್ಸ್.

ಆದ್ರೆ ಈ ಮುಂಚೆ ನಿಖಿಲ್ ಗೋ ಬ್ಯಾಕ್ ಶುರುವಾದ ಹಾಗೇ, ಇದೀಗ ಸುಮಲತಾ ಗೋ ಬ್ಯಾಕ್ ಅಂತಾ ಜೆಡಿಎಸ್ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೇನ್ ಶುರು ಮಾಡಿದ್ದಾರೆ.

ಕುಮಾರಸ್ವಾಮಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಸುಮಲತಾ ಎಂದು ಪೋಸ್ಟರ್ ಮಾಡಿ ಹರಿಬಿಟ್ಟಿದ್ದಾರೆ.

ಸಾವಿನ ವಿಚಾರ ಇಟ್ಕೊಂಡು ಸಾವಿನ ರಾಜಕಾರಣ ಮಾಡುವ ಅವಶ್ಯಕತೆ ನಮಗಿಲ್ಲ.ಸಾವನ್ನೇ ರಾಜಕೀಯ ಬಂಡವಾಳ ಮಾಡಿಕೊಳ್ಳುವ ಬುದ್ದಿ ನಿಮಗಿರುವುದು ವಿಷಾದನೀಯ. ಕುಮಾರಣ್ಣನ ಬಿಟ್ಕೊಡೋಕೆ ಸಾಧ್ಯಾನೆ ಇಲ್ಲ ಎಂದು ಪೋಸ್ಟ್ ಮಾಡಿದ್ದಾರೆ.