ಸೀತಾರಾಮ ಕಲ್ಯಾಣಕ್ಕೆ 50 ದಿನ.. ನಿಖಿಲ್​ಗೆ ಡಬಲ್ ಧಮಾಕ

ಜಾಗ್ವಾರ್ ಖ್ಯಾತಿಯ ನಿಖಿಲ್ ಕುಮಾರ್​​​ ಡಬಲ್ ಸಂಭ್ರಮದಲ್ಲಿದ್ದಾರೆ.. ಎರಡನೇ ಬಾರಿಗೆ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ಬೆವರು ಸುರಿಸಿದ್ದಕ್ಕೆ ಫಲ ಸಿಕ್ಕಿದೆ.. ಜೊತೆಗೆ ತಾವು ಕನಸು ಕಂಡ ಆ ದಿನವೂ ಹತ್ತಿರವಾಗುತ್ತಿದೆ..

ಮರಿ ಗೌಡ್ರಿಗೆ ಡಬಲ್ ಸಂಭ್ರಮ.. ಡಬಲ್ ಸಡಗರ..!!
SRKಗೆ 50 ದಿನ.. ನಿಖಿಲ್ ರಾಜಕೀಯದ ಸುದಿನ..!!
130 ದಿನ, 130 ಜನ ಕ್ಯಾಮೆರಾ ಮುಂದೆ ಹಿಂದೆ ಶ್ರಮಿಸಿ ಮಾಡಿದ ಸಿನಿಮಾ ಸೀತಾರಾಮ ಕಲ್ಯಾಣ.. ಶ್ರಮಕ್ಕೆ ಎಂದಿಗೂ ಬೆಲೆ ಇದ್ದೇ ಇದೆ.. ಕಷ್ಟ ಪಟ್ಟು ಮಾಡಿದ ಕೆಲಸಕ್ಕೆ ಫಲ ಸಿಕ್ಕೇ ಸಿಗುತ್ತೆ.. ಅದರಂತೆ ಈಗ ಸೀತಾರಾಮ ಕಲ್ಯಾಣ ಚಿತ್ರ ಆಫ್ ಸೆಂಚುರಿ ಅಂದ್ರೆ ಐವತ್ತನೇ ದಿನ ಸನಿಹ ನಿಂತಿದೆ..

ಚೆನ್ನಾಂಬಿಕ ಫಿಲಂಸ್ ನಂತರ ದೊಡ್ಡ ಪ್ರೋಡಕ್ಷನ್ ಬ್ಯಾನರ್ ನಡಿ , ಹನುಮ ಭಕ್ತ ಎ.ಹರ್ಷ ಸಾರಥ್ಯದಲ್ಲಿ ಮೂಡಿಬಂದ ಫ್ಯಾಮಿಲಿ ಎಂಟರ್​​​ಟೈನ್ಮೆಂಟ್ ಸಿನಿಮಾ ಸೀತಾರಾಮ ಕಲ್ಯಾಣ.. ಕಳೆದ ಜನವರಿ 25ನೇ ತಾರೀಕ್ 300ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಸೀತಾರಾಮ ಕಲ್ಯಾಣ ಚಿತ್ತಾರವಾಗಿತ್ತು.. ಈ ಶುಕ್ರವಾರ ಕಳೆದ್ರೆ ರಾಜ್ಯಾದ ಅನೇಕ ಥಿಯೇಟರ್​​​​ಗಳಲ್ಲಿ ಸೀತಾರಾಮ ಕಲ್ಯಾಣ 50ದಿನ ಪೂರೈಸಲಿದೆ.. ಈ 50 ಪೂರೈಸಿದ ಸಂಭ್ರಮಕ್ಕೆ ಚಿತ್ರತಂಡ ಕರುನಾಡ ಚಿತ್ರಪ್ರೇಮಿಗಳಿಗೆ ಧನ್ಯವಾದ ಸಮರ್ಪಿಸಿದೆ..

ಮಂಡ್ಯ ಜೆಡಿಎಸ್​​ ಱಲಿಯಲ್ಲಿ ನಿಖಿಲ್ ಸ್ಫರ್ಧೆ ವಿಚಾರ ಖಚಿತ..!
ಯುವರಾಜನ ಹೆಸರು ಅಂತಿಮಗೊಳಿಸಿದ್ದಾರೆ ಕುಮಾರಸ್ವಾಮಿ..!
ಈಗಾಗಲೇ ಮಂಡ್ಯದಲ್ಲಿ ಬಿಸಿಲಿನ ಬಿಸಿಗಿಂತ ರಾಜಕೀಯ ಬಿಸಿ ಧಗಧಗಿಸುತ್ತಿದೆ.. ಅರ್ಧ ಸ್ಯಾಂಡಲ್​​​ವುಡ್ ಮಂಡ್ಯದಲ್ಲಿ ಟಿಕಾಣಿ ಹೊಡಿದ್ರು ಅಚ್ಚರಿ ಪಡಬೇಕಿಲ್ಲ.. ನಿಖಿಲ್ ಕುಮಾರ್ ಅವರ ಹೆಸರನ್ನು ಗುರುವಾರ ನಡೆಯಲಿರುವ ಸಮಾವೇಶದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಂತಿಮಗೊಳಿಸಿದ್ದಾರೆ.

ಒಟ್ನಲ್ಲಿ ಯುವರಾಜ ನಿಖಿಲ್ ಕುಮಾರ್​ ಅವರಿಗೆ ಡಬಲ್ ಧಮಾಕ , ಡಬಲ್ ಸಂಭ್ರಮದ ಜೊತೆಗೆ ಡಬಲ್ ಜವಾಬ್ದಾರಿ ಸಿಕ್ಕಿರುವುದಂತು ಸುಳ್ಳಲ್ಲ..

ಶ್ರೀಧರ್ ಶಿವಮೊಗ್ಗ_ಎಂಟರ್​​​​​ಟೈನ್ಮೆಟ್ ಬ್ಯೂರೋ-ಟಿವಿ5