ಮಾತೆ ಮಹಾದೇವಿ ಆರೋಗ್ಯ ಸ್ಥಿತಿ ಗಂಭೀರ..!

ಬೆಂಗಳೂರು: ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಾತೆಮಹಾದೇವಿ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಬಗ್ಗೆ ಆಸ್ಪತ್ರೆ ವೈದ್ಯರು ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ್ದಾರೆ.

ಮಣಿಪಾಲ್ ಆಸ್ಪತ್ರೆಯ ವೈದ್ಯರು ಮತ್ತು ಮಠದ ಸ್ವಾಮೀಜಿಗಳು ಪತ್ರಿಕಾಗೋಷ್ಠಿ ನಡೆಸಿದ್ದು, ಈ ಬಗ್ಗೆ ಮಾತನಾಡಿದ ಆಸ್ಪತ್ರೆ ವೈದ್ಯ ಸುದರ್ಶನ್ ಬಲ್ಲಾಳ್, ಮಾರ್ಚ್9 ರಂದು ಮಾತೆ ಮಹಾದೇವಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಕಿಡ್ನಿ ಹಾಗೂ ಶ್ವಾಸಕೋಶ ತೊಂದರೆ ಇದೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಸದ್ಯ ಐಸಿಯುಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಸದ್ಯದ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ನಾವು ಅವರ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ಳುತ್ತಿದ್ದೇವೆ. ಬಹು ಅಂಗಾಂಗ ವೈಫಲ್ಯ ಇರೋದ್ರಿಂದ 5ತಿಂಗಳ‌ ಹಿಂದೆ ಕಿಡ್ನಿ ಹಾಗೂ ಶ್ವಾಸಕೋಶ ತೊಂದರೆಗೆ ಚಿಕಿತ್ಸೆ ಪಡೆದಿದ್ರು. ಆಗ ಅವರ ಸ್ಥಿತಿ ಚೇತರಿಕೆ ಕಂಡಿತ್ತು. ಸದ್ಯ ಮತ್ತೆ ಅದೇ ಸಮಸ್ಯೆಯಿಂದ ದಾಖಲಾಗಿದ್ದಾರೆ. ಲಿಕ್ವಿಡ್ ಆಹಾರವನ್ನು ಮಾತ್ರ ಸದ್ಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.