ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಇನ್ನಿಲ್ಲ

ಬೆಂಗಳೂರು: ಕೂಡಲಸಂಗಮದ ಬಸವ ಧರ್ಮ ಪೀಠದ ಅಧ್ಯಕ್ಷೆ, ಮಾತೆ ಮಹಾದೇವಿ ಇಂದು ಮಧ್ಯಾಹ್ನದ ವೇಳೆಗೆ ಲಿಂಗೈಕ್ಯರಾಗಿದ್ದಾರೆ.

ಇಂದು ರಾಜಾಜಿನಗರದ ಬಸವ ಮಂಟಪದಲ್ಲಿ ಅರ್ಧಗಂಟೆ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದ್ದು, ಬಳಿಕ ಕೂಡಲಸಂಗಮಕ್ಕೆ ಕರೆದೊಯ್ದು, ನಾಳೆ ಕೂಡಲಸಂಗಮದಲ್ಲಿ ಲಿಂಗೈಕ್ಯ ಸಂಸ್ಕಾರ ನಡೆಸಲು ಸಿದ್ಧತೆ ನಡೆಸಲಾಗಿದೆ.

ಇನ್ನು ಮಾತೆ ಮಹಾದೇವಿ, ಜಗತ್ತಿನ ಪ್ರಥಮ ಮಹಿಳಾ ಜಗದ್ಗುರುವಾಗಿದ್ದು, 1946ರಲ್ಲಿ ಚಿತ್ರದುರ್ಗದ ಬಸಪ್ಪ-ಗಂಗಮ್ಮರ ಮಗಳಾಗಿ ಜನಿಸಿದ್ದರು. ಇವರ ಬಾಲ್ಯದ ಹೆಸರು ರತ್ನಾ ಎಂದಾಗಿದ್ದು, ತಮ್ಮ 19ನೇ ವರ್ಷದಲ್ಲಿ ಮಾತೆ ಮಹಾದೇವಿ ಆಧ್ಯಾತ್ಮದತ್ತ ಒಲವು ತೋರಿದ್ದರು.

ಬಿಎಸ್‌ಸಿ, ಎಂ ಎ ತತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದ ಮಾತೆ ಮಹಾದೇವಿ, ಲಿಂಗಾನಂದ ಶ್ರೀಗಳಿಂದ ಲಿಂಗದೀಕ್ಷೆ ಪಡೆದಿದ್ದರು. 1970ರಲ್ಲಿ ಮಹಿಳಾ ಜಗದ್ಗುರು ಪಟ್ಟ ಸ್ವಿಕರಿಸಿದ್ದು, ಗುರುಗಳಾದ ಲಿಂಗಾನಂದರ ಅಣತಿಯಂತೆ ಬೆಳೆದಿದ್ದು, 1992ರಲ್ಲಿ ಕರ್ನಾಟಕ ಸೇರಿದಂತೆ ದೆಹಲಿ, ಮಹಾರಾಷ್ಟ್ರ, ಆಂಧ್ರ ರಾಜ್ಯದಲ್ಲಿ ಬಸವ ಧರ್ಮ ಪೀಠ ಸ್ಥಾಪನೆ ಮಾಡಿದರು.

Recommended For You

Leave a Reply

Your email address will not be published. Required fields are marked *