ಕಾಲಿವುಡ್ ತೆಕ್ಕೆಗೆ ಬಿದ್ದ ಮಂಜಿನ ನಗರಿಯ ಅದೃಷ್ಟ ದೇವತೆ..!!

ಸ್ಯಾಂಡಲ್​ವುಡ್, ಟಾಲಿವುಡ್​ನಲ್ಲಿ ರಶ್ಮಿಕಾ ಮಂದಣ್ಣ ಹವಾ ನೋಡಿದವರು ಈಕೆ ಕಾಲಿವುಡ್​ಗೆ ಎಂಟ್ರಿ ಕೊಡೋ ದಿನಗಳು ದೂರ ಇಲ್ಲ ಅಂದಿದ್ರು.. ಇಳಯ ದಳಪತಿ ವಿಜಯ್ ಮತ್ತು ಅತ್ಲಿ ಕಾಂಬಿನೇಷನ್​​ ಸಿನಿಮಾ ಸಾನ್ವಿ ಹೀರೋಯಿನ್​ ಅಂತೆಲ್ಲಾ ಸುದ್ದಿಯಾಗಿತ್ತು.. ಅಂತೂ ಕೊಡಗಿನ ಕುವರಿ ಕಾಲಿವುಡ್ ಎಂಟ್ರಿ ಪಕ್ಕಾ ಆಗಿದೆ..

ಸೌತ್​ ಸಿನಿದುನಿಯಾದ ಮೋಸ್ಟ್ ಹ್ಯಾಪನಿಂಗ್ ಅಂಡ್ ಹಾಟ್ ಆ್ಯಕ್ಟ್ರೆಸ್ ರಶ್ಮಿಕಾ ಮಂದಣ್ಣ.. ಸ್ಯಾಂಡಲ್​ವುಡ್​, ಟಾಲಿವುಡ್ ನಿರ್ಮಾಪರ ಪಾಲಿನ ಅದೃಷ್ಠ ದೇವತೆಯಾಗಿರೋ ಸಾನ್ವಿ ಸಾಲು ಸಾಲು ಸಿನಿಮಾಗಳಲ್ಲಿ ಕಮಾಲ್ ಮಾಡ್ತಿದ್ದಾರೆ.. ಕನ್ನಡ ಮತ್ತು ತೆಲುಗಿನ ಟಾಪ್ ಹೀರೋಗಳ ಸಿನಿಮಾಗಳಲ್ಲಿ ಬಣ್ಣ ಹಚ್ಚಿ, ಸೈ ಅನ್ನಿಸಿಕೊಳ್ತಿದ್ದಾರೆ.. ಕರುನಾಡ ಕ್ರಶ್​​ ಈಗ ಸೌತ್ ಕ್ರಶ್​ ಆಗಿ ಅಭಿಮಾನಿಗಳ ಮನಗೆದ್ದಿದ್ದಾರೆ.. ಸ್ಯಾಂಡಲ್​ವುಡ್​, ಟಾಲಿವುಡ್ ನಂತ್ರ ಈಗ ಕಾಲಿವುಡ್ ಸರದಿ..

ಕಾಲಿವುಡ್ ತೆಕ್ಕೆಗೆ ಬಿದ್ದ ಮಂಜಿನ ನಗರಿಯ ಅದೃಷ್ಠ ದೇವತೆ..!!
ಸೂರ್ಯ ಸಹೋದರ ಕಾರ್ತಿ ಸಿನಿಮಾಗೆ ರಶ್ಮಿಕಾ ನಾಯಕಿ
ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಮುಟ್ಟಿದೆಲ್ಲಾ ಚಿನ್ನ ಆಗ್ತಿದೆ.. ಈಕೆ ನಟಿಸಿದ ಸಿನಿಮಾಗಳೆಲ್ಲಾ ಒಂದರ ಹಿಂದೊಂದರಂತೆ ಹಿಟ್ ಲಿಸ್ಟ್ ಸೇರ್ತಿವೆ.. ಕ್ಯೂಟ್​ ಕ್ಯೂಟ್ ಲುಕ್ಸ್ ಮತ್ತು ಅಭಿನಯದಿಂದ ಅಭಿಮಾನಿಗಳ ಚಿತ್ತ ಕದ್ದಿರೋ ಸಾನ್ವಿಗೆ ಕಾಲಿವುಡ್​ವುಡ್ ಅಂಗಳದಲ್ಲೂ ಅಭಿಮಾನಿಗಳಿದ್ದಾರೆ.. ಒಂದೂ ತಮಿಳು ಸಿನಿಮಾದಲ್ಲಿ ನಟಿಸದೇ ತಮಿಳು ಸಿನಿರಸಿಕರ ಅಭಿಮಾನ ಸಂಪಾದಿಸಿದ ರಶ್ಮಿಕಾ ಈಗ ಕಾಲಿವುಡ್​ಗೆ ​ ಎಂಟ್ರಿ ಕೊಡ್ತಿದ್ದಾರೆ..

ಈ ಹಿಂದೆ ಕೊಡಗಿನ ಕುವರಿ ರಶ್ಮಿಕಾ, ಇಳಯ ದಳಪತಿ ವಿಜಯ್ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ಗಾಳಿ ಸುದ್ದಿ ಕೇಳಿಬಂದಿತ್ತು.. ಕೊನೆಗೆ ಅದೆಲ್ಲಾ ಸುಳ್ಳು, ಬಟ್ ಶೀಘ್ರದಲ್ಲೇ ನಟಿಸ್ತೀನಿ ಅಂತ ರಶ್ಮಿಕಾ ಕ್ಲಾರಿಫಿಕೇಶನ್ ಕೊಟ್ಟಿದ್ರು.. ಅಂತೂ ಇಂತೂ ಸಾನ್ವಿ ಕಾಲಿವುಡ್​ಗೆ ಎಂಟ್ರಿ ಕೊಟ್ಟೇ ಬಿಟ್ಟಿದ್ದಾರೆ.. ಸೂರ್ಯ ಸಹೋದರ ಕಾರ್ತಿ ಅಭಿನಯದ ಮುಂದಿನ ಚಿತ್ರಕ್ಕೆ ರಶ್ಮಿಕಾ, ನಾಯಕಿಯಾಗಿ ಆಯ್ಕೆಯಾಗಿದ್ದು, ಸಿನಿಮಾ ಮುಹೂರ್ತದಲ್ಲಿ ಭಾಗವಹಿಸಿದ್ದಾರೆ..

ಡ್ರೀಮ್ ವಾರಿಯರ್ ಪಿಕ್ಚರ್ಸ್ ಬ್ಯಾನರ್​ನಲ್ಲಿ ಎಸ್​. ಆರ್ ಪ್ರಭು ನಿರ್ಮಾಣದ ಇನ್ನು ಹೆಸರಿಡದ ಸಿನಿಮಾದಲ್ಲಿ ಕಾರ್ತಿ ನಾಯಕರಾಗಿ ಬಣ್ಣ ಹಚ್ಚಿದ್ದಾರೆ.. ಅವರಿಗೆ ನಾಯಕಿಯಾಗಿ ಸೌತ್ ಕ್ರಶ್​ ರಶ್ಮಿಕಾ ಸಾಥ್ ಕೊಡ್ತಿದ್ದಾರೆ.. ಭಾಗ್ಯರಾಜ್ ಕಣ್ಣನ್ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳ್ತಿದ್ದಾರೆ..

ಒಟ್ಟಾರೆ ಇತ್ತೀಚಿನ ವರ್ಷಗಳಲ್ಲಿ ಕನ್ನಡದ ನಟಿಯರು ಹೀಗೆ ಸೌತ್ ಸಿನಿದುನಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಉದಾಹರಣೆಯಿಲ್ಲ.. ಆ ವಿಚಾರದಲ್ಲಿ ರಶ್ಮಿಕಾ ಮಂದಣ್ಣ ಕ್ರೇಜ್​ ನೋಡಿದ್ರೆ, ಅಚ್ಚರಿಯಾಗುತ್ತೆ.. ಅವ್ರು ಮತ್ತಷ್ಟು ಸಿನಿಮಾಗಳಲ್ಲಿ ನಟಿಸಲಿ ಅಂತ ಹಾರೈಸೋಣ..

ನಾಣಿ, ಫಿಲ್ಮ್ ಬ್ಯೂರೋ, ಟಿವಿ5 ಕನ್ನಡ

Recommended For You

Leave a Reply

Your email address will not be published. Required fields are marked *