ಆಸ್ಟ್ರೇಲಿಯಾಗೆ ಭಾರತ ವಿರುದ್ದ 35ರನ್​ಗಳಿಂದ ಜಯ

ನವದೆಹಲಿ: ದೆಹಲಿಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ 273ರನ್​ ಗುರಿಯನ್ನ  ನೀಡಿದೆ. ಟಾಸ್​ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸೀಸ್ ಆರಂಭಿಕ ಬ್ಯಾಟ್ಸ್​ಮೆನ್ ಉಸ್ಮಾನ್ ಖ್ವಾಜಾ ಶತಕದ ನೆರೆವಿನಿಂದ ಸವಾಲಿನ ಮೊತ್ತ ಪ್ರೇರಪಿಸಿತ್ತು.

ಆರೋನ್ ಫಿಂಚ್ 27ರನ್ ಗಳನ್ನು ಗಳಿಸಿ ಬೇಗ ವಿಕೆಟ್ ಒಪ್ಪಿಸಿದರು. ಪಿಟರ್ ಹ್ಯಾಂಡ್ಸ್​​ಕಂಬೋ 52, ಮರ್ಕಸ್ ಸ್ಟೋನಿಸ್ 20, ಆಸ್ಟನ್ ಟರ್ನರ್ 20, ರೀಚರ್ಡ್ ಸನ್ 29 ರನ್​ ಕಲೆಹಾಕಿದರು.

ಟೀಂ ಇಂಡಿಯಾ 273ರನ್ ಬೆನ್ನತ್ತಿದ್ದ ಆರಂಭಿಕ ಆಟಗಾರಾದ ರೋಹಿತ್ ಶಾರ್ಮಾ 56 ರನ್ ಗಳಿಸಿ ಔಟಾದರೇ ಶಿಖರ್ ದವನ್ ಕೇವಲ 12ರನ್ ಗಳಿಗೆ ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಕ್ಯಾಪ್ಟನ್ ಕೊಹ್ಲಿ 20ರನ್ ಗಳಿಸಲಷ್ಟೇ ಸಕ್ತರಾದರು. ರಿಷಬ್ ಪಂತ್ 16, ವಿಜಯ ಶಂಕರ್ 16ರನ್ ಗಳಿಗೆ ಔಟಾದರು.

ನಂತರ ಬಂದ ಕೇದರ್ ಜಾದವ್ 44 ರನ್ ಗಳನ್ನು ಸೇರಿಸಿ ಆಡುವಾಗ ಮಾಕ್ಸ್ ವೆಲ್​ಗೆ ಕ್ಯಾಚ್ ನೀಡಿ ಹೊರನಡೆದರು. ಭುವನೇಶ್ವರ್ ಕುಮಾರ್ ಕೊಂಚ ತಂಡಕ್ಕೆ ಆಸರೆಯಾಗಿದ್ದರು ಸಹ ಕೊನೆಯ ಕ್ಷಣದಲ್ಲಿ ಆಸ್ಟ್ರೇಲಿಯಾ ಬೀಗಿಯಾದ ಬೌಲಿಂಗ್​ನಿಂದ ಕೊನೆಗೂ ಭಾರತ 237ಕ್ಕೆ ತನ್ನೆಲ್ಲ ವಿಕೆಟ್ ಒಪ್ಪಿಸಿ ಸೋಲನ್ನು ಒಪ್ಪಿಕೊಂಡಿತ್ತು.

ಭಾರತದ ಪರ ಭುವನೇಶ್ವರ್ ಕುಮಾರ್ 3, ಮಹಮ್ಮದ್ ಸಮೀ 2, ರವೀಂದ್ರ ಜಡೇಜಾ 2 ಹಾಗೂ ಕುಲ್ದ್​ದೀಪ್ ಯಾದವ್ 1 ವಿಕೆಟ್ ಪಡೆದು ಆಸ್ಟ್ರೇಲಿಯಾ ಬೃಹತ್ ಮೊತ್ತಕ್ಕೆ ಬ್ರೇಕ್ ಹಾಕಿದರು.

ಆಸೀಸ್ ಪರ ಬೌಲಿಂಗ್ ನಲ್ಲಿ ಪ್ಯಾಟ್ ಕಮ್ಮಿನ್ಸ್, ಜಾಯ್ ರಿಚರ್ಡ್ಸನ್, ಮಾರ್ಕಸ್ ಸ್ಟೊಯಿನಿಸ್ ತಲಾ 5 ವಿಕೆಟ್ ಪಡೆದರು. ಆಡಮ್ ಜಂಪಾ 3 ವಿಕೆಟ್ ಪಡೆದರೆ, ನಾಥನ್ ಲಿಯಾನ್ 1 ವಿಕೆಟ್ ಪಡೆಯುವ ಮೂಲಕ ಆಸೀಸ್​ಗೆ ಗೆಲುವು ತಂದು ಕೊಟ್ಟರು.

ಒಟ್ಟಾರೇಯಾಗಿ ಟೀಂ ಇಂಡಿಯಾ ಏಕದಿನದ ಸರಣಿಯನ್ನು ಕೂಡ ಆಸೀಸ್ ತಂಡಕ್ಕೆ ಬಿಟ್ಟುಕೊಡುವ ಮೂಲಕ ಟಿ-20 ಹಾಗೂ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನ ಜಯಭೇರಿ ಬಾರಿಸಿತ್ತು.