ಭಾರತಕ್ಕೆ 273ರನ್​ ಗುರಿ ನೀಡಿದ ಆಸ್ಟ್ರೇಲಿಯಾ ತಂಡ

ನವದೆಹಲಿ: ದೆಹಲಿಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ 273ರನ್​ ಗುರಿಯನ್ನ ನೀಡಿದೆ. ಟಾಸ್​ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸೀಸ್ ಆರಂಭಿಕ ಬ್ಯಾಟ್ಸ್​ಮೆನ್ ಉಸ್ಮಾನ್ ಖ್ವಾಜಾ ಶತಕದ ನೆರೆವಿನಿಂದ ಸವಾಲಿನ ಮೊತ್ತ ಕಲೆಹಾಕಿತ್ತು

ಆಸೀಸ್ ಪರ ಆರೋನ್ ಫಿಂಚ್ 27ರನ್ ಗಳನ್ನು ಗಳಿಸಿ ಬೇಗ ವಿಕೆಟ್ ಒಪ್ಪಿಸಿದರು. ಪಿಟರ್ ಹ್ಯಾಂಡ್ಸ್​​ಕಂಬೋ 52, ಮರ್ಕಸ್ ಸ್ಟೋನಿಸ್ 20, ಆಸ್ಟನ್ ಟರ್ನರ್ 20, ರೀಚರ್ಡ್ ಸನ್ 29 ರನ್​ ಕಲೆಹಾಕಿದರು.

ಭಾರತದ ಪರ ಭುವನೇಶ್ವರ್ ಕುಮಾರ್ 3, ಮಹಮ್ಮದ್ ಸಮೀ 2, ರವೀಂದ್ರ ಜಡೇಜಾ 2 ಹಾಗೂ ಕುಲ್ದ್​ದೀಪ್ ಯಾದವ್ 1 ವಿಕೆಟ್ ಪಡೆದು ಆಸ್ಟ್ರೇಲಿಯಾ ಬೃಹತ್ ಮೊತ್ತಕ್ಕೆ ಬ್ರೇಕ್ ಹಾಕಿದರು.

Recommended For You

Leave a Reply

Your email address will not be published. Required fields are marked *