ನಾಳೆ ಭಾರತ- ಆಸೀಸ್ ನಡುವೆ ಕೊನೆಯ ಹೈವೋಲ್ಟೇಜ್ ಕದನ

ನವದೆಹಲಿ: ನಾಳೆ  ಫಿರೋಜ್  ಶಾ ಕೋಟ್ಲಾ ಅಂಗಳದಲ್ಲಿ   ಇಂಡೋ  – ಆಸಿಸ್  ನಡುವೆ  ಫೈನಲ್  ಫೈಟ್  ನಡೆಯಲಿದೆ.  ಕಳೆದ  ಎರಡು  ಪಂದ್ಯಗಳನ್ನ  ಸೋತು ಗಾಯಗೊಂಡ ಹುಲಿಯಂತಾಗಿರುವ  ಕೊಹ್ಲಿ  ಪಡೆ ತವರಿನಲ್ಲಿ  ಮಾನ ಉಳಿಸಿಕೊಳ್ಳಲು ದೊಡ್ಡ  ಹೋರಾಟವನ್ನ  ಮಾಡಲಿದೆ.  ಇತ್ತ ಆ್ಯರಾನ್ ಫಿಂಚ್  ಪಡೆ  ಭಾರತ ನೆಲದಲ್ಲಿ  ಮತ್ತೊಂದು  ಐತಿಹಾಸಿಕ  ಸರಣಿ ಗೆಲ್ಲುವ  ಕನಸು ಕಾಣುತ್ತಿದೆ.

ನಾಳೆ  ಇಂಡೋ – ಆಸಿಸ್  ಫೈನಲ್  ಫೈಟ್ 

ಫೀರೋಜ್​ ಶಾ  ಅಂಗಳದಲ್ಲಿ  ನಡೆಯಲಿದೆ  ಹೈವೋಲ್ಟೇಜ್  ಕದನ

ಟೀಂ ಇಂಡಿಯಾ ಮತ್ತು  ಆಸ್ಟ್ರೇಲಿಯಾ  ನಡುವಿನ ಐದನೇ ಮತ್ತು  ಅಂತಿಮ ಕದನಕ್ಕೆ  ದೆಹಲಿಯ  ಫಿರೋಜ್​  ಶಾ ಕೋಟ್ಲಾ ಅಂಗಳ  ಸಜ್ಜಾಗಿದೆ.  ಬನ್ನಿ  ಹಾಗಾದ್ರೆ  ರಾಷ್ಟ್ರರಾಜಧಾನಿಯಲ್ಲಿ  ನಡೆಯಲಿರುವ  ಹೈವೋಲ್ಟೇಜ್ ಕದನದ ಕಂಫ್ಲೀಟ್ ಡಿಟೇಲ್ಸ್​.

ಇಂಡೋ- ಆಸಿಸ್ ಅಂತಿಮ ಕದನಕ್ಕೆ ಫಿರೋಜ್ ಶಾ ಅಂಗಳ ಸಜ್ಜು

ಮೊನ್ನೆ ಮೊಹಾಲಿಯಲ್ಲಿ ನಡೆದ ನಾಲ್ಕನೆ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ ಗೆಲ್ಲಬಹುದಾಗಿದ್ದ ಪಂದ್ಯವನ್ನ ಸುಖ ಸುಮ್ಮನೆ ಕೈಚೆಲ್ಲಿಕೊಂಡು ಭಾರೀ ಮುಖಭಂಗ ಅನುಭವಿಸಿತ್ತು. 358 ರನ್‍ಗಲ ಬೃಹತ್ ಸವಾಲನ್ನ ನೀಡಿದ ಹೊರತಾಗಿಯೂ ಕಳಪೆ ಫೀಲ್ಡಿಂಗ್ ಮತ್ತು ಕೆಟ್ಟ ಬೌಲಿಂಗ್‍ನಿಂದಾಗಿ ಆಸಿಸ್ ಎದುರು ಮಂಡಿಯೂರಬೇಕಾಯಿತು.

ಗಾಯಗೊಂಡ ಹುಲಿಯಂತಾಗಿದೆ ಟೀಂ ಇಂಡಿಯಾ

ಸರಣಿ ಆರಂಭದಲ್ಲಿ ಎರಡು ಪಂದ್ಯಗಳನ್ನ ಗೆದ್ದು ಬೀಗಿದ್ದ ಬ್ಲೂ ಬಾಯ್ಸ್ ಇನ್ನೇನು ಮುಂದಿನ ಪಂದ್ಯದಲ್ಲಿ ಸರಣಿ ಗೆದ್ದೆ ಬಿಡುತ್ತೇವೆ ಅಂತ ತೀರ್ಮಾನಿಸಿತ್ತು. ಆದರೆ ರಾಂಚಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ 32 ರನ್‍ಗಳ ಅಂತರದಿಂದ ಸೋಲುವ ಮೂಲಕ ಸರಣಿಯಲ್ಲಿ ಮೊದಲ ಸೋಲು ಕಂಡಿತ್ತು.

ನಂತರ ಮೊಹಾಲಿ ಪಂದ್ಯದಲ್ಲಿ ಗೆಲ್ಲಲ್ಲೇಬೇಕೆಂದು ಕಣಕ್ಕಿಳಿದಿದ್ದ ಮತ್ತೆ ಅಚ್ಚರಿ ರೀತಿಯಲ್ಲಿ ನಿರಾಸೆ ಅನುಭವಿಸಬೇಕಾಯಿತು. ಬೆಟ್ಟದಷ್ಟು ರನ್ ಕಲೆ ಹಾಕಿದ್ದ ಟೀಂ ಇಂಡಿಯಾ ಆಸಿಸ್ ಬ್ಯಾಟ್ಸ್‍ಮನ್‍ಗಳ ಸಿಡಿಲಿ ಬ್ಬರಕ್ಕೆ ನಲುಗಿ ಹೋಯ್ತು. ಈ ಎರಡು ಸೋಲುಗಳು ಟೀಂ ಇಂಡಿಯಾದ ಚಿಂತೆಯನ್ನ ಹೆಚ್ಚಿಸಿದ್ದು ಕ್ಯಾಪ್ಟನ್ ಕೊಹ್ಲಿಯ ಚಿಂತೆಯನ್ನ ಹೆಚ್ಚಿಸಿದೆ. ಸರಣಿಯನ್ನೆ ಕೈಚೆಲ್ಲಿಕೊಳ್ಳುವ ಭೀತಿಯನ್ನ ಎದುರಿಸುತ್ತಿದೆ. ಇಂದು ಮಾನ ಉಳಿಸಿಕೊಳ್ಳಲು ವಿರಾಟ್ ಪಡೆ ಗೆಲ್ಲಲ್ಲೇಬೇಕಾದ ಒತ್ತಡದಲ್ಲಿದೆ.

ಫಿರೋಜ್ ಕೋಟ್ಲಾ ಮೈದಾನ ಕ್ಯಾಪ್ಟನ್ ಕೊಹ್ಲಿಗೆ ತವರು ಆಗಿದ್ದು ಕೊಹ್ಲಿಯಿಂದ ಹೆಚ್ಚಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅಂತಿಮ ಕದನದಲ್ಲಿ ತಂಡದ ಪ್ಲೆಯಿಂಗ್ ಇಲೆವೆನ್‍ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಐತಿಹಾಸಿಕ ಸರಣಿ ಗೆಲುವಿನ ಹೊಸ್ತಿಲಲ್ಲಿ ಫಿಂಚ್ ಪಡೆ

ಇತ್ತಿಚೆಗಷ್ಟೆ ಮೊದಲ ಬಾರಿ ಭಾರತ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಗೆದ್ದು ಇತಿಹಾಸ ಬರೆದಿದ್ದ ಆಸ್ಟ್ರೇಲಿಯಾ ಇದೀಗ ಚೊಚ್ಚಲ ಏಕದಿನ ಸರಣಿ ಮೇಲೆ ಕಣ್ಣಿಟ್ಟಿದ್ದೆ. ಈ ಸರಣಿ ಗೆದ್ದು ಟೀಂ ಇಂಡಿಯಾಗೆ ಮತ್ತೊಂದು ಶಾಕ್ ಕೊಡಲು ನಿರ್ಧರಿಸಿದೆ. ಆಸ್ಟ್ರೇಲಿಯಾ ತಂಡ ಸಮತೋಲನದಿಂದ ಕೂಡಿದ್ದು ಬ್ಯಾಟ್ಸ್‍ಮನ್‍ಗಳೆ ತಂಡದ ಆಧಾರ ಸ್ತಂಭವಾಗಿದ್ದಾರೆ.

ಒಟ್ನಲ್ಲಿ  ಟೀಂ ಇಂಡಿಯಾ ಕೊನೆಯ  ಪಂದ್ಯವನ್ನ  ಗೆದ್ದು   ಮಾನ ಉಳಿಸಿಕೊಳ್ಳಲು  ಪ್ಲಾನ್  ಮಾಡಿದ್ರೆ  ಇತ್ತ  ಆಸ್ಟ್ರೇಲಿಯಾ  ತಂಡ  ಭಾರತ  ನೆಲದಲ್ಲಿ  ಚೊಚ್ಚಲ  ಸರಣಿ  ಗೆದ್ದು ಇತಿಹಾಸ ನಿರ್ಮಿಸಲು  ಪ್ಲಾನ್  ಮಾಡಿದೆ.

ಪಂದ್ಯದ ಆರಂಭ: 1:30PM

ಸ್ಥಳ: ಫಿರೋಜ್  ಶಾ ಕೋಟ್ಲಾ