ಯುವರತ್ನ ಅಖಾಡಕ್ಕೆ ಸೌತ್​ ಸ್ಟಾರ್ ಸ್ಟಂಟ್ ಮಾಸ್ಟರ್ಸ್​….

ಬೆಂಗಳೂರು: ಸೂಪರ್​ ಹಿಟ್ ರಾಜಕುಮಾರ ಸೂಪರ್ ಕಾಂಬಿನೇಷನ್​ನಲ್ಲಿ ನಿರ್ಮಾಣವಾಗ್ತಿರೋ ಮೋಸ್ಟ್ ಎಕ್ಸ್​​ಪೆಕ್ಡೆಡ್ ಸಿನಿಮಾ ಯುವರತ್ನ. ಸದ್ಯ ಸ್ಟಾರ್​​ಕಾಸ್ಟ್ ಮತ್ತು ಟೆಕ್ನಿಕಲ್​ ಟೀಂನಿಂದ ಈ ಸಿನಿಮಾ ಬೇಜಾನ್ ಸೌಂಡ್ ಮಾಡ್ತಿದೆ. ಸೌತ್​ ಸಿನಿದುನಿಯಾದ ಸ್ಟಾರ್​​ ಸ್ಟಂಟ್​​​ ಮಾಸ್ಟರ್ಸ್ ಯುವರತ್ನ ಅಪ್ಪುಗೆ ಆ್ಯಕ್ಷನ್​ ಕಂಪೋಸ್​ ಮಾಡೋಕೆ ಬಂದಿದ್ದಾರೆ.

ಯುವರತ್ನ, ಸಂತೋಷ್ ಆನಂದ್​ರಾಮ್ ನಿರ್ದೇಶನದಲ್ಲಿ ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್ ನಟಿಸ್ತಿರೋ ಯೂತ್​ಫುಲ್ ಎಂಟ್ರಟ್ರೈನ್​ಮೆಂಟ್ ಸಿನಿಮಾ.. ರಾಜಕುಮಾರ ನಂತ್ರ ಹೊಂಬಾಳೆ ಫಿಲ್ಮ್ಸ್​​​​ ಬ್ಯಾನರ್​ನಲ್ಲಿ ಅಪ್ಪು- ಆನಂದ್​ರಾಮ್​ ಮತ್ತೆ ಒಟ್ಟಿಗೆ ಕೆಲಸ ಮಾಡ್ತಿದ್ದು, ಈಗಾಗಲೇ ಸದ್ದಿಲ್ಲದೇ ಫಸ್ಟ್ ಶೆಡ್ಯೂಲ್​ ಶೂಟಿಂಗ್ ಕಂಪ್ಲೀಟ್ ಮಾಡಿದೆ ಯುವರತ್ನ ಟೀಂ.

ಪವರ್​ ಆಫ್ ಯೂತ್ ಅನ್ನೋ ಟ್ಯಾಗ್​​ಲೈನ್​ ಇರೋ ಯುವರತ್ನ ಸಿನಿಮಾದಲ್ಲಿ ಪವರ್ ಸ್ಟಾರ್​ ಪುನೀತ್​ರಾಜ್​ಕುಮಾರ್ ಕಾಲೇಜ್ ಸ್ಟುಡೆಂಟ್​​ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮುಂಬೈ ಮೂಲದ ಸಾಯೇಶಾ ಸಿನಿಮಾದಲ್ಲಿ ಯುವರತ್ನ ಅಪ್ಪುಗೆ ನಾಯಕಿಯಾಗ್ತಿದ್ದು, ಡಾಲಿ ಧನಂಜಯ ನೆಗೆಟೀವ್ ಶೇಡ್​ ರೋಲ್​ನಲ್ಲಿ ಅಪ್ಪು ಸವಾಲ್ ಹಾಕ್ತಿದ್ದಾರೆ. ಸ್ಟಾರ್ ಕಾಸ್ಟ್ ಅಷ್ಟೇ ಅಲ್ಲ, ಯುವರತ್ನ ಟೆಕ್ನಿಕಲ್ ಟೀಮ್ ಸಹ ಸ್ಟ್ರಾಂಗ್​ ಆಗಿದೆ.

ಪವರ್ ಸ್ಟಾರ್ ಅಂದ್ರೆ ಸ್ಟಂಟ್ಸ್​​. ಸ್ಟಂಟ್ಸ್​​  ಅಂದ್ರೆ ಪವರ್ ಸ್ಟಾರ್

ಯೆಸ್. ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಸಿನಿಮಾ ಅಂದ್ರೆ, ನೆಕ್ಸ್ಟ್​ ಲೆವೆಲ್ ಸ್ಟಂಟ್ಸ್ ಮತ್ತು ಡ್ಯಾನ್ಸ್ ಎಕ್ಸ್​​ಪೆಕ್ಟ್ ಮಾಡ್ಬೋದು.. ಯುವರತ್ನ ಸಿನಿಮಾ ಈ ವಿಚಾರದಲ್ಲಿ ಪ್ರೇಕ್ಷಕರಿಗೆ ಮೋಸ ಮಾಡಲ್ಲ. ಅದಕ್ಕಂತ್ಲೇ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಘಟಾನುಘಟಿ ಟೆಕ್ನೀಷಿಯನ್ಸ್​ನ ಅಖಾಡಕ್ಕಿಳಿಸ್ತಿದ್ದಾರೆ. ಇದೀಗ ಚಿತ್ರದ ಆ್ಯಕ್ಷನ್​ ಸೀಕ್ವೆನ್ಸ್​ನ ಕಂಪೋಸ್ ಮಾಡೋಕೆ ರಾಮ್​ ಲಕ್ಷ್ಮಣ್​ ಮಾಸ್ಟರ್ಸ್​​ನ ಕರೆ ತಂದಿದ್ದಾರೆ.

ಯುವರತ್ನ ಅಖಾಡಕ್ಕೆ ಸೌತ್​ ಸ್ಟಾರ್ ಸ್ಟಂಟ್ ಮಾಸ್ಟರ್ಸ್​

ರಾಮ್​ ಲಕ್ಷ್ಮಣ್​​ ಸಹೋದರರು ಸೌತ್​ ಸಿನಿದುನಿಯಾದಲ್ಲಿ ಸ್ಟೈಲಿಶ್​ ಆ್ಯಕ್ಷನ್​ ಸೀಕ್ವೆನ್ಸ್ ಕಂಪೋಸ್​ ಮಾಡೋದಕ್ಕೆ ಫೇಮಸ್. ಚಿರಂಜೀವಿ, ಪವನ್​ ಕಲ್ಯಾಣ್​​, ಅಲ್ಲು ಅರ್ಜುನ್, ಜ್ಯೂನಿಯರ್​ ಎನ್​ಟಿಆರ್​​ರಂತಹ ಸೂಪರ್​ ಸ್ಟಾರ್​ಗಳ ಸಿನಿಮಾಗಳಿಗೆ ಆ್ಯಕ್ಷನ್​ ಕಂಪೋಸ್​ ಮಾಡಿರೋ ಜೋಡಿ ಇದು.. ಮೊದ್ಲೆ ಅಪ್ಪು ಅಂದ್ರೆ, ಡೇರ್​ ಡೆವಿಲ್ ಸ್ಟಂಟ್ಸ್ ಮಾಡೋದ್ರಲ್ಲಿ ಎತ್ತಿದ ಕೈ. ಅಂತಾದ್ರಲ್ಲಿ ರಾಮ್​-ಲಕ್ಷ್ಮಣ್​ ಮಾಸ್ಟರ್ಸ್ ಕಂಪೋಸ್​ ಮಾಡೋ ಸ್ಟೈಲಿಶ್​ ಫೈಟ್ಸ್​ನಲ್ಲಿ ಪವರ್ ಸ್ಟಾರ್ ಹೇಗೆ ಧೂಳೆಬ್ಬಿಸ್ಬೋದು ಅಂತ ಊಹಿಸಿ.

ಯುವರತ್ನ ಚಿತ್ರಕ್ಕಾಗಿ ಪವರ್​ ಪ್ಯಾಕ್ಡ್​​ ಸ್ಟಂಟ್ಸ್ ಕಂಪೋಸ್

ಹಲವು ಸೌತ್ ಸಿನಿಮಾಗಳಲ್ಲಿ ಖದರ್ ತೋರ್ಸಿರೋ ರಾಮ್​ ಲಕ್ಷ್ಮಣ್ ಮಾಸ್ಟರ್ಸ್ ಇತ್ತೀಚೆಗೆ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರಕ್ಕಾಗಿ ಅಷ್ಟೂ ಫೈಟ್​​ಗಳನ್ನ ಕಂಪೋಸ್​ ಮಾಡಿದ್ರು. ಇದೀಗ ಅವರೊಟ್ಟಿಗೆ ಯುವರತ್ನ ಟೀಮ್ ಮಾತುಕತೆ ನಡೆಸಿದೆ. ಈ ಆ್ಯಕ್ಷನ್​​​​ ಸೀಕ್ವೆನ್ಸ್​ಗಾಗಿ ಕೆಜಿಎಫ್​ ಖ್ಯಾತಿಯ ಆರ್ಟ್ ಡೈರೆಕ್ಟರ್ ಶಿವಕುಮಾರ್ ಭರ್ಜರಿ ಸೆಟ್​ಗಳನ್ನ ನಿರ್ಮಾಣ ಮಾಡ್ತಿದ್ದು, ಇಡೀ ಸೀಕ್ವೆನ್ಸ್​ ಬಗ್ಗೆ ಭರ್ಜರಿ ಪ್ಲಾನ್ ಸಿದ್ಧವಾಗ್ತಿದೆ. ರಾಮ್​​-ಲಕ್ಷ್ಮಣ್​ ಮತ್ತು ಅಪ್ಪು ಕಾಂಬಿನೇಷನ್​ನಲ್ಲಿ ಪವರ್​ ಪ್ಯಾಕ್ಡ್​​ ಸ್ಟಂಟ್ಸ್ ಮೂಡಿ ಬರೋದು ಗ್ಯಾರೆಂಟಿ.

ಕಿಕ್ ಕೊಡಲಿದೆ ಅಪ್ಪು- ರಾಮ್ ​ಲಕ್ಷ್ಮಣ್​​ ಕಾಂಬೋ ಆ್ಯಕ್ಷನ್

ಯುವರತ್ನ ಚಿತ್ರಕ್ಕಾಗಿ ರಾಮ್ ​- ಲಕ್ಷ್ಮಣ್​ ಮಾಸ್ಟರ್ಸ್ ವರ್ಕ್​ ಮಾಡ್ತಿರೋದ್ರ ಬಗ್ಗೆ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಟ್ವೀಟ್ ಮಾಡಿ ತಿಳಿಸಿದ್ದು, ಎಲ್ಲಾ ವಿಭಾಗದಲ್ಲೂ ಸಿನಿಮಾ ಅದ್ಭುತವಾಗಿ ಮೂಡಿ ಬರೋ ಸುಳಿವು ಸಿಕ್ತಿದೆ. ಒಟ್ಟಾರೆ ರಾಜಕುಮಾರ ಸೂಪರ್ ಹಿಟ್ ನಂತ್ರ ಹೊಂಬಾಳೆ ಫಿಲ್ಮ್​​ ಬ್ಯಾನರ್​​ ಮತ್ತು ಅಪ್ಪು- ಆನಂದ್​ರಾಮ್​ ಕಾಂಬಿನೇಷನ್​ನಲ್ಲಿ ಯುವರತ್ನ ನೆಕ್ಸ್ಟ್​ ಲೆವೆಲ್​​ನಲ್ಲಿ ಪ್ರೇಕ್ಷಕರೆದ್ರು ಬರ್ತಿದೆ.

ನಾಣಿ. ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Recommended For You

Leave a Reply

Your email address will not be published. Required fields are marked *