ಒಂದೇ ಸ್ಟುಡಿಯೋನಲ್ಲಿ ಸ್ಯಾಂಡಲ್​ವುಡ್ – ಟಾಲಿವುಡ್ ಸ್ಟಾರ್ ಸಮ್ಮಿಲನ

ಬೆಂಗಳೂರು: ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಹಾಗೂ ಟಾಲಿವುಡ್ ಸೂಪರ್ ಸ್ಟಾರ್  ಪ್ರಿನ್ಸ್ ಮಹೇಶ್ ಬಾಬು ಪರಸ್ಪರ ಭೇಟಿ ಮಾಡಿದ್ದಾರೆ.

ಹೈದಾರಾಬಾದ್​ನ ಅನ್ನಪೂರ್ಣ ಸ್ಟುಡಿಯೋನಲ್ಲಿ ಖಾಸಗಿ ಜಾಹೀರಾತೊಂದರ ಶೂಟಿಂಗ್ ನಿಮಿತ್ತ ಹೈದ್ರಾಬಾದ್​ಗೆ ತೆರಳಿದ್ದ ಶಿವಣ್ಣ ಹಾಗೂ ಕನ್ನಡದ ಖ್ಯಾತ ನಿರ್ಮಾಪಕ  ಕೆ.ಪಿ ಶ್ರೀಕಾಂತ್​ರನ್ನ ಪಕ್ಕದಲ್ಲೇ ಮಹರ್ಷಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಮಹೇಶ್ ಬಾಬು ಬಂದು ಮಾತನಾಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಶಿವಣ್ಣನ ಅಪ್ ಕಮಿಂಗ್ ಸಿನಿಮಾಗಳು ಸೇರಿದಂತೆ ದೇಶದ್ಯಾಂತ ನಡೆಯಲಿರುವ ಲೋಕಸಭಾ ಚುನಾವಣೆ ಕುರಿತಾಗಿಯೂ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.