ಲಕ್ಷ್ಮಣ್ ಕೊಲೆ ಕೇಸ್: ಕನ್ನಡದ ಡೈರೆಕ್ಟರ್ ಹಾಕಿದ್ದ ಖತರ್ನಾಕ್ ಸ್ಕೆಚ್..!

ಬೆಂಗಳೂರು: ರೌಡಿಶೀಟರ್ ಲಕ್ಷ್ಮಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಯೊಂದು ಬಹಿರಂಗವಾಗಿದ್ದು, ಆರೋಪಿ ವರ್ಷಿಣಿ ಜೊತೆ ಆಕೆಯ ಪ್ರಿಯತಮ ಧಾರಾವಾಹಿಯೊಂದರ ಕೋ ಡೈರೆಕ್ಟರ್ ರೂಪೇಶ್ ಕೂಡ ಕೊಲೆ ಮಾಡಲು ಸಾಥ್ ನೀಡಿದ್ದಾನೆನ್ನಲಾಗಿದೆ.

ಲಕ್ಷ್ಮಣ್ ಭೂ ಕಬಳಿಕೆಯಲ್ಲಿ ಜೋರಾಗಿದ್ದು, ರೂಪೇಶ್ ಕೂಡ ಈ ಹಿಂದೆ ಲಕ್ಷ್ಮಣ್ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ.

ಫೆನ್ಸಿಂಗ್ ಹಾಕಿದ್ದ ಲಕ್ಷ್ಮಣನ ತಲೆ ಎತ್ತಿ‌ ತಾನು ಪಾರುಪತ್ಯ ಮೆರಿಬೇಕೆಂದು ರೂಪೇಶ್ ಪ್ಲಾನ್ ರೂಪಿಸಿದ್ದು, ಲಕ್ಷ್ಮಣನನ್ನ ಕೊಲೆ ಮಾಡಿದ್ರೆ ಇಡೀ ಲಕ್ಷ್ಮಣನ ಸ್ವತ್ತು ತಮ್ಮದೇ ಆಗುತ್ತದೆಂದು ರೂಪೇಶ ಕ್ಯಾಟ್ ಹಾಗೂ ಹೇಮಂತನ ತಲೆ ಕೆಡಿಸಿದ್ದು, ರೂಪೇಶ್ ಮಾತಿನಂತೆ ಹೇಮಂತ್, ಕ್ಯಾಟ್ ಕೋಟಿ ಆಸ್ತಿ ತಮ್ಮ ಪಾಲಾಗತ್ತೆ ಎಂದು ನಂಬಿದ್ದರು.

ಅಲ್ಲದೇ, ಕೊಲೆಗೆ ಸ್ಕೆಚ್ ಹಾಕಿದ್ದ ಜೆಡಿಎಸ್ ನಾಯಕಿ ಪುತ್ರಿ ವರ್ಷಿಣಿ ರೂಪೇಶ್ ಪ್ರೇಯಸಿಯಾಗಿದ್ದಳು. ವರ್ಷಿಣಿ ಮತ್ತು ಭೂಮಿಗೆ ಆಸೆ ಪಟ್ಟಿದ್ದ ರೂಪೇಶ್ ಖತರ್‌ನಾಕ್ ಪ್ಲಾನ್ ಮಾಡಿದ್ದ. ವರ್ಷಿಣಿಗೆ ಲಕ್ಷ್ಮಣ್ ಲಕ್ಷಾಂತರ ರೂಪಾಯಿ ಹಣ ನೀಡಿದ್ದು, ಆ ಹಣದಿಂದಲೇ ಲಕ್ಷ್ಮಣ್ ಹತ್ಯೆಗೆ ವರ್ಷಿಣಿ ಮತ್ತು ರೂಪೇಶ್ ಸುಪಾರಿ ನೀಡಿದ್ದರು.