ರೌಡಿಶೀಟರ್ ಲಕ್ಷ್ಮಣ್ ಕೊಲೆ ಹಿಂದೆ ಇತ್ತು ಜೆಡಿಎಸ್ ನಾಯಕಿ ಪುತ್ರಿಯ ಮಾಸ್ಟರ್‌ಪ್ಲಾನ್..!

ಬೆಂಗಳೂರು: ರೌಡಿಶೀಟರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಷಿಣಿ ಎಂಬ ಯುವತಿಯನ್ನು ಬಂಧಿಸಿದ್ದು, ಈಕೆ ಮದ್ದೂರು ಮೂಲದ ಜೆಡಿಎಸ್ ನಾಯಕಿ ಪದ್ಮ ಹರೀಶ್ ಪುತ್ರಿಯಾಗಿದ್ದಾಳೆ.

ಮದ್ದೂರು ತಾಲ್ಲೂಕು ಮಹಿಳಾ ಘಟಕದ ಜೆಡಿಎಸ್ ನಾಯಕಿ ಪದ್ಮರ ಮಗಳಾಗಿರುವ ವರ್ಷಿಣಿಗೆ ರೌಡಿ ಲಕ್ಷ್ಮಣ್ ಜೊತೆ ನಂಟಿತ್ತಂತೆ. ಲಕ್ಷ್ಮಣ್ ಕೊಲೆಯಾದ ದಿನ ವರ್ಷಿಣಿ, ಲಕ್ಷ್ಮಣ್‌ಗೆ ವಾಟ್ಸಪ್‌ ಕಾಲ್ ಮಾಡಿದ್ದು, ರಹಸ್ಯ ಸ್ಥಳಕ್ಕೆ ಬರುವಂತೆ ಕರೆದಿದ್ದರು ಎನ್ನಲಾಗಿದೆ.

ಇನ್ನು ವರ್ಷಿಣಿ ಮತ್ತು ಲಕ್ಷ್ಮಣ್ ಅಕ್ಕಪಕ್ಕದ ಮನೆಯವರಾಗಿದ್ದು, ಆಕೆಯ ಭೇಟಿಗೆ ತೆರಳಿದ್ದರ ಬಗ್ಗೆ ಲಕ್ಷ್ಮಣ್ ಪತ್ನಿ ಚೈತ್ರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡುವಾಗ ವರ್ಷಿಣಿ ಹೆಲರಿನಲ್ಲೇ ದೂರು ನೀಡಿದ್ದು, ಲಕ್ಷ್ಮಣ್‌ಗೂ ವರ್ಷಿಣಿಗೂ ಏನು ಸಂಬಂಧ ಎನ್ನುವ ಪ್ರಶ್ನೆ ಉದ್ಭವಿಸಿದೆ.