TV5 ಕಚೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಸಂಭ್ರಮ

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಟಿವಿ 5 ಕಚೇರಿಯಲ್ಲಿ ಕೇಕ್ ಕತ್ತರಿಸಿ ಮಹಿಳಾ ದಿನಾಚರಣೆ ಸಂಭ್ರಮ ಆಚರಿಸಲಾಯಿತು.ನಟಿ ಹಾಗೂ ರಾಜಕರಣಿ ತಾರಾ ಟಿವಿ ಕಚೇರಿಗೆ ಬಂದು ಕೇಕ್​ ಕತ್ತರಿಸಿ ಎಲ್ಲರಿಗೂ ಶುಭ ಹಾರೈಸಿದರು.

ನನಗೆ ಮಹಿಳೆ ಆಗಿ ತುಂಬಾ ಹೆಮ್ಮೆ ಅನ್ನಿಸುತ್ತೆ. ಪ್ರತಿಯೊಬ್ಬ ಪುರುಷನ ಹಿಂದೆ ಮಹಿಳೆ ಇರ್ತಾಳೆ ಅಂತ ಹೇಳ್ತಾರೆ ಆದರೆ ಮಹಿಳೆ ಪ್ರತಿ ಹಂತದಲ್ಲಿ ಜೊತೆಯಾಗಿ ಸಾಗುತ್ತಾಳೆ. ಒಂದು ಹೆಜ್ಜೆ ಮುಂದೆಯೇ ಇರ್ತಾಳೆ. ಇಂದು ಎಲ್ಲಾ ಕ್ಷೇತ್ರದಲ್ಲೂ ಮಹಿಳೆ ಇದ್ದಾಳೆ ಎಂದರು.

ಇನ್ನೂ  ಮಾಧ್ಯಮ ಕ್ಷೇತ್ರದಲ್ಲೂ  ಮಹಿಳೇಯರು ಇರೋದು ನನಗೆ ಖುಷಿ ಎನ್ನಿಸುತ್ತೆ. ಎಂತಹ ಸನ್ನೀವೇಶದಲ್ಲೂ ಮುಂದೆ ನುಗ್ಗಿ ವರದಿ ಮಾಡುತ್ತಾರೆ ಎಂದು ತಮ್ಮ ಮಹಿಳೆಯರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.