ಚುನಾವಣೆ ನೆಪದಲ್ಲಿ ಪೊಲೀಸರು ಅನಗತ್ಯ ಕಿರುಕುಳ : ಹಾಲಿ ಸಚಿವರ ಅಳಲು

ಮಂಗಳೂರು: ಲೋಕಸಭಾ ಚುನಾವಣೆ ನೆಪದಲ್ಲಿ ಪೊಲೀಸರು ಅನಗತ್ಯ ಕಿರುಕುಳ ನೀಡುತ್ತಿದ್ದಾರೆಂದು ಪೊಲೀಸರ ವಿರುದ್ಧ ಸಚಿವ ಯು.ಟಿ ಖಾದರ್ ಆರೋಪ ಮಾಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಚುನಾವಣೆ ನೆಪದಲ್ಲಿ ಪೊಲೀಸ್ ಇಲಾಖೆ ಕೆಲವರಿಗೆ ಅನಗತ್ಯ ಕಿರುಕುಳ ನೀಡುತ್ತಿದೆ ಚುನಾವಣಾ ಆಯೋಗದ ಗೈಡ್ ಲೈನ್ಸ್ ಉಲ್ಲಂಘಿಸಿ ತೊಂದರೆ ಕೊಡ್ತಾರೆ ಎಂದು ಆರೋಪಿಸಿದ್ದಾರೆ.
ಕೇಸು ಕೋರ್ಟ್ ನಲ್ಲಿ ಬಿಟ್ಟು ಹೋದರೂ ತೊಂದರೆ ಕೊಡ್ತಾರೆ, ಠಾಣೆಗೆ ಕರೆಸಿ ನಿರಪರಾಧಿಗಳಿಗೂ ಚುನಾವಣೆ ಕಾರಣಕ್ಕೆ ತೊಂದರೆಯಾಗುತ್ತಿದ್ದು ಇದರಿಂದ ಅಪರಾಧ ಚಟುವಟಿಕೆಯಿಂದ ದೂರವಾಗಿದ್ದವರಿಗೆ ಮಾನಸಿಕ ತೊಂದರೆಯಾಗುತ್ತಿದೆ ಹೀಗಾಗಿ ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಮತ್ತು ಎಸ್ಪಿಗೆ ಗಮನಕ್ಕೆ ತಂದಿದ್ದೇನೆ ಎಂದರು.
ಇನ್ನು ಆಯೋಗದ ಗೈಡ್ ಲೈನ್ ಪ್ರಕಾರ ಪೊಲೀಸರು ಕೆಲಸ ಮಾಡಲಿ ನ್ಯಾಯಾಲಯ ನಿರಪರಾಧಿ ಅಂದ್ರೂ ಪೊಲೀಸರು ಕರೆದು ಟಾರ್ಚರ್ ಮಾಡ್ತಿದಾರೆ ರೌಡಿ ಲಿಸ್ಟ್ ನಲ್ಲಿ ಇಲ್ಲದೇ ಇದ್ರೂ ಪೊಲೀಸ್ ಠಾಣೆಗೆ ಕರೆಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದರು.
ಸದ್ಯ ನನ್ನ ಹೆಸರು ಯಾರೇ ಹೇಳಿದರೂ ಪೊಲೀಸ್ ಅಧಿಕಾರಿಗಳು ನನಗೆ ಕರೆ ಮಾಡಲಿ ಅದುವಲ್ಲದೇ ತಪ್ಪು ಮಾಡಿದವರು ನನ್ನ ಹೆಸರು ಹೇಳಿದ ಬಗ್ಗೆ ನನ್ನ ಗಮನಕ್ಕೆ ಬಂದಿದೆ ಎಂದು ನಗಾರಭಿವೃದ್ಧಿ ಸಚಿವ ಯು.ಟಿ ಖಾದರ್ ನುಡಿದರು.