ಇಂದು ಆಸ್ಟ್ರೇಲಿಯಾ ವಿರುದ್ಧ 2ನೇ ಟಿ20 ಪಂದ್ಯ

ಇಂದು ಆಸೀಸ್​​-ಭಾರತ ಟಿ-20 ಸರಣಿಯ 2ನೇ ಕದನ. ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, 2 ಪಂದ್ಯಗಳ ಸರಣಿಯಲ್ಲಿ ಭಾರತ 0-1 ರಿಂದ ಹಿಂದಿದ್ದು, ಸರಣಿ ಡ್ರಾ ಮಾಡಿಕೊಳ್ಳಲು ಭಾರತ ಎದುರು ನೋಡುತ್ತಿದೆ.

ತವರು ಮೈದಾನದಲ್ಲಿ ಅಬ್ಬರಿಸಲು ಉತ್ಸುಕರಾಗಿರುವ ಕೆ.ಎಲ್​​​ ರಾಹುಲ್​​​ ವಿಶ್ವಕಪ್​​​ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಶತಾಯುಗತಾಯ ಪ್ರಯತ್ನ ನಡೆಸಿದ್ದಾರೆ. ಇನ್ನು 2008ರ ಬಳಿಕ ಮೊದಲ ಬಾರಿಗೆ ಭಾರತದ ವಿರುದ್ಧ ಟಿ-20 ಸರಣಿ ಗೆಲ್ಲಲು ಆಸ್ಟ್ರೇಲಿಯಾ ಕಾತರಿಸುತ್ತಿದ್ದು, ಭಾರತಕ್ಕೆ ಗೆಲ್ಲಲೇಬೇಕಾದ ಒತ್ತಡ ಇದೆ.

Recommended For You

Leave a Reply

Your email address will not be published. Required fields are marked *