Top

ಗಲ್ಫ್ ರಾಷ್ಟ್ರಗಳಲ್ಲಿ ಕೆಲಸಕ್ಕೆ ಹೋಗುವವರೇ ಹುಷಾರ್..!

ಗಲ್ಫ್ ರಾಷ್ಟ್ರಗಳಲ್ಲಿ ಕೆಲಸಕ್ಕೆ ಹೋಗುವವರೇ ಹುಷಾರ್..!
X

ಗಲ್ಫ್ ರಾಷ್ಟ್ರಗಳಲ್ಲಿ ಕೆಲಸಕ್ಕೆ ಹೋಗುವವರೇ ಹುಷಾರ್.!ಫ್ಲೈಟ್​ಗೆ ದುಡ್ಡು ಅವರೇ ಕೊಡ್ತಾರೆ.. ಖೆಡ್ಡಾನೂ ತೋಡ್ತಾರೆ..! ಮಹಿಳೆಯರನ್ನ ನಂಬಿಸಿ ವಂಚಿಸ್ತಾರೆ ಖತರ್ನಾಕ್​ ಏಜೆಂಟರು ಬೆಂಗಳೂರಿನ ಮೂಲಕವೇ ನಡೀತಿದೆ ಡೇಂಜರ್ಸ್​ ದಂಧೆ..! .. ನಟೋರಿಯಸ್​ ಗ್ಯಾಂಗ್​ ಬಣ್ಣ ಬಯಲು ಮಾಡಿದೆ TV5..!

ಗಲ್ಫ್​ ರಾಷ್ಟ್ರಗಳಲ್ಲಿ ಕೆಲಸವಿದೆ.. ಒಂದೇ ಒಂದು ರೂಪಾಯಿ ಖುರ್ಚು ಇಲ್ಲದೆಯೇ ಕಳುಹಿಸುತ್ತೇವೆ ಅಂತಾರೆ. ಹೋಗೋ ಖರ್ಚು ಕೂಡ ನಾವೇ ಕೊಡ್ತಿವಿ ಅಂತಾರೆ. ಆದ್ರೆ ಈ ಸಹಾಯದ ಹಿಂದೆ ನಯವಂಚನೆ ಅಡಗಿದೆ. ಗಲ್ಪ್​ ದುನಿಯಾ ಆಸೆ ತೋರಿಸಿ ಏನೋ ಅರಿಯದ ಅಮಾಯಕರನ್ನ ಅಪರಾಧಿಗಳನ್ನಾಗಿ ಮಾಡ್ತಿದ್ದಾರೆ. ಹೌದು, ಇಂಥವೊಂದು ನಟೋರಿಯಸ್​ ಗ್ಯಾಂಗ್​ ಬೆನ್ನತ್ತಿ tv5 ತಂಡ ಅತಿದೊಡ್ಡ ಸ್ಮಗ್ಲಿಂಗ್​ ಚಾಲಾವನ್ನೇ ಭೇದಿಸಿದೆ. ನೂರಾರು ಅಮಾಯಕರು ಬಲಿಯಾಗೋದನ್ನ ತಪ್ಪಿಸಿದೆ.. ಇಷ್ಟಕ್ಕೂ ಏನಿದು ಆಪರೇಷನ್​ ಗಲ್ಫ್​.. ತೋರಿಸ್ತೀವಿ ಬನ್ನಿ...

ಗಲ್ಫ್ ರಾಷ್ಟ್ರಗಳಲ್ಲಿ ಕೆಲಸಕ್ಕೆ ಹೋಗುವವರೇ ಹುಷಾರ್..!

ಫ್ಲೈಟ್​ಗೆ ದುಡ್ಡು ಅವರೇ ಕೊಡ್ತಾರೆ.. ಖೆಡ್ಡಾನೂ ತೋಡ್ತಾರೆ..!

ಮಹಿಳೆಯರನ್ನ ನಂಬಿಸಿ ವಂಚಿಸ್ತಾರೆ ಖತರ್ನಾಕ್​ ಏಜೆಂಟರು..!

ಬೆಂಗಳೂರಿನ ಮೂಲಕವೇ ನಡೀತಿದೆ ಡೇಂಜರ್ಸ್​ ದಂಧೆ..!

ನಟೋರಿಯಸ್​ ಗ್ಯಾಂಗ್​ ಬಣ್ಣ ಬಯಲು ಮಾಡಿದೆ TV5..!

ಕೇಳಿದ್ರಲ್ಲ.. ಹೊಟ್ಟೆಪಾಡಿಗಾಗಿ ದೇಶವಲ್ಲದ ದೇಶಕ್ಕೆ ದುಡಿಯಲು ಹೋಗಿ ಸಂಕಷ್ಟದಲ್ಲಿ ಸಿಲುಕಿರೋ ಮಹಿಳೆಯೊಬ್ಬರ ನೋವಿನ ಮಾತುಗಳಿವು.. ದೂರದ ಮರುಭೂಮಿ ದೇಶದಲ್ಲಿ ಮಹಿಳೆಯೊಬ್ಬರು ಪಡುತ್ತಿರೋ ನರಕಯಾತನೆಯ ಗೋಳಾಟವಿದು..

ಮಾಡಲು ಒಳ್ಳೆಯ ಕೆಲಸ.. ಕೈತುಂಬಾ ಸಂಬಳ.. ಇಂಥದೊಂದು ಆಸೆಯನ್ನ ತೋರಿಸಿ ದೂರದ ಗಲ್ಫ್​ ರಾಷ್ಟ್ರಗಳಿಗೆ ಕಳುಹಿಸುವ ಏಜೆಂಟರ್​ ಅದೆಷ್ಟೋ ಅಮಾಯಕರ ಬಾಳಿನ ಜೊತೆ ಆಟವಾಡುತ್ತಿದ್ದಾರೆ. ಕುಟುಂಬವನ್ನ ಸಾಕಲು ಅನಿವಾರ್ಯವಾಗಿ ದೇಶ ಬಿಟ್ಟು ಗಲ್ಫ್​ ಕಂಟ್ರಿಗಳತ್ತ ಮುಖ ಮಾಡುವವರನ್ನ ಟ್ರಾಪ್​ ಮಾಡೋ ದಂಧೆ ಜೋರಾಗಿಯೇ ನಡೆಯುತ್ತಿದೆ. ದೇಶವಲ್ಲದ ದೇಶದಲ್ಲಿ ಅವರಿಗೆ ಏನೋ ಅರಿಯದೇ ನರಕಯಾತನೆ ಪಡುತ್ತಿದ್ದಾರೆ.

ಅದೆಷ್ಟೋ ಮಂದಿ ಗಲ್ಫ್​ ರಾಷ್ಟ್ರಗಳಿಗೆ ಕೆಲಸಕ್ಕೆ ಅಂತು ಹೋಗಿ ಕಷ್ಟಗಳನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ನಯವಂಚಕ ಏಜೆಂಟರು.. ಇಂಥ ಖತರ್ನಾಕ್​ ಖದೀಮರ ಬಲೆಗೆ ಬೀಳಿಸುವ ಅಮಾಯಕರು ದೂರದ ಗಲ್ಫ್​ ಕಂಟ್ರಿಗಳಲ್ಲಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ಇಂಥ ವಂಚಕರಿಗೆ ಸಿಕ್ಕಿ ಸಂಕಷ್ಟಕ್ಕೀಡಾದ ಮಹಿಳೆಯೊಬ್ಬರು TV5 ಪ್ರತಿನಿಧಿಯನ್ನ ಸಂಪರ್ಕಿಸಿದಾಗ ಡೇಂಜರ್ಸ್​​ ಏಜೆಂಟರ ಬಣ್ಣ ಬಯಲು ಮಾಡಲು ಟಿವಿ5 ತಂಡ ನಿರ್ಧರಿಸಿತು.. ಅಲ್ಲಿಂದ ಶುರುವಾಗಿದ್ದೇ ಟಿವಿ5 ಆಪರೇಷನ್​ ಗಲ್ಫ್​..

ಗಲ್ಫ್​ ರಾಷ್ಟ್ರಗಳಲ್ಲಿ ಕೆಲಸ ಕೊಡಿಸ್ತೀವಿ ಅಂತ ವಂಚಿಸೋ ಗ್ಯಾಂಗ್​..!

ಖತರ್ನಾಕ್ ಏಜೆಂಟರ ಅಸಲಿ ಬಣ್ಣ ಬಯಲು ಮಾಡಿದೆ TV5..!

ಪಾತಕಿಗಳ ಬೆನ್ನತ್ತಿದ TV5 ತಂಡಕ್ಕೆ ಸಿಕ್ಕಿದೆ ಬೆಚ್ಚಿಬೀಳಿಸುವ ಸತ್ಯ.!

ಈ ಪೋಟೋವನ್ನ ನೋಡಿ.. ಇವ್ನ ಹೆಸರು ರಜಾಕ್​ ಅಲಿಯಾಸ್ ಅಬ್ದುಲ್​ ರಜಾಕ್​.. ಇದೊಂದೇ ಇವನ್ನ ಫರ್ಮೆಂಟ್​ ಹೆಸರೇನಲ್ಲ.. ದಿನಕ್ಕೊಂದು ಕ್ಷಣಕ್ಕೊಂದು ಚೇಂಜ್​ ಮಾಡ್ತಾನೇ ಇರ್ತಾನೆ.. ಇದೇ ಇವನ್ನ ಅಸಲಿ ಆಟ.. ಇವನಿಗೆ ಭಾರತ ಸೇರಿದಂತೆ ಗಲ್ಫ್​ ಕಂಟ್ರಿಯಲ್ಲಿ ಸಾಕಷ್ಟು ನೆಟ್​ವರ್ಕ್​ ಇದೆ. ಈ ಪಾತಕಿಯೇ ಗಲ್ಪ್​​ ಟ್ರಾಪ್​ ಟ್ರಾಜಡಿ ಸ್ಟೋರಿಯಲ್ಲಿ ಮಾಸ್ಟರ್​ ಮೈಂಡ್​..

ಫೋನೋನಲ್ಲಿ ಟಿವಿ5 ತಂಡದ ಜೊತೆ ತಮ್ಮ ಕಷ್ಟ ಹೇಳಿಕೊಂಡ ಮಹಿಳೆಯ ಹೆಸರು ಪದ್ಮ.. ಆಂಧ್ರದ ಖಮ್ಮಂ ಜಿಲ್ಲೆಯವರು. ಆಕೆಯ ಕುಟುಂಬ ಪಡುತ್ತಿರೋ ಕಷ್ಟವನ್ನ ನೋಡಿ ಕೆಲಸ ಮಾಡಿ ಪೋಷಿಸಲು ನಿರ್ಧರಿಸಿದ್ರು.. ಆದ್ರೆ ದುಬೈನಲ್ಲಿ ಕೆಲಸ ಮಾಡಿದ್ರೆ ಕೈತುಂಬಾ ಸಂಬಳ ಸಿಗುತ್ತೆ ಅಂತ ದುಬೈಗೆ ಹೋಗಲು ನಿರ್ಧರಿಸಿದ್ದಾರೆ. ಇದೇ ನಿರ್ಣಯ ಪದ್ಮರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ದುಬೈಗೆ ಹೋಗಲು ಮುಂದಾದ ಆಕೆ ಏಜೆಂಟ್​ ರಜಾಕ್​ನನ್ನ ಸಂಪರ್ಕಿಸಿದ್ದಾಳೆ. ಒಮೆನ್​ನಲ್ಲಿ ಒಳ್ಳೆಯ ಕೆಲಸವಿದೆ ಅಂತ ನಂಬಿಸಿದ ರಜಾಕ್​, ಪೋನ್​​ನಲ್ಲೇ ಒಮನ್​ಗೆ ಹೋಗೋ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಟ್ಟಿದ್ದಾನೆ. ಫ್ಲೈಟ್​ ಟಿಕೆಟ್​, ಖುರ್ಚು ಹೋಗೋ ಡೇಟ್​ ಕೂಡ ಅವನೇ ಫಿಕ್ಸ್​ ಮಾಡಿದ್ದಾನೆ.. ಇಲ್ಲಿಂದ ಶುರುವಾಗಿ ಅವನ ಅಸಲಿ ಆಟ..

ಜುಲೈ 24, 2018.. ಬೆಂಗಳೂರು TO ಒಮನ್​ಗೆ ಪಯಣ..!

ಬೆಂಗಳೂರಿನ ಹೆಗ್ಡೆನಗರದಲ್ಲಿ ಆಕೆಗೆ ಕೊಟ್ಟಿದ್ದಾರೆ ಪಾರ್ಸಲ್​..!

ರಜಾಕ್​ ಗ್ಯಾಂಗ್​ ಕೊಟ್ಟ ಪಾರ್ಸಲ್​ನಲ್ಲಿ ಇದ್ದಿದ್ದೇನು..?

ಆಂಧ್ರದ ಪದ್ಮರನ್ನ ಒಮನ್​ಗೆ ಕಳುಹಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದ ರಜಾಕ್​, ಕಳೆದ ವರ್ಷ ಜುಲೈ 24ರಂದು ಬೆಂಗಳೂರಿನ ಏರ್​ಪೋರ್ಟ್​ನಿಂದ ಒಮನ್​ಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಸಂಜೆ ಫ್ಲೈಟ್​ ಹೊರಡುವುದಕ್ಕೆ ಮುಂಚೆ ಬೆಂಗಳೂರಿನ ಹೆಗ್ಡೆನಗರದಲ್ಲಿ ಟಿಕೆಟ್​ ಕಲೆಕ್ಟ್​ ಮಾಡಿಕೊಳ್ಳಿ ಅಂತ ತಿಳಿಸಿದ್ದಾನೆ. ಅಲ್ಲಿಗೆ ಹೋದ ಪದ್ಮರನ್ನ ರಜಾಕ್​ ಗ್ಯಾಂಗ್ನ ಇಬ್ಬರು ಹುಡುಗರು ಒಂದು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಫ್ಲೈಟ್​ ಟಿಕೆಟ್​ ಕೊಟ್ಟು ಜೊತೆ ಒಂದು ಪಾರ್ಸಲ್​ ಸಹ ಆಕೆಗೆ ಕೊಟ್ಟಿದ್ದಾರೆ. ಇದನ್ನ ಒಮನ್​ನಲ್ಲಿ ನಮ್ಮವರು ಬಂದು ಕಲೆಕ್ಟ್​ ಮಾಡಿಕೊಳ್ತಾರೆ ಅಂತ ಆಕೆಯನ್ನ ನಂಬಿಸಿ ಫ್ಲೈಟ್​ಗೆ ಟೈಮ್​ ಆಗುತ್ತೆ.. ಬೇಗ ಹೊರಡಿ ಅಂತ ಏರ್​ಪೋರ್ಟ್​ಗೆ ಕಳುಹಿಸಿದ್ದಾರೆ..

ರಜಾಕ್​ ಗ್ಯಾಂಗ್​ ಕೊಟ್ಟ ಪಾರ್ಸಲ್​ ಸೂಟ್​ಕೇಸ್​ನಲ್ಲಿಟ್ಟುಕೊಂಡು ಒಮನ್​ ಫ್ಲೈಟ್​ ಹತ್ತಿದ್ದ ಪದ್ಮಗೆ ಆ ಪಾರ್ಸಲ್​ನಲ್ಲಿ ಇರೋದೇನು.. ಅದ್ರಿಂದ ನನಗೇನಾದ್ರು ತೊಂದರೆಯಾಗುತ್ತಾ ಅನ್ನೋ ಯಾವುದೇ ಅನುಮಾನ ಬಂದಿರಲಿಲ್ಲ.. ಯಾಕಂದ್ರೆ ಕೈತುಂಬಾ ಸಂಬಳ ಸಿಗೋ ಕೆಲಸ ಸಿಗುತ್ತೆ.. ತನ್ನ ಕುಟುಂಬವನ್ನ ಚೆನ್ನಾಗಿ ನೋಡಿಕೊಳ್ಳಬಹುದು ಅನ್ನೋ ಕನಸ್ಸಿನಲ್ಲೇ ಒಮನ್​​ನತ್ತ ಹೊರಟ್ಟಿದ್ರು.. ಆದ್ರೆ ಒಮನ್​ ಏರ್​ಪೋರ್ಟ್​ನಲ್ಲಿ ಇಳಿದಾಗಲೇ ಆಕೆಗೆ ಅಸಲಿ ಫಿಕ್ಚರ್​ ಗೊತ್ತಾಗಿದ್ದು..

ಒಮನ್​ ಏರ್​ಪೋರ್ಟ್​ನಲ್ಲಿ ಅಮಾಯಕ ಪದ್ಮ ಅರೆಸ್ಟ್​..!

ರಜಾಕ್​ ಗ್ಯಾಂಗ್​ ಕೊಟ್ಟ ಪಾರ್ಸಲ್​ನಲ್ಲಿತ್ತು ಗಾಂಜಾ..!

ರಜಾಕ್​ ಗ್ಯಾಂಗ್​ ಕೊಟ್ಟ ಪಾರ್ಸಲ್​​​ ತೆಗೆದುಕೊಂಡು ಹೋಗಿದ್ದೇ ಪದ್ಮ ಮಾಡಿದ ತಪ್ಪಾಗಿತ್ತು. ಬೆಂಗಳೂರು ಏರ್​ಪೋರ್ಟ್​ನಿಂದ ಹೊರಟು ಒಮನ್​ ಏರ್​ಪೋರ್ಟ್​ನಲ್ಲಿ ಇಳಿದ ಆಕೆಗೆ ದೊಡ್ಡ ಶಾಕ್​ ಎದುರಾಗಿತ್ತು. ಅಲ್ಲಿ ತಪಾಸಣೆ ನಡೆಸಿದ ಕಸ್ಟಮ್ಸ್ ಆಫೀಸರ್ಸ್​ ಪದ್ಮ ಸೂಟ್​ಕೇಸ್​ನಲ್ಲಿದ್ದ ಪಾರ್ಸಲ್​ ಓಪನ್​ ಮಾಡಿದ್ರು.. ಅದ್ರಲ್ಲಿ ಗಾಂಜಾ ಪ್ಯಾಕೇಟ್​ಗಳಿದ್ದವು.. ಅಲ್ಲಿಗೆ ಪದ್ಮಗೆ ಅಸಲಿ ಸಂಗತಿ ಅರ್ಥವಾಗಿತ್ತು.. ಆದ್ರೆ ಕಾಲ ಮಿಂಚಿ ಹೋಗಿತ್ತು. ನನಗೇನು ಗೊತ್ತಿಲ್ಲ.. ಇದು ನನ್ನ ಪಾರ್ಸಲ್​ ಅಲ್ಲ. ರಜಾಕ್​ ಅನ್ನೋ ಏಜೆಂಟ್​ ಕೊಟ್ಟು ಕಳುಹಿಸಿದ್ದ ಅಂತ ಆಕೆ ಏನೇ ಹೇಳಿದ್ರೂ ಒಮನ್​ ಕಸ್ಟಮ್ಸ್​ ಆಫೀಸರ್ಸ್​ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.. ಮಾಡದ ತಪ್ಪಿಗೆ ಭಾರತದ ಪದ್ಮ ಗಲ್ಪ್​ ಕಂಟ್ರಿ ಒಮನ್​ಗಲ್ಲಿ ಬಂಧಿಯಾದ್ರು..

ಅಮಾಯಕರ ಅನಿವಾರ್ಯವನ್ನೇ ಬಂಡವಾಳ ಮಾಡಿಕೊಂಡು ಬಲೆ ಬೀಸುವ ಸ್ಮಗ್ಲರ್​ ರಜಾಕ್​ ದಂಧೆ ಬಗ್ಗೆ ಮಾಹಿತಿ ತಿಳಿದ ಟಿವಿ5, ಅವನ ಆಟಕ್ಕೆ ಚೆಕ್​ ಇಡಲು ನಿರ್ಧರಿಸಿತು.. ಅವನ ಮುಖವಾಡ ಕಳಚಿ ಕಂಬಿ ಹಿಂದೆ ಕಳುಹಿಸಲು ಮುಂದಾಯ್ತು.. ಪ್ರಾಣ ಪಣಕ್ಕಿಟ್ಟು ನಟೋರಿಯಸ್​ ಗಾಂಜಾ ಸ್ಮಗ್ಲರ್​ ರಜಾಕ್​ ಅಂಡ್​ ಗ್ಯಾಂಗ್​ ಬೆನ್ನತ್ತಿದ್ದ ಟಿವಿ5 ತಂಡಕ್ಕೆ ಹೆಜ್ಜೆ ಹೆಜ್ಜೆಗೂ ಆಘಾತಕಾರಿ ಸಂಗತಿಯೇ ಎದುರಾದ್ವು.. ಆ ಪಾತಕಿಯನ್ನ ಬೇಟೆಯಾಡಲೇಬೇಕು ಅಂತ ನಿರ್ಧರಿಸಿದ ನಮ್ಮ ತಂಡ, ಯಾವುದೇ ಕ್ಷಣದಲ್ಲೂ ಹಿಂಜರಿಯದೇ ಮುನ್ನುಗ್ಗಿತು..

ಗಲ್ಫ್​ ಕಂಟ್ರಿಯಲ್ಲಿ ಕೆಲಸ ಕೊಡಿಸ್ತೀನಿ.. ಕೈತುಂಬಾ ಸಂಬಳವೂ ಕೊಡ್ತಾರೆ ಅಂತೆಲ್ಲಾ ಅಮಾಯಾಕ ಮಹಿಳೆಯರನ್ನೇ ಟ್ರಾಪ್​ ಮಾಡ್ತಿದ್ದ ನಟೋರಿಯಸ್​ ಸ್ಮಗ್ಲಿರ್​ ರಜಾಕ್​ ಬೇಟೆಗೆ ಟಿವಿ5 ತಂಡ ಹೊರಟಿತ್ತು. ಆ ಪಾತಕಿಯನ್ನ ಬಲೆಗೆ ಬೀಳಿಸೋದು ಅಷ್ಟು ಸುಲಭವಾಗಿರಲಿಲ್ಲ.. ಪ್ರಾಣ ಪಣಕ್ಕಿಟ್ಟು ಸ್ಮಗ್ಲರ್​ ರಜಾಕ್​ ಅಂಡ್​ ಗ್ಯಾಂಗ್​ ಬೆನ್ನತ್ತಿದ್ದ ಟಿವಿ5 ತಂಡಕ್ಕೆ ಹೆಜ್ಜೆ ಹೆಜ್ಜೆಗೂ ಆಘಾತಕಾರಿ ಸಂಗತಿಯೇ ಎದುರಾದ್ವು.. ಆದ್ರೂ ಮಹಿಳೆಯರ ರಕ್ಷಣೆಗಾಗಿ ಹಿಂಜರಿಯದೇ ಯಶಸ್ವಿಯೂ ಆದ್ವಿ..

ಅದು ಭಯಂಕರ ಮಾಫಿಯಾ..ಅಲ್ಲಿ ಕರುಣೆಯೇ ಇರೋಲ್ಲ..!

ನಟೋರಿಯಸ್​ ಡ್ರಗ್ಸ್ ಸ್ಮಗ್ಲರ್​ ರಜಾಕ್​ ಬೆನ್ನತ್ತಿ ಹೊರಟಿತ್ತು TV5..!

ಪ್ರಾಣ ಪಣಕ್ಕಿಟ್ಟು ಡೇಂಜರ್ಸ್​ ಏಜೆಂಟ್​ ಬೇಟೆ TV5 ಪ್ಲಾನ್​..!

ಅದೊಂದು ಭಯಂಕರ ಮಾಫಿಯಾ.. ಅಲ್ಲಿರೋರಿಗೆ ಧಯೆ, ಕರುಣೆ ಅನ್ನೋದೇ ಇರಲ್ಲ.. ಅವರೆಲ್ಲಾ ಮನುಷ್ಯತ್ವವೇ ಇಲ್ಲದ ಮೃಗಗಳು.. ಅವರಿಗೆ ದುಡ್ಡೇ ಪ್ರಪಂಚ.. ದುಡ್ಡೇ ಎಲ್ಲಾ.. ದುಡ್ಡಿಗಾಗಿ ಏನ್ಬೇಕಾದ್ರೂ ಮಾಡೋ ನರರೂಪ ರಾಕ್ಷಸರು ಅವರು.. ಇಂಥ ನಟೋರಿಯಸ್​ ಗ್ಯಾಂಗ್​ ಬೇಟೆಗಾಗಿ ಡ್ರಗ್ಸ್​ ಸ್ಮಗ್ಲರ್​ ರಜಾಕ್​ ಬೆನ್ನತ್ತಿ ಹೊರಟ ಟಿವಿ5 ತಂಡಕ್ಕೆ ಹೆಜ್ಜೆ ಹೆಜ್ಜೆಗೂ ಆತಂಕವಿತ್ತು. ನಮ್ಮ ಪ್ಲಾನ್​ ಕೊಂಚ ಯಡವಟ್ಟಾದ್ರೂ ಅಲ್ಲಿ ನಮ್ಮ ಕಥೆಯೇ ಮುಗಿಯುತ್ತಿತ್ತು. ಆದ್ರೂ ನರಕಯಾತನೆಯಿಂದ ಅಮಾಯಕ ಮಹಿಳೆಯರನ್ನ ರಕ್ಷಿಸಲೇಬೇಕು ಅಂತ ಪಕ್ಕಾ ಪ್ಲಾನ್ ಪ್ರಕಾರ ಪಾತಕಿ ರಜಾಕ್​ ಅಂಡ್​ ಗ್ಯಾಂಗ್​ ಬೇಟೆಗೆ ನಮ್ಮ ಹೈದ್ರಾಬಾದ್​ನ ಕ್ರೈಂ ಬ್ಯೂರೋ ತಂಡ ಮುಂಬೈನತ್ತ ಹೊರಟಿಯೇ ಬಿಟ್ಟಿತ್ತು.. ಇಲ್ಲಿಂದಲೇ ಶುರುವಾಯ್ತು ಟಿವಿ5 ಆಪರೇಷನ್​ ಗಲ್ಫ್​..

ಡ್ರಗ್ಸ್​ ಸ್ಮಗ್ಲರ್​ ರಜಾಕ್​ ಅಂಡ್​ ಗ್ಯಾಂಗ್​ ಅಂತಿಂಥ ನಟೋರಿಯಸ್​ ಅಲ್ಲ.. ವೆರಿ ವೆರಿ ಡೇಂಜರ್​ ಟೀಂ ಅದು.. ಅವರು ಸುಮಾರು 40 ರಿಂದ 45 ವಯಸ್ಸಿನ ಮಹಿಳೆಯರನ್ನೇ ಟಾರ್ಗೆಟ್​ ಮಾಡಿ ಗಲ್ಫ್​ ಕಂಟ್ರಿಗಳಿಗೆ ಕಳುಹಿಸುತ್ತಿದ್ರು. ಮಾನವಟ್ರ್ಯಾಪಿಂಗ್​ ಅನ್ನೋದೇ ಇವನ ಮೈನ್​ ದಂಧೆ.. ಕಷ್ಟದಲ್ಲಿರುವ ಮಹಿಳೆಯರನ್ನ ಗುರುತಿಸಿ ಅವರಿಗೆ ದುಬೈ, ಒಮನ್​, ಅಬುದಾಬಿ ಹೀಗೆ ಗಲ್ಫ್​ ಕಂಟ್ರಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅವರ ಮೂಲಕ ಡ್ರಗ್ಸ್​ ಸಪ್ಲೆ ಮಾಡುತ್ತಿದ್ದ.. ಈಗಾಗಲೇ 16 ಮಂದಿಯನ್ನ ಗಲ್ಫ್​ಗೆ ಕಳುಹಿಸಿದ್ದಾನೆ. ಆದ್ರೆ ಆಂಧ್ರದ ಖಮ್ಮಂ ಜಿಲ್ಲೆಯ ಪದ್ಮ ಅನ್ನೋರು ಬೆಂಗಳೂರು ಏರ್​ಪೋರ್ಟ್​ ಮೂಲಕವೇ ಒಮನ್​ಗೆ ಹೋಗಿ ಅಲ್ಲಿ ಸಿಕ್ಕಿಬಿದ್ದಿದ್ರು.. ಈ ಮಾಹಿತಿಯನ್ನ ತಿಳಿದ ಟಿವಿ5, ಸ್ಮಗ್ಲರ್​ ರಜಾಕ್​ ಬೇಟೆಗಿಳಿದಿತ್ತು..

ಸ್ಮಗ್ಲರ್​ ರಜಾಕ್​ಗೆ ಮುಂಬೈನಲ್ಲಿ ಬಲೆ ಬೀಸಿತ್ತು TV5 ತಂಡ..!

ಇಬ್ಬರು ಮಹಿಳೆಯರ ಮೂಲಕ TV5 ರಹಸ್ಯ ಕಾರ್ಯಾಚರಣೆ..!

ಗಲ್ಫ್​ ಕಂಟ್ರಿಯಲ್ಲಿ ಕೆಲಸ ಕೊಡಿಸಿ ಅಂತ ಫೋನೋ ಮಾಡಿದ್ವಿ..!

ಡ್ರಗ್​ ಸ್ಮಗ್ಲರ್​ ನಟೋರಿಯಸ್​ ರಜಾಕ್​ನನ್ನ ಬೇಟೆಯಾಡಲು ನಮ್ಮ ಹೈದ್ರಾಬಾದ್​ ಟಿವಿ5 ಕ್ರೈಂ ತಂಡ ಇಬ್ಬರು ಮಹಿಳೆಯರನ್ನ ಬಳಸಿಕೊಳ್ಳಲಾಯ್ತು.. ಈ ಮಹಿಳೆಯರನ್ನ ಗಲ್ಫ್​ ಕಂಟ್ರಿಗಳಲ್ಲಿ ಕೆಲಸಕ್ಕೆ ಕಳುಹಿಸಬೇಕು ಅಂತ ರಜಾಕ್​ ಗ್ಯಾಂಗ್​ ಅನ್ನ ಸಂಪರ್ಕಿಸಲಾಯ್ತು. ಸಹಚರರ ಮೂಲಕ ಕಿಂಗ್​ಪಿನ್​ ರಜಾಕ್​ನ ಸಂಪರ್ಕವೂ ಸಿಕ್ತು.. ಮಹಿಳೆಯರ ಮೂಲಕವೇ ರಜಾಕ್​ನ ಜೊತೆ ಮಾತನಾಡಿಸಲಾಯ್ತು.. ಎಲ್ಲಾ ಮಾತುಕತೆ ಪೋನ್​ನಲ್ಲೇ ನಡೆಯಿತು. ನಂತರ ಒಂದು ದಿನ ಆ ಇಬ್ಬರು ಮಹಿಳೆಯರಿಗೆ ಒಮನ್​ಗೆ ಟಿಕೆಟ್​ ಬುಕ್​ ಮಾಡಿಸಿದ ರಜಾಕ್​ ಡೇ ಫಿಕ್ಸ್​ ಮಾಡಿ ಮುಂಬೈಗೆ ಬರುವಂತೆ ತಿಳಿಸಿದ್ದ.. ಅದೇ ಅವನ ಬೇಟೆಗೆ ಟಿವಿ5 ತಂಡಕ್ಕೆ ಒಳ್ಳೆ ಅವಕಾಶ ಸಿಕ್ಕಿತ್ತು.

ರಜಾಕ್​ ಸೂಚನೆಯಂತೆ ಇಬ್ಬರು ಮಹಿಳೆಯರನ್ನ ಬಸ್​ನಲ್ಲಿ ಮುಂಬೈಗೆ ಕಳುಹಿಸಿದ ಟಿವಿ5 ತಂಡ, ಅವರನ್ನ ಫಾಲೋ ಮಾಡುತ್ತಾ ಕಾರಿನಲ್ಲಿ ಹೋಗಲಾಯ್ತು.. ಮುಂಬೈನ ಒಂದು ಚಿಕ್ಕ ಸ್ಲಂ ಏರಿಯಾಕ್ಕೆ ಬನ್ನಿ ಅಲ್ಲಿಂದ ಏರ್​ಪೋರ್ಟ್​ಗೆ ಬಸ್​ ಕಳುಹಿಸುತ್ತೇವೆ ಅಂತ ತಿಳಿಸಿದ್ರು.. ಅವರ ಸೂಚನೆಯಂತೆ ಮುಂಬೈನ ಸ್ಲಂ ಏರಿಯಾಗೆ ಹೋದ ಇಬ್ಬರು ಮಹಿಳೆಯರನ್ನ ರಜಾಕ್​ ಗ್ಯಾಂಗ್​ ತೀವ್ರ ನಿಗಾ ಇಟ್ಟಿತ್ತು. ಅವರಿಗೆ ಯಾವುದೇ ಅನುಮಾನ ಬರದಂತೆ ನಮ್ಮ ಟಿವಿ5 ತಂಡ ಎಲ್ಲವನ್ನೂ ಗಮನಿಸುತ್ತಿತ್ತು. ಅಲ್ದೇ ಪ್ರತಿಯೊಂದು ಮಾಹಿತಿಯನ್ನೂ ಮುಂಬೈ ಪೊಲೀಸರಿಗೆ ಕೊಡಲಾಗುತ್ತಿತ್ತು. ಮುಂಬೈ ಪೊಲೀಸರ ಸಹಕಾರದೊಂದಿಗೇ ನಮ್ಮ ರಹಸ್ಯ ಕಾರ್ಯಾಚರಣೆ ನಡೆದಿತ್ತು..

ನಮ್ಮ ಪ್ಲಾನ್​ ಪ್ರಕಾರವೇ ಎಲ್ಲವೂ ನಡೆಯುತ್ತಿತ್ತು.. ಇನ್ನೇನು ನಮ್ಮ ಮಹಿಳೆಯರು ಮಾರನೇ ದಿನ ಮುಂಬೈ ಏರ್​ಪೋರ್ಟ್​ಗೆ ತೆರಳಿ ಅಲ್ಲಿಂದ ಒಮನ್​ಗೆ ಹೊರಡಬೇಕು ಅಂತ ರಜಾಕ್​ ಗ್ಯಾಂಗ್​ ತಿಳಿಸಿತ್ತು. ಆ ದಿನ ಸಂಜೆ ಖುದ್ದು ರಜಾಕೇ ಮಹಿಳೆಯರಿದ್ದ ಸ್ಲಂ ಬಳಿಯ ರೂಮ್​ ಬಳಿ ಬಂದಿದ್ದ.. ಅವನು ಆ ಮಹಿಳೆಯರೊಂದಿಗೆ ಮಾತನಾಡಿ ಯಾರಿಗೂ ಗೊತ್ತಾಗದಂತೆ ಎಸ್ಕೆಪ್​ ಆಗಿದ್ದ.. ಮಾರನೇ ದಿನ ಏರ್​ಪೋರ್ಟ್​ಗೆ ಬರುತ್ತೇನೆ ಅಂತಾನೂ ತಿಳಿಸಿದ್ದ. ಇದೇ ಅವನಿಗೆ ಮುಳುವಾಯ್ತು.. ಕಳ್ಳ ಹಳ್ಳಕ್ಕೆ ಬಿದ್ದಿದ್ದ..

ಅವನು ಏರ್​ಪೋರ್ಟ್​ಗೆ ಬರುತ್ತಾನೆ ಅಂತ ತಿಳಿದ ಟಿವಿ5 ತಂಡ ರಹಸ್ಯ ಕಾರ್ಯಾಚರಣೆ ಚುರುಕುಗೊಳಿಸಿತ್ತು. ಆ ಇಬ್ಬರು ಮಹಿಳೆಯರೊಂದಿಗೆ ಮುಂಬೈ ಏರ್​ಪೋರ್ಟ್​ನಲ್ಲಿ ಸ್ಮಗ್ಲರ್​ ರಜಾಕ್​ಗಾಗಿ ಪೊಲೀಸರೊಂದಿಗೆ ಕಾಯುತ್ತಿದ್ದೆವು.. ಕೊನೆಗೂ ಬಲಿಕಾ ಬಕ್ರಾ ಬಂದೇ ಬಿಡ್ತು.. ದೂರದಲ್ಲಿ ಕೂತಿದ್ದ ಮಹಿಳೆಯರ ಬಳಿ ಬಂದ ಆತ ಸುಮಾರು ಹೊತ್ತು ಏರ್​ಪೋರ್ಟ್​ ಮುಂದೆಯೇ ಮಾತುಕತೆ ನಡೆಸಿದ್ದ.. ಕೊನೆಗೆ ಇನ್ನೇನೂ ಏರ್​ಪೋರ್ಟ್​ನಿಂದ ಎದ್ದು ಹೋಗಬೇಕು ಅನ್ನೋ ಅಷ್ಟರಲ್ಲಿ ಅವನನ್ನ ಸುತ್ತವರಿದ ಮುಂಬೈ ಪೊಲೀಸರು ನಟೋರಿಯಸ್​ ಡ್ರಗ್​ ಸ್ಮಗ್ಲರ್​ನನ್ನ ಬಂಧಿಸಿಯೇ ಬಿಟ್ರು..

ಟಿವಿ5 ರಹಸ್ಯ ಕಾರ್ಯಾಚರಣೆಯೊಂದಿಗೆ ಮುಂಬೈ ಪೊಲೀಸರು ಪಾತಕಿ ನಟೋರಿಯಸ್​ ಡ್ರಗ್​ ಸ್ಮಗ್ಲರ್​ ರಜಾಕ್​ ಅಲಿಯಾಸ್ ಅಬ್ದುಲ್​ ರಜಾಕ್​ನನ್ನ ಬಂಧಿಸಿ ಜೈಲುಗಟ್ಟಿದ್ದಾರೆ. ಇವನ ಗ್ಯಾಂಗ್​ ಎಲ್ಲಿದೆ.. ನೆಟ್​ವರ್ಕ್​ ಎಲ್ಲಿಲ್ಲಿದೆ ಅನ್ನೋ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ. ಈ ಮೂಲಕ ಇವನ ಮೋಸದ ಜಾಲಕ್ಕೆ ಸಿಕ್ಕಿ ಗಲ್ಫ್​ ಕಂಟ್ರಿಯಲ್ಲಿ ನರಕ ಅನುಭವಿಸುತ್ತಿರುವ ಪದ್ಮರಂತ ಅದೆಷ್ಟೋ ಮಂದಿಗೆ ನ್ಯಾಯ ಸಿಗಬೇಕಿದೆ. ಏನೂ ಅರಿಯ ಅಮಾಯಕ ಮಹಿಳೆಯರು ಹೊಟ್ಟೆಪಾಡಿಗಾಗಿ ಗಲ್ಫ್​ ರಾಷ್ಟ್ರಗಳಿಗೆ ಹೋಗಿ ಮತ್ತಷ್ಟು ಸಂಕಷ್ಟಕ್ಕೀಡಾಗೋದನ್ನ ತಪ್ಪಿಸಿದಂತಾಗಿದೆ.

ಗಲ್ಫ್​ ರಾಷ್ಟ್ರಗಳಲ್ಲಿ ಕೆಲಸ ಕೊಡಿಸ್ತೀವಿ.. ಕೈತುಂಬಾ ಸಂಬಳನೂ ಕೊಡ್ತಾರೆ ಅಂತ ಅಮಾಯಾಕ ಮಹಿಳೆಯರನ್ನ ವಂಚಿಸುತ್ತಿದ್ದ ಡ್ರಗ್ಸ್​ ಸ್ಮಗ್ಲರ್​​ ಅನ್ನ ಟಿವಿ5 ಬೇಟೆಯಾಡಿದೆ. ರಹಸ್ಯ ಕಾರ್ಯಾಚರಣೆ ಮೂಲಕ ಪಾತಕಿ ರಜಾಕ್​​ನನ್ನ ಬಲೆಗೆ ಬೀಳಿಸಿದೆ. ಅವನಿಂದ ವಂಚನೆಗೊಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಟಿವಿ5 ಯಶಸ್ವಿಯಾಗಿದೆ..

Next Story

RELATED STORIES