ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನ ಹೇಗೆ ಗೊತ್ತಾ..?

ಚಿಕ್ಕನ್ ಎಂದರೇ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ ಹೀಗಾಗಿ ನಿಮಗಾಗಿ ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನ ಹೇಗೆ ಎಂದು ಹೇಳುತ್ತೇವೆ ಇಲ್ಲಿದೆ ಓದಿ ನಂತರ ಮನೆಯಲ್ಲಿ ಸಮಯ ಸಿಕ್ಕಗ ಪ್ರಯತ್ನ ಮಾಡಿ.

ಬೇಕಾಗುವ ಸಾಮಾಗ್ರಿಗಳು

ಬೋನ್‍ಲೆಸ್ ಚಿಕನ್ – 1 ಕೆ ಜಿ

ಈರುಳ್ಳಿ – 2 ಮೀಡಿಯಂ ಸೈಜ್

ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 4 ಚಮಚ

ಪೆಪ್ಪರ್ ಪೌಡರ್ – 2.5 ಚಮಚ

ಹಸಿ ಮೆಣಸಿನಕಾಯಿ – 4-5

ಕರಿಬೇವು – 10-20 ಎಲೆಗಳು

ಉಪ್ಪು – ರುಚಿಗೆ ತಕ್ಕಷ್ಟು

ನಿಂಬೆಹಣ್ಣು – 1

ಅರಿಶಿಣ – ಚಿಟಿಕೆ

ಬೆಳ್ಳುಳ್ಳಿ ಎಸಳು – 10-16

ಎಣ್ಣೆ – 6-8 ಚಮಚ

ಕೊತ್ತಂಬರಿ ಸೊಪ್ಪು – 1 ಕಟ್ಟು

ಚಿಕ್ಕನ್ ಮಸಲೆ – 2 ಚಮಚ

ಒಂದು ಪ್ಯಾನ್ ಅನ್ನು ಬಿಸಿಗಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ ಎಸಳು, ಕರಿಬೇವು ಒಂದಾದ ಮೇಲೆ ಒಂದು ಹಾಕಿ ಫ್ರೈ ಮಾಡಿ. ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಅರಿಶಿಣ ಹಾಕಿ ಫ್ರೈ ಮಾಡಿ ನಂತರ ತೊಳೆದ ಚಿಕನ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 2-3 ನಿಮಿಷ ಫ್ರೈ ಮಾಡಿಕೊಳ್ಳಬೇಕು.

ನಂತರ  ಬೇಯಲು ಅಗತ್ಯವಿರುವಷ್ಟು ನೀರು ಸೇರಿಸಿ ಪ್ಲೆಟ್ ಮುಚ್ಚಿ ಬೇಯಿಸಿ. ಕೊನೆಗೆ ಚಿಕನ್ ಎಲ್ಲಾ ಫ್ರೈ ಆದ್ಮೇಲೆ ಕೆಳಗಿಳಿಸುವಾಗ ನಿಂಬೆ ಹಣ್ಣಿನ ರಸ ಹಿಂಡಿ, ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ.

ಇನ್ನೊಂದು ವಿಧಾನ

ಈರುಳ್ಳಿ ಒಂದನ್ನು ಬಿಟ್ಟು ಉಳಿದೆಲ್ಲ ಮಸಾಲೆಗಳನ್ನು ನುಣ್ಣಗೆ ರುಬ್ಬಿ ಎರಡು ಚಮಚ ತುಪ್ಪದಲ್ಲಿ ಈರುಳ್ಳಿ ಬಾಡಿಸಿ.

ತೊಳೆದಿಟ್ಟ ಕೋಳಿ ತುಂಡುಗಳನ್ನು ಕೊಂಚ ಎಣ್ಣೆಯನ್ನು ಸೇರಿಸಿ 10 ನಿಮಿಷ ಹುರಿಯಿರಿ. ಇದಕ್ಕೆ ಉಪ್ಪು, ರುಬ್ಬಿದ ಮಸಾಲೆ ಸೇರಿಸಿ 10 ನಿಮಿಷ ಹುರಿಯಿರಿ.

ನಂತರ ಸಾಕಷ್ಟು ನೀರು ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿ ಜಿಡ್ಡು ಬಿಟ್ಟುಕೊಳ್ಳುವವರೆಗೆ ಮಾಂಸ ಚೆನ್ನಾಗಿ ಬೇಯಿಸಿ ನಂತರ ಚಿಕ್ಕನ್ ಫ್ರೈ ಸಿದ್ದವಾಗುತ್ತಾದೆ.

Recommended For You

Leave a Reply

Your email address will not be published. Required fields are marked *