'ದೇವೇಗೌಡರು ಎಷ್ಟು ಜನ ನೋಡಿಲ್ಲ, ಇವನೇನು ಬ್ರಹ್ಮಾನಾ?- ಕುಮಾರಸ್ವಾಮಿ

X
TV5 Kannada15 Feb 2019 11:04 AM GMT
ಹಾಸನ: 'ಇವನು ದೇವೇಗೌಡರ ತೆಗಿತಿನಿ ಅಂತ ಬೆಂಗಳೂರಲ್ಲಿ ಮಾತ್ನಾಡ್ತಾನೆ ಇಂತವರನ್ನು ದೇವೇಗೌಡರು ಎಷ್ಟು ಜನರನ್ನ ನೋಡಿದ್ದಾರೆ. ಇವನೇನು ಬ್ರಹ್ಮಾನಾ?' ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರೀತಂಗೌಡ ಬಗ್ಗೆ ಏಕವಚದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, 'ಇವನು ದೇವೇಗೌಡರ ತೆಗಿತಿನಿ ಅಂತ ಬೆಂಗಳೂರಲ್ಲಿ ಮಾತ್ನಾಡ್ತಾನೆ ಇಂತವರನ್ನು ದೇವೇಗೌಡರು ಎಷ್ಟು ಜನರನ್ನ ನೋಡಿದ್ದಾರೆ ಇವನೇನು ಬ್ರಹ್ಮಾನಾ? ಎಂದ ಅವರು, 'ನನ್ನ ಕೊಲೆ ಮಾಡ್ತಾರೆ ಅಂತ ಬೆಂಗಳೂರಲ್ಲಿ ಕೆಟ್ಟ ಅಪಪ್ರಚಾರ ಮಾಡ್ತಿದ್ದಾನೆ.
ಈ ವಿಚಾರ ಇಟ್ಕೊಂಡು ಬಿಜೆಪಿಯವರು ಸರ್ಕಾರ ಕೆಡವಲು ಹೊರಟಿದ್ದಾರೆ. ಇದರ ಬಗ್ಗೆ ರಾಜ್ಯಪಾಲರಿಗೆ ಪತ್ರ ಕೊಡಲು ಬಿಜೆಪಿಯವರು ಹೋಗಿದ್ದಾರೆ' ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇನ್ನು, ನನ್ನ ದೃಷ್ಟಿ ಬಡವರ ಮೇಲಿರುತ್ತೆ, ಇಂತಹ ಕೀಳು ಮಟ್ಟದ ರಾಜಕಾರಣ ಮಾಡುವವರು ನಾವಲ್ಲ ಎಂದು ಹಾಸನ ಶಾಸಕ ಪ್ರೀತಂ ಗೌಡ ಮೇಲೆ ಭಾಷಣದಲ್ಲಿ ಗರ್ಜಿಸಿದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ.
Next Story