ಪ್ರೀತಂಗೌಡ ತಾಯಿ-ತಂದೆ ಮೇಲೆ ಹಲ್ಲೆ ವೇಳೆ ಯಾರ್ಯಾರು ಇದ್ದರು ಗೊತ್ತಾ?

ಬೆಂಗಳೂರು: ಪ್ರೀತಂ ಗೌಡ ತಂದೆ ತಾಯಿ ಮೇಲೆ ಹಲ್ಲೆ ನಡೆದಿದೆ ಗೂಂಡಾಗಿರಿ ಸಂದರ್ಭದಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಇದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕಲಾಪದಲ್ಲಿ ವಿಷಯ ಪ್ರಸ್ತಾಪಸಿದ್ದಾರೆ.

ವಿಧಾನಸೌಧದ ಕಲಾಪದ ಆರಂಭದಲ್ಲಿಯೇ ಯಡಿಯೂರಪ್ಪ ಪ್ರೀತಂ ಗೌಡ ಮನೆ ಮೇಲೆ ನಡೆದ ಹಲ್ಲೆ ಬಗ್ಗೆ ಪ್ರಸ್ತಾಪಿಸಿದ್ದು, ಪ್ರೀತಂ ತಂದೆ ತಾಯಿ ಮೇಲೆ ಹಲ್ಲೆಯಾಗಿದೆ. ಗೂಂಡಾಗಿರಿ ಸಂದರ್ಭದಲ್ಲಿ ಮೂವರು ಪೊಲೀಸರಿದ್ದರು. ಹಲ್ಲೆಗೆ ಪೊಲೀಸರೇ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು, ಈ ಸಂಬಂಧ ರಾಜ್ಯಪಾಲರಿಗೂ ನಾವು ದೂರು ನೀಡಿದ್ದೇವೆ. ಶಾಸಕರ ರಕ್ಷಣೆಗೆ ಗಮನಹರಿಸಬೇಕು ಎಂದ ಯಡಿಯೂರಪ್ಪ ಗೂಂಡಾ ಮಾದರಿ ಸರ್ಕಾರ ರಾಜ್ಯದಲ್ಲಿ ಇಲ್ಲಿದೆ. ಮುಖ್ಯಮಂತ್ರಿಗಳೇ ಪ್ರೀತಂ ಗೌಡ ಮೇಲಿನ ದಾಳಿಗೆ ಕಾರಣ ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ವಿಧಾನಸೌಧ ಕಲಾಪದಲ್ಲಿ ಆಗ್ರಹಿಸಿದ್ದಾರೆ.

ಈ ಮಧ್ಯೆ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಮಧ್ಯಪ್ರವೇಶ ಮಾಡಿ ಶಾಸಕ ಪ್ರೀತಂ ಗೌಡ ಜೀವಕ್ಕೆ ರಕ್ಷಣೆ ನೀಡಬೇಕು. ಈ ವಿಷಯ ಸದನದಲ್ಲಿ ಸದನದಲ್ಲಿಯೇ ಪ್ರಸ್ತಾಪವಾಗಿದೆ. ಹೀಗಾಗಿ ಪ್ರೀತಂಗೌಡ ಅವರಿಗೆ ರಕ್ಷಣೆ ನೀಡಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಸರ್ಕಾರಕ್ಕೆ ಸೂಚನೆ ಕೊಟ್ಟಿದ್ದಾರೆ.