ಕುಮಾರಸ್ವಾಮಿ ಬಗ್ಗೆ ರೇಣುಕಾಚಾರ್ಯ ಹೇಳಿದ್ದೇನು..?

ಸರ್ಕಾರ ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸೋಕೆ ಹೊರಟಿತ್ತು, ಇದನ್ನು ವಿರೋಧಿಸಿ ನಾವು ಪ್ರತಿಭಟನೆ ಮಾಡಿದ್ದೇವೆ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಕುಮಾರಸ್ವಾಮಿ ಆಡಿಯೋ ಮಾಡಿಸಿದ್ದು ಯಾಕೆ

ಬೆಂಗಳೂರಿನ ವಿಧಾನಸಭೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಆಡಿಯೋ ಮಾಡಿಸಿದ್ದು ಯಾಕೆ ಅವರು ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಯಾವುದೇ ಹುರುಳಿಲ್ಲ ಎಸ್​ಐಟಿ ತನಿಖೆಗೆ ನೀಡಿದರೆ  ಅದನ್ನು ಹೇಗೆ ಬೇಕಾದರೂ ತಿರುಚಬಹುದು ಎಂದು ಕುಮಾರಸ್ವಾಮಿ ಅಂದುಕೊಂಡಿದ್ದಾರೆ ಹೀಗಾಗಿ ಎಚ್​ಡಿಕೆ ರಾಜೀನಾಮೆ ನೀಡಲಿ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಹಿರಿಯ ಶಾಸಕರು ಭಾಗವಹಿಸಿದ್ದಾರೆ

ಎಸ್‍ಐಟಿ ತನಿಖೆಗೆ ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ. ಸಭಾಧ್ಯಕ್ಷರು ಸಭೆ ಕರೆದಿದ್ದಾರೆ. ಯಡಿಯೂರಪ್ಪ ಹಾಗೂ ಬಿಜೆಪಿಯ ಮುಖಂಡರು, ಹಿರಿಯ ಶಾಸಕರು ಭಾಗವಹಿಸಿದ್ದಾರೆ. ಯಾವ ರೀತಿಯಲ್ಲಿ ಅಲ್ಲಿ ನಿರ್ಧಾರವಾಗುತ್ತದೆ. ಅದರ ನಂತರ ನಮ್ಮ ನಾಯಕರು ಏನ್ ಸೂಚನೆ ಕೊಡುತ್ತಾರೆ ಅದರ ಪ್ರಕಾರ ನಾವು ಎಸ್‍ಐಟಿಯನ್ನು ಪ್ರಬಲವಾಗಿ ವಿರೋಧ ಮಾಡುತ್ತೇವೆ ಎಂದು ಹೇಳಿದ್ರು.

ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು

ನಂತರ ಮಾತನಾಡಿದ ಅವರು ನಾಡಿನ ಜ್ವಲಂತ  ಸಮಸ್ಯೆ ಪರಿಹಾರಕ್ಕೆ ಅವಕಾಶ ಕೂಡಬೇಕು, ಇನ್ನೂ ಮೂರು ದಿನ ಕಾಲ ಸದನ ಮುಂದುವರಿಸಬೇಕು, ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ನಾವು ಯಾರಿಗೂ ಅಪಮಾನ ಮಾಡಿಲ್ಲ ಸಭಾಧ್ಯಕ್ಷರು, ರಾಜ್ಯಪಾಲರಿಗೆ ಅಗೌರವ ತೋರಿಲ್ಲ ಎಂದು ರೇಣುಕಾಚಾರ್ಯ ತಿಳಿಸಿದರು.