ತಮ್ಮ ಅಭಿಷೇಕ್ ನನ್ನ ಪ್ರೀತಿಯಿಂದ ಹರಸಿ ಹಾರೈಸಿ ಎಂದ ದರ್ಶನ್

ಅಂಬಿ ಇಲ್ಲದ ಕೊರಗನ್ನ ನೀಗಿಸೋಕ್ಕೆ ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಸಜ್ಜಾಗಿದ್ದಾರೆ. ರೆಬೆಲ್ ಫ್ಯಾನ್ಸ್ ಮತ್ತು ಸಿನಿಪ್ರಿಯರ ಮನಸ್ಸನ್ನ ಅದೇ ಗತ್ತು, ಗಾಂಭೀರ್ಯ, ಗಮ್ಮತ್ತಿನಿಂದ ಗೆಲ್ತಿದ್ದಾರೆ ಅಭಿ. ಅಂಬಿ ನೆನಪು ಅಮರ ಅನ್ನೋ ಹಾಗೆ ಅದೇ ಅಮರ್ ರೂಪದಲ್ಲಿ ಸೆನ್ಸೇಷನ್ ಹುಟ್ಟಿಸಿದ್ದಾರೆ ಅಂಬಿ ತನಯ. ಅದಕ್ಕೆ ಡಿ ಬಾಸ್ ದರ್ಶನ್, ರಾಕಿ ಭಾಯ್ ಸೇರಿದಂತೆ ಇಡೀ ಚಿತ್ರರಂಗ ಸಾಥ್ ಕೊಟ್ಟಿದೆ.

ಡೇರಿಂಗ್ & ಡ್ಯಾಶಿಂಗ್ ಟೀಸರ್ನಿಂದ ಅಭಿ ಆರಂಗೇಟ್ರಂ
ಅಮರ್ ಫಸ್ಟ್ ಲುಕ್ಗೆ ಸ್ಯಾಂಡಲ್ವುಡ್ ಬಜಾರ್ ಶೇಕ್

ಇದು ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಲೇಟೆಸ್ಟ್ ಆಗಿ ರಿಲೀಸ್ ಆದ ಅಮರ್ ಚಿತ್ರದ ಟೀಸರ್ ಝಲಕ್. ರೆಬೆಲ್ ಸ್ಟಾರ್ ಅಂಬರೀಶ್- ಸಮಲತಾ ಪುತ್ರ ಅಭಿಷೇಕ್ ಅಂಬರೀಶ್ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿರೋ ಚೊಚ್ಚಲ ಸಿನಿಮಾದ ಫಸ್ಟ್ ಲುಕ್. ಆರಡಿ ಹೈಟು, ಪೈಲ್ವಾನ್ ರೀತಿಯ ಮೈಕಟ್ಟು, ಮಿಂಚಿನ ನೋಟ ಹೊಂದಿರೋ ಅಭಿಷೇಕ್, ಸ್ಟೈಲಿಶ್ ಲುಕ್ಸ್ನಿಂದ ಟೀಸರ್ನಲ್ಲಿ ಮಿಂಚು ಹರಿಸಿದ್ದಾರೆ.

ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ನಡಿ ತಯಾರಾಗ್ತಿರೋ ಅಮರ್ ಸಿನಿಮಾನ ಸಂದೇಶ್ ನಾಗರಾಜ್ ನಿರ್ಮಾಣ ಮಾಡ್ತಿದ್ದು, ಸಂಜು ವೆಡ್ಸ್ ಗೀತಾ- ಮೈನಾ ಖ್ಯಾತಿಯ ನಾಗಶೇಖರ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಬಹುತೇಕ ಟಾಕಿ ಪೋರ್ಷನ್ ಮುಗಿಸಿರೋ ಚಿತ್ರತಂಡ, ಇದೀಗ ಸ್ಟೈಲಿಶ್ ಟೀಸರ್ ಮೂಲಕ ಯಂಗ್ ರೆಬೆಲ್ ಸ್ಟಾರ್ ಗತ್ತು ಗಮ್ಮತ್ತು ಎಂಥದ್ದು ಅಂತ ತೋರಿಸಿದೆ.

ಕೇಕ್ ಕತ್ತರಿಸಿ, ಅಭಿ ಫ್ಲೆಕ್ಸ್ಗೆ ಫ್ಯಾನ್ಸ್ ಹಾಲಿನ ಅಭಿಷೇಕ..!!
ತಮ್ಮನನ್ನ ಪ್ರೀತಿಯಿಂದ ಹರಸಿ ಹಾರೈಸಿ ಎಂದ ಡಿಬಾಸ್ ದಚ್ಚು

ಹುಲಿ ಹೊಟ್ಟೇಲಿ ಹುಲಿಯೇ ಹುಟ್ಟುತ್ತೆ ಅನ್ನೋದಕ್ಕೆ ಅಮರ್ ಚಿತ್ರದ ಟೀಸರ್ ಬೆಸ್ಟ್ ಎಕ್ಸಾಂಪಲ್. ಅಷ್ಟರ ಮಟ್ಟಿಗೆ ಪ್ರಾಮಿಸಿಂಗ್ ಆಗಿದೆ ಅಭಿ ಸ್ಟೈಲು, ಮ್ಯಾನರಿಸಂ ಮತ್ತು ಡೈಲಾಗ್ ಡೆಲಿವರಿ. ಅದ್ರಲ್ಲೂ ಅಪ್ಪನ ಕಾಮನ್ ಡೈಲಾಗ್ ನೋ ವೇ ಚಾನ್ಸೇ ಇಲ್ಲ ಅನ್ನೋದು ಅಭಿ ಥೇಟ್ ಅಂಬಿ ತರಹನೇ ಹೇಳೋದು ಸಖತ್ ಕಿಕ್ ಕೊಡ್ತಿದೆ. ಇನ್ನು ಅಭಿಯನ್ನ ದೊಡ್ಡ ಪರದೆ ಮೇಲೆ ನೋಡೋಕೆ ಕಾತರರಾಗಿರೋ ಅಂಬಿ ಫ್ಯಾನ್ಸ್, ರೆಬೆಲ್ ಗೌರವ ನೀಡೋ ಮೂಲಕ ಟೀಸರ್ ನೋಡಿ ಸಂಭ್ರಮಿಸಿದ್ದಾರೆ.

ಒಂದಷ್ಟು ಮಂದಿ ಅಭಿಷೇಕ್ ಫ್ಲೆಕ್ಸ್ಗಳಿಗೆ ಹಾಲಿನ ಅಭಿಷೇಕ ಮಾಡಿದ್ರೆ, ಮತ್ತೊಂದಷ್ಟು ಮಂದಿ ಕಂಠೀರವ ಸ್ಟುಡಿಯೋ ಬಳಿ ಕೇಕ್ ಕತ್ತರಿಸಿ ಹಬ್ಬದ ರೀತಿ ಸಂಭ್ರಮಿಸಿದ್ದಾರೆ. ಇದು ಬೆಂಗಳೂರು ಹಾಗೂ ಮಂಡ್ಯಗೆ ಸೀಮಿತವಾಗದೆ, ರಾಜ್ಯಾದ್ಯಂತ ಇದೇ ರೀತಿ ಅಭಿಗೆ ಸ್ವಾಗತ ಕೋರಿದ್ದಾರೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ನನ್ನ ತಮ್ಮನ ಅಮರ್ ಟೀಸರ್ ನೋಡಿ ಪ್ರೀತಿಯಿಂದ ಹರಸಿ ಹಾರೈಸಿ ಅಂದಿರೋದು ವಿಶೇಷ.

ನನ್ನ ಪ್ರೀತಿಯ ತಮ್ಮ ಅಭಿ ಅಂಬರೀಷ್ ‘ಅಮರ್’ ಚಿತ್ರದ ಮೂಲಕ ಯಂಗ್ ರೆಬೆಲ್ ಸ್ಟಾರ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ಚಿತ್ರದ ಟೀಸರ್ ಈಗ ನಿಮ್ಮ ಮುಂದೆ ಇದೆ. ನೋಡಿ ಹರಸಿ, ಪ್ರೀತಿಯಿಂದ ಅಭಿಯನ್ನು ಬರಮಾಡಿಕೊಳ್ಳಿ.’

ಅಮರ್ ಟೀಸರ್ಗೆ ವೆಯ್ಟಿಂಗ್ ಅಂದಿದ್ರು ರಾಕಿ ಭಾಯ್..!
ಮಲೇಷಿಯಾದಿಂದಲೇ ಯಂಗ್ ರೆಬೆಲ್ ಸ್ಟಾರ್ ತಳಮಳ

ಟೀಸರ್ ರಿಲೀಸ್ಗೂ ಮುನ್ನ ನಿರ್ದೇಶಕ ನಾಗಶೇಖರ್ ಮಾಡಿದ್ದ ಮೊಬೈಲ್ ಸೆಲ್ಫಿ ವಿಡಿಯೋದಲ್ಲಿ ಸದ್ಯ ಶೂಟಿಂಗ್ ನಿಮಿತ್ತ ಮಲೇಷಿಯಾದಲ್ಲಿರೋ ಅಭಿಷೇಕ್ ಮಾತನಾಡಿದ್ದಾರೆ. ಮೊದಲ ಬಾರಿ ಟೀಸರ್ ಮೂಲಕ ಕನ್ನಡಿಗರ ಮುಂದೆ ಬರ್ತಿರೋ ಅಭಿಷೇಕ್, ದಯವಿಟ್ಟು ಹರಸಿ ಹಾರೈಸಿ ಅಂತ ಅವ್ರ ಕ್ಯೂರಿಯಾಸಿಟಿ, ತಳಮಳವನ್ನ ವ್ಯಕ್ತಪಡಿಸಿದ್ರು.

ಇನ್ನು ರಾಕಿಂಗ್ ಸ್ಟಾರ್ ಯಶ್ ಟೀಸರ್ ರಿಲೀಸ್ಗೂ ಒಂದು ದಿನ ಮೊದಲೇ ನನ್ನ ಪುಟ್ಟ ಅಮರ್ ಟೀಸರ್ಗೆ ಕೌತುಕದಿಂದ ಕಾಯ್ತಿದ್ದೀನಿ ಅಂತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ರು.

ಟೀಸರ್ ಬಿಡುಗಡೆಯೊಂದಿಗೆ ಚಿತ್ರಯಾನದ ಮೊದಲ ಅಡಿಯಿಡುತ್ತಿರುವ ಈ ಶುಭ ಘಳಿಗೆ ಇದು. ಎಲ್ಲರಿಗಿಂತಲೂ ಹೆಚ್ಚಾಗಿ ನಾಳೆಯ ಟೀಸರ್ ಗಾಗಿ ಕೌತುಕದಿಂದ ಕಾಯ್ತಾ ಇದೀನಿ. ಪೋಸ್ಟರ್ಗಳು ಸಖತ್ತಾಗಿವೆ. ನನ್ನ ಶುಭ ಹಾರೈಕೆಗಳು ‘ಎಂದೆಂದಿಗೂ- ನಿನ್ನೊಂದಿಗೆ’ ಇರುತ್ತವೆ. ನೀನೆಂದೂ ನನ್ನ ಪುಟ್ಟ ‘ಅಮರ್’.


ಒಟ್ಟಾರೆ ಅಭಿಷೇಕ್ ಇಂಡಸ್ಟ್ರಿ ಎಂಟ್ರಿಗೆ ಎಲ್ರೂ ಕಾತರರಾಗಿದ್ದು, ಟೀಸರ್ನ ಮೆಚ್ಚಿ ಕೊಂಡಾಡಿದ್ದಾರೆ. ಅಭಿಯ ಸಿನಿಯಾನ ರೆಬೆಲ್ ಹಾದಿಯಂತೆ ಸುಗಮವಾಗಿ ಸಾಗಲಿ ಅಂತ ಹಾರೈಸುತ್ತಾ ಅಭಿಯನ್ನ ಇಂಡಸ್ಟ್ರಿಗೆ ವೆಲ್ಕಮ್ ಮಾಡೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Recommended For You

Leave a Reply

Your email address will not be published. Required fields are marked *