ವಾಟಾಳ್ ನಾಗರಾಜ್ ರಿಂದ ವಿನೂತನ ಪ್ರೇಮಿಗಳ ದಿನಾಚರಣೆ

ಪ್ರೇಮಿಗಳ ದಿನವೆಂದಾಕ್ಷಣ ಕೆಟ್ಟ ಭಾವನೆ ಬರಬಾರದು, ಪ್ರಾಣಿಪಕ್ಷಿಗಳಲ್ಲೂ ಪ್ರೀತಿ ಇರುತ್ತೆ ಪಾರ್ಲಿಮೆಂಟ್ ನಲ್ಲಿ ಇವತ್ತು ಪ್ರೇಮಿಗಳ ದಿನ ಆಚರಿಸಬೇಕಿತ್ತು ಎಂದು ವಾಟಾಳ್ ನಾಗರಾಜ್ ಹೇಳಿದರು.

ಕಬ್ಬನ್ ಪಾರ್ಕ್ ನಲ್ಲಿ ಕುದುರೆಗೆ ಮದುವೆ ಮಾಡಿಸಿದ ವಾಟಾಳ್ ಪ್ರೇಮಿಗಳ ದಿನದ ಬಗ್ಗೆ ಮಾತನಾಡಿದ್ದು,  ಎರಡು ಕುದುರೆಗಳ ಜೊತೆ ಮೆರವಣಿಗೆ ಬಂದು ಸಾಂಪ್ರದಾಯಿಕವಾಗಿ ಮೆರವಣಿಗೆ ಆಗಮನವಾದರು. ಸಖತ್ ಸ್ಟೈಲಿಶ್ ಆಗಿ ಬಂದಿರುವ ವಾಟಾಳ್ ಟೋಪಿ ಬಿಟ್ಟು ಕಲರ್ ಫುಲ್ ವಿಗ್ ಹಾಕಿದರು.

ಪ್ರತಿ ವರ್ಷ ನಾವೂ ವಿನೂತನವಾಗಿ ಆಚರಣೆ ಮಾಡ್ತೇವೆ , ರಸ್ತೆಯುದ್ಧಕ್ಕೂ ಗುಲಾಬಿ ಕೊಡುವ ಮೂಲಕ ಪ್ರೆಮಿಗಳ ದಿನಕ್ಕೆ ಹೊಸ ರಂಗು ಕೊಡುತ್ತೇವೆ.  ಕೆಲವರು ಟೀಕೆ ಮಾಡ್ತಾರೆ ಎಂದರು.

ಕುಮಾರಸ್ವಾಮಿ ಅವ್ರ ಹೆಂಡ್ತಿ-ಮಕ್ಕಳು, ದೇವೆಗೌಡರು ಅವ್ರ ಹೆಂಡ್ತಿ ಯಡಿಯೂರಪ್ಪ ಅವ್ರ ಮಕ್ಕಳ ಜೊತೆ ಆಚರಿಸಬೇಕಿತ್ತು ಸ್ಪೀಕರ್ ರಮೇಶ್ ಕುಮಾರಗ ಅವ್ರನ್ನೆಲ್ಲಾ ಕರೆಸಿ ಪ್ರೇಮಿಗಳ ದಿನ ಆಚರಿಸ್ಬೇಕಿತ್ತು,  ಪ್ರೇಮಿಗಳು ಹೆದರದೆ ಕಬ್ಬನ್ ಪಾರ್, ಲಾಲ್ ಬಾಗ್ ನಲ್ಲಿ ಖುಷಿ ಖುಷಿಯಾಗಿ ಲವರ್ಸ್ ಡೇ ಆಚರಿಸಿ ಎಂದರು.

ಸರ್ಕಾರ ಪ್ರೇಮಿಗಳಿಗೆ 2 ಲಕ್ಷ ಹಣ ಕೊಡಬೇಕು ಕಳೆದ ಬಾರಿ ಒಂದೂವರೆ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದೆ ಈ ಬಾರಿ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದೀನಿ ಈ ಬಾರಿ ಖರ್ಚು ಹೆಚ್ಚಾಗಿರುವ ಹಿನ್ನೆಲೆ ಎಂದರು .