ಮೂರು ಪಕ್ಷದವರ ಆಟ ಪೇಜಾವರ ಶ್ರೀಗಳಿಗೆ ತಂದಿದೆ ಸಂಕಟ..!

ರಾಯಚೂರು: ಪ್ರಸ್ತುತ ರಾಜಕೀಯ ಬೆಳವಣಿಗೆ ನನಗೆ ಬೇಸರ ಉಂಟು ಮಾಡಿದೆ ಎಂದು ಉಡುಪಿ ಶ್ರೀಕೃಷ್ಣ ಮಠ ಪೇಜಾವರ ಶ್ರೀಗಳು ಹೇಳಿಕೊಂಡಿದ್ದಾರೆ.

ರಾಯಚೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶ್ರೀಗಳು, ಮೂರು ಪಕ್ಷಗಳು ಕಾರ್ಯ ವೈಖರಿ, ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯ ಎಲ್ಲವೂ ಬೇಸರ ಉಂಟು ಮಾಡಿದ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು, ರಾಜಕೀಯ ಪಕ್ಷಗಳು ನಿರೀಕ್ಷಿತ ಮಟ್ಟಕ್ಕೆ ಕೆಲಸ ನಿರ್ವಹಿಸುತ್ತಿಲ್ಲ, ಜನರಿಗೆ ಈ ರಾಜಕೀಯದ ಬಗ್ಗೆ ಬೇಸರವಾಗಿದ್ದು, ಆಡಿಯೋ ರಿಲಿಸ್ ಬಗ್ಗೆ ತನಿಖೆ ಯಾರಿಗಾದರೂ
ವಹಿಸಲಿ ಆದರೆ ನ್ಯಾಯಯುತವಾಗಿ ತನಿಖೆ ಮಾಡಲಿ ಎಂದು ಉಡುಪಿ ಶ್ರೀ ಮಠದ ಶ್ರೀಗಳು ತಿಳಿಸಿದ್ದಾರೆ.

ಒಟ್ಟಾರೆ ಪ್ರಸ್ತುತ ರಾಜಕೀಯದ ಬಗ್ಗೆ ಹಣದ ವ್ಯವಹಾರದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಪೇಜಾವರ ಶ್ರೀಗಳು ರಾಜ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಬೇಸರ ಹೊರಹಾಕಿದ್ದಾರೆ.