ಈ ಮಾಜಿ ಸ್ಪೀಕರ್ ಪೊಲೀಸ್ ಅಧಿಕಾರಿಗೆ ಬೆವರಿಳಿಸಿದ್ದು ಏಕೆ..?

ಮೊದಲ ಬಾರಿಗೆ ನಮ್ಮೆಲ್ಲರ ಸಹೋದರ ಪ್ರೀತಮ್ ಗೌಡ ಆಯ್ಕೆಯಾದ ಮೇಲೆ ಹಾಸನದಲ್ಲಿ ಜೆಡಿಎಸ್​ನವರು ಗೂಂಡಾರಾಜ್ಯ ಮಾಡ್ತಿದ್ದಾರೆ, ಎಸ್ಪಿ ಈ ಬಗ್ಗೆ ಉತ್ತರ ನೀಡಬೇಕು ಎಂದು ಮಾಜಿ ಸ್ಪೀಕರ್ ಕೆ. ಜಿ. ಬೋಪಯ್ಯ ಹೇಳಿದ್ದಾರೆ.

ಪೊಲೀಸರಿಗೆ ಮಾನಮರ್ಯಾದೆ ಇದೆಯಾ

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ, ಪೊಲೀಸರಿಗೆ ಮಾನಮರ್ಯಾದೆ ಇದೆಯಾ, ಕೊಲೆಪ್ರಯತ್ನ ಅಂತಾ ಇದ್ದರೂ ಯಾಕೆ 307 ಸಕ್ಷನ್ ಹಾಕಿಲ್ಲಾ ಎಂದು ಪ್ರಶ್ನೆ ಮಾಡಿದರು.

ಕಾರ್ಯಕರ್ತನ ಮುಟ್ಟಿದ್ರೆ ಸುಮ್ಮನಿರಲ್ಲಾ

ರಾಹುಲ್ ಕಿಣಿ ಎಂಬ ಗಾಯಾಳುವಿನ ಜೀವ ಹೋಗುವಂತಾಗಿದೆ, ಗೂಂಡಾಗಿರಿಗಳಿಗೆ ಸುಲಭವಾಗಿ ಜಾಮೀನು ಸಿಗುವಂತೆ ಮಡಿದ್ದೀರಾ. ಹಿಂದೆ ಉತ್ತರ ಭಾರತದಲ್ಲಿ ನಡೆದಿತ್ತು, ಬಿಜೆಪಿ‌ ಅಧಿಕಾರಕ್ಕೆ ಬಂದ ಮೇಲೆ ಅವರು ಎಲ್ಲಿದ್ದಾರೆಂದು ಗೊತ್ತಿಲ್ಲ, ಹಾಸನದಲ್ಲೂ ಅದೇ ರೀತಿ ಆಗುತ್ತದೆ, ಇಲ್ಲಿ ಬಂದು ಚಪ್ಪಲಿಯಲ್ಲಿ ಹೊಡೀತೀರಿ, ಪೊಲೀಸರ ಕೇವಲ ಮೂರು ಮಂದಿ ಇದ್ದಾರೆ, ನಿಮಗೆ ಮಾನ ಮರ್ಯಾದೆ ಇದೆಯಾ ಇನ್ನು ಯಾವುದೇ ಕಾರ್ಯಕರ್ತನ ಮುಟ್ಟಿದ್ರೆ ಸುಮ್ಮನಿರಲ್ಲಾ ಎಂದು ಕಿಡಿಕಾರಿದರು.