ಬಿಜೆಪಿ ಬಾಯಿಮುಚ್ಚಿಸಲು ಸಮಿಶ್ರ ಸರ್ಕಾರಕ್ಕೆ ಮತ್ತೊಂದು ಪ್ರಬಲ ಅಸ್ತ್ರ..!

ಬೆಂಗಳೂರು: ಪ್ರೀತಂಗೌಡ ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿದಂತೆ ನವೀನ್ ಗೌಡ ನವಕರ್ನಾಟಕ ಸೇನೆ ಫೇಸ್ ಬುಕ್ ಅಕೌಂಟ್ ಹೆಸರಿನಲ್ಲಿ ಬಿಜೆಪಿ ಕೈವಾಡ ಇರುವ ಆಡಿಯೋ ಪೋಸ್ಟ್ ಮಾಡಲಾಗುವುದು ಎಂದು ಹೇಳಲಾಗಿತ್ತು.

ನವೀನಗೌಡ ನವಕರ್ನಾಟಕ ಸೇನೆ ಹೆಸರಿನಲ್ಲಿ ಬಿಜೆಪಿ ಕೈವಾಡವಿದೆ ಎಂದು ಮಧ್ಯಾಹ್ನ 2:30ಕ್ಕೆ ಈ ಸಂಬಂಧ ಆಡಿಯೋ ರಿಲೀಸ್ ಮಾಡೋದಾಗಿ ಪೋಸ್ಟ್ ಮಾಡಿದ್ದ ನವೀನ್ ಗೌಡ ನವಕರ್ನಾಟಕ ಸೇನೆ ಫೇಸ್ ಬುಕ್ ಖಾತೆಯಲ್ಲಿ ನಿನ್ನೆ ಬರೆದುಕೊಂಡಿತ್ತು.

ಇನ್ನು,  ನಗರದ ಪ್ರೆಸ್ ಕ್ಲಬ್ ನಲ್ಲಿ ಆಡಿಯೋ ರಿಲೀಸ್ ಮಾಡೋದಾಗಿ ಪೋಸ್ಟ್ ಹೇಳಿದ ಫೇಸ್ ಬುಕ್ ಖಾತೆದಾರರ ಇನ್ನೂ, ಕೂಡ ಪ್ರೆಸ್ ಕ್ಲಬ್ ಗೆ ಬಾರದ ನವೀನಗೌಡ. ನಿಜಕ್ಕೂ‌ವ ಆಡಿಯೋ ಸಿಕ್ಕಲ್ಲಿ  ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ?

ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ನಾಯಕರನ್ನು ಭೇಟಿ ಮಾಡಿರೋದಾಗಿ ಪೋಸ್ಟ್ ಮಾಡಿಕೊಂಡಿರುವ ನವೀನ್ ಗೌಡ, ಈಗಾಗ್ಲೇ ರಾಜ್ಯದಲ್ಲಿ ಎರಡು ಆಡಿಯೋ ರಿಲೀಸ್ ಆಗಿದ್ದು ರಾಜ್ಯದ ಜನ್ರು ಬೇಸತ್ತಿದ್ದಾರೆ. ಜೊತೆಗೆ ಜನರೇ ಪ್ರೀತಂ ಗೌಡ ಅವರಿಗೆ ಬುದ್ದಿ ಕಲಿಸಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಳ್ಳಲಿ ಆಡಿಯೋ ಬಿಡುಗಡೆ ಮಾಡಿವುದು ಬೇಡಾ ಸಮಯ ಬಂದಾಗ ಮುಂದೆ ಬರುತ್ತೇನೆ‌ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ ನವೀನ್ ಗೌಡ.