ಪ್ರೀತಮ್ ಗೌಡ ಹಲ್ಲೆ ಪ್ರಕರಣ ಬಿಜೆಪಿ ನಡೆ ಭಾರೀ ಕುತೂಹಲದ ಕಡೆ..!

ಬೆಂಗಳೂರು: ಹಾಸನ ಬಿಜೆಪಿ ಶಾಸಕ ಪ್ರೀತಮ್ ಗೌಡ ನಿವಾಸದ ಮೇಲೆ ದಾಳಿ ಪ್ರಕರಣ ಸಂಬಂಧಿಸಿದಂತೆ ಇಂದು ಬಿಜೆಪಿ ಶಾಸಕರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ.

ರಾಜ್ಯಪಾಲರ ಭೇಟಿಗೂ ಮುನ್ನ ಶಾಸಕರ ಜೊತೆ ಸಮಾಲೋಚನೆ ನಡೆಸಲಿರುವ ವಿಧಾನಸಭೆ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಚರ್ಚೆಯ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಲು ನಿರ್ಧಾರಿಸಿಲಾಗಿದೆ.

ವಿಧಾನಸೌಧದಿಂದ ಒಟ್ಟಾಗಿ ತೆರಳಿ ೧೦.೩೦ಕ್ಕೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಲಿರುವ ಬಿಜೆಪಿ ಶಾಸಕರ ನಿಯೋಗ ನಡೆದ ಘಟನೆ ಬಗ್ಗೆ ವಿವರಣೆ ನೀಡಲಿದ್ದಾರೆ.

ಪ್ರೀತಂ ಗೌಡ ನಿವಾಸದ ಮೇಲೆ ಜೆಡಿಎಸ್ ದಾಳಿ ಪ್ರಕರಣ ವಿಚಾರವಾಗಿ ರಾಜ್ಯಪಾಲರ ಬಳಿ ದೂರು ನೀಡಲಿರುವ ಬಿಜೆಪಿ ನಿಯೋಗ ನಂತರ ಮುಂದಿನ ನಡೆ ಬಗ್ಗೆ ನಿರ್ಧಾರ ಮಾಡಲಿರುವ ಬಿಜೆಪಿ.