ಕುಮಾರಸ್ವಾಮಿಗೆ ರಾಜಕುಮಾರ್ ಸಿನಿಮಾದ ಡೈಲಾಗ್ ನೆನಪಿಸಿದ್ರು – ಪ್ರತಾಪ್ ಸಿಂಹ

ಮೈಸೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಯೋಗ ಒಮ್ಮೆ ಬರುತ್ತೆ, ಯೋಗ್ಯತೆ ಶಾಶ್ವತವಾಗಿರುತ್ತೇ ಯೋಗ್ಯತೆ ಬೆಳಿಸಿಕೊಂಡು ಅಧಿಕಾರ ನಡೆಸಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಯೋಗ ಒಮ್ಮೆ ಬರುತ್ತೆ, ಯೋಗ್ಯತೆ ಶಾಶ್ವತವಾಗಿರುತ್ತೇ ಯೋಗ್ಯತೆ ಬೆಳಿಸಿಕೊಂಡು ಅಧಿಕಾರ ನಡೆಸಿಕೊಂಡು ಹೋಗಿ ಎಂದರು.

ಇನ್ನು, ಮಾತು ಮುಂದುವರೆಸಿದ ಅವರು, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮಾಡಿರುವ ಪಿತೂರಿ ಈ ಆಡಿಯೋ ಟೇಪ್ ಆಗಿದೆ. ಇಂತಹ ಆಡಿಯೋ, ವಿಡಿಯೋಗೆ ನಾವು ಬ್ಯಾಲೆಟ್ ಪೇಪರ್ ನಲ್ಲಿ ಉತ್ತರ ಕೊಡಬೇಕು ಎಂದು ಕೀಡಿಕಾರಿದರು.

ಹಾಸನದಲ್ಲಿ ಜೆಡಿಎಸ್ ಬುಡಕ್ಕೆ ಬೆಂಕಿ ಬಿದ್ದಿದ್ದು, ಹೆಚ್.ಡಿ ರೇವಣ್ಣ ಒಬ್ಬ ಸಣ್ಣ ಮನಸಿನ ವ್ಯಕ್ತಿಯಾಗಿದ್ದಾರೆ. ಅರಬ್ ನಲ್ಲಿ ಕಲ್ಲು ಒಡೆಯುವ ಸಂಸ್ಕೃತಿ ನೋಡಿದ್ದೇವೆ. ಆ ಸಂಸ್ಕೃತಿ ಈಗ ಹಾಸನದಲ್ಲಿ ಬಂದಿದೆ ಎಂದು ಪ್ರತಾಪ್ ಸಿಂಹ ಆಕ್ರೋಶಗೊಂಡರು.