ಜೆಡಿಎಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ

ಇದೊಂದು ಹೇಡಿ ಮತ್ತು ಹೀನ ಕೃತ್ಯ, ಪ್ರೀತಂಗೌಡನನ್ನು ರಾಜಕೀಯವಾಗಿ ಮಾತ್ರವಲ್ಲ, ದೈಹಿಕವಾಗಿಯು ಮುಗಿಸಲು ನಡೆದ ಪ್ರಯತ್ನ ಎಂದು ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಗುರುವಾರ ಮಾತನಾಡಿದ ಅವರು, ಶಾಸಕ ಪ್ರೀತಂಗೌಡ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರ ದಾಳಿ ಪ್ರಕರಣಕ್ಕೆ ಸಂಭಂದಿಸಿದಂತೆ ಪ್ರತಿಕ್ರಿಯೇ ನೀಡಿದ್ದು, ಇದೊಂದು ವ್ಯವಸ್ಥಿತ ಪಿತೂರಿಯಿಂದ ನಡೆದ ಕೃತ್ಯ.
ಕಾರ್ಯಕರ್ತ ಕೀಣಿ ಕಣ್ಣಿಗೆ ಈಗಾಗಲೇ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸನದಲ್ಲಿ ಜೆಡಿಎಸ್ ಬೇರು ಅಲಾಗಾಡುತ್ತಿದೆ. ಅದಕ್ಕಾಗಿ ಈ ರೀತಿಯ ದಾಳಿ ಯತ್ನಗಳು ನಡೆಯುತ್ತಿವೆ. ಇದಕ್ಕೆ ನಾವು ಯಾವುದೇ ಕಾರಣಕ್ಕು ಹೆದರಲ್ಲ ಎಂದು ಜೆಡಿಎಸ್ ವಿರುದ್ಧ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.

ಜನರಿಂದ ತಿರಸ್ಕೃತಗೊಂಡವರು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಈ ವೇಳೆ ನಾವು ಸರ್ಕಾರ ರಚಿಸಲು ಮಾಡಿರುವ ಪ್ರಯತ್ನದಲ್ಲಿ ತಪ್ಪೇನಿದೆ. ಇದನ್ನೆ ನೆಪ ಇಟ್ಟುಕೊಂಡು ಬಿಜೆಪಿ ಮೇಲೆ ದಾಳಿ ಮಾಡೋದು ಇದೇ ರೀತಿ ಪುಂಡಾಟ ಮಾಡಿ ಅಧಿಕಾರ ಪಡೆದಿದ್ದಾರೆ. ಆಡಿಯೋ ಪ್ರಕರಣವನ್ನ ಮುಂದಿಟ್ಟು ಜನರಿಗೆ ತಂತ್ರ ಮಾಡಿದ್ದಾರೆ. ಜೆಡಿಎಸ್ ಯುವಕನನ್ನು ಚೂ ಬಿಟ್ಟು ಆಡಿಯೋ ಮಾಡಿಸಿದ್ದಾರೆ. ಇದು ಬಿಜೆಪಿ ಹಾಗೂ ಯಡಿಯೂರಪ್ಪನವ್ರನ್ನು ಮುಗಿಸಲು ನಡೆದ ಷಡ್ಯಂತ್ರ ಎಂದು ಪ್ರತಾಪ್ ಸಿಂಹ ಹೇಳಿದರು.